Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕದನ ವಿರಾಮದ ನಡುವೆಯೂ, ವಶಪಡಿಸಿಕೊಂಡ ಇರಾನ್ ಹಣವನ್ನು ಗಲ್ಫ್ ಮಿತ್ರರಾಷ್ಟ್ರಗಳ ಪುನರ್ನಿರ್ಮಾಣಕ್ಕೆ ಬಳಸಲು ಅಮೇರಿಕಾ ಯೋಜನೆ!

BIG NEWS : ಗ್ರಾಹಕರಿಗೆ ಗುಡ್ ನ್ಯೂಸ್ : `ಅಡುಗೆ ಎಣ್ಣೆ ಪ್ಯಾಕೇಜಿಂಗ್’ ಗಾತ್ರದಲ್ಲಿ ಏಕರೂಪತೆ ಕಡ್ಡಾಯ!

​ಅಮೆರಿಕದ ಟೊಲೆಡೊದಲ್ಲಿ ದುರಂತ: ಓಲ್ಡ್ ವೆಸ್ಟ್ ಎಂಡ್ ಫೆಸ್ಟಿವಲ್ ಬಳಿ ಗುಂಡಿನ ದಾಳಿ, 12ಕ್ಕೂ ಹೆಚ್ಚು ಮಂದಿಗೆ ಗಾಯ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾವನ್ನಪ್ಪಿದ ಪುಟಾಣಿಗಳಿಗಾಗಿ ಸಾಲು ಸಾಲು ಸಮಾಧಿ: ಇರಾನ್ ಹಂಚಿಕೊಂಡ ಫೋಟೋ ಕಂಡು ವಿಶ್ವವೇ ಸ್ತಬ್ದ!
WORLD

ಸಾವನ್ನಪ್ಪಿದ ಪುಟಾಣಿಗಳಿಗಾಗಿ ಸಾಲು ಸಾಲು ಸಮಾಧಿ: ಇರಾನ್ ಹಂಚಿಕೊಂಡ ಫೋಟೋ ಕಂಡು ವಿಶ್ವವೇ ಸ್ತಬ್ದ!

By ವಸಂತ ಬಿ ಈಶ್ವರಗೆರೆ

ಇರಾನ್: ಅಮೆರಿಕ ಮತ್ತು ಇರಾನ್ ನಡುವಿನ ಸೇನಾ ಸಂಘರ್ಷ ತಾರಕಕ್ಕೇರಿದ್ದು, ಈ ಯುದ್ಧದ ಅಟ್ಟಹಾಸಕ್ಕೆ ಅಮಾಯಕ ಜೀವಗಳು ಬಲಿಯಾಗುತ್ತಿವೆ. ಇರಾನ್‌ನ ದಕ್ಷಿಣ ಭಾಗದ ಮಿನಾಬ್ ನಗರದ ಪ್ರಾಥಮಿಕ ಶಾಲೆಯೊಂದರ ಮೇಲೆ ನಡೆದ ಅಮೆರಿಕ ಮತ್ತು ಇಸ್ರೇಲ್‌ನ ಜಂಟಿ ವೈಮಾನಿಕ ದಾಳಿಯು ಜಗತ್ತನ್ನೇ ನಡುಗಿಸಿದೆ. ಈ ದಾಳಿಯಲ್ಲಿ ಬಲಿಯಾದ 165 ಪುಟ್ಟ ವಿದ್ಯಾರ್ಥಿನಿಯರಿಗಾಗಿ ಸಾಲು ಸಾಲಾಗಿ ಸಮಾಧಿಗಳನ್ನು ತೋಡುತ್ತಿರುವ ಹೃದಯವಿದ್ರಾವಕ ಫೋಟೋ ಈಗ ಯುದ್ಧದ ಭೀಕರತೆಗೆ ಸಾಕ್ಷಿಯಾಗಿದೆ.

ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಗ್ಚಿ ಅವರು ಸಾಮಾಜಿಕ ಜಾಲತಾಣ ‘X’ ನಲ್ಲಿ ಹಂಚಿಕೊಂಡಿರುವ ಈ ಫೋಟೋದಲ್ಲಿ, ಮೈದಾನವೊಂದರಲ್ಲಿ ನೂರಾರು ಸಮಾಧಿಗಳನ್ನು ಸಿದ್ಧಪಡಿಸಿರುವುದು ಕಂಡುಬಂದಿದೆ. ಬಿಳಿ ಸುಣ್ಣದ ಪುಡಿಯಿಂದ ಗುರುತು ಮಾಡಲಾದ ಈ ಶವಕುಳಿಗಳ ಮುಂದೆ ಪೋಷಕರು ಮತ್ತು ಸಂಬಂಧಿಕರು ಕಣ್ಣೀರಿಡುತ್ತಾ ನಿಂತಿರುವ ದೃಶ್ಯ ಮನಕಲಕುವಂತಿದೆ.

These are graves being dug for more than 160 innocent young girls who were killed in the US-Israeli bombing of a primary school. Their bodies were torn to shreds.

This is how "rescue" promised by Mr. Trump looks in reality.

From Gaza to Minab, innocents murdered in cold blood. pic.twitter.com/cRdJ3BELOn

— Seyed Abbas Araghchi (@araghchi) March 2, 2026

“ಅಮೆರಿಕ-ಇಸ್ರೇಲ್ ಬಾಂಬ್ ದಾಳಿಗೆ ಬಲಿಯಾದ 160ಕ್ಕೂ ಹೆಚ್ಚು ಅಮಾಯಕ ಹೆಣ್ಣುಮಕ್ಕಳಿಗಾಗಿ ಈ ಸಮಾಧಿಗಳನ್ನು ತೋಡಲಾಗುತ್ತಿದೆ. ಅವರ ದೇಹಗಳು ಛಿದ್ರಛಿದ್ರವಾಗಿವೆ. ಗಜಾದಿಂದ ಮಿನಾಬ್‌ವರೆಗೆ ಅಮಾಯಕರನ್ನು ಬರ್ಬರವಾಗಿ ಕೊಲ್ಲಲಾಗುತ್ತಿದೆ” ಎಂದು ಅರಾಗ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿರುವ ಇರಾನ್ ರಾಯಭಾರ ಕಚೇರಿಯೂ ಈ ಬಗ್ಗೆ ಪ್ರತಿಕ್ರಿಯಿಸಿದ್ದು, “ಪುಟ್ಟ ದೇವತೆಗಳಿಗಾಗಿ ಸಣ್ಣ ಸಮಾಧಿಗಳು; ಮಿನಾಬ್‌ನ ಈ ಶಾಲಾ ಮಕ್ಕಳು ಈಗ ಸ್ವರ್ಗದಲ್ಲಿ ಜೊತೆಯಾಗಿದ್ದಾರೆ” ಎಂದು ಭಾವುಕವಾಗಿ ಬರೆದುಕೊಂಡಿದೆ.

ಘಟನೆಯ ವಿವರ:

ಇರಾನ್‌ನ ಅಧಿಕೃತ ಸುದ್ದಿ ಸಂಸ್ಥೆ ‘IRNA’ ವರದಿಯ ಪ್ರಕಾರ, ಈ ಭೀಕರ ದಾಳಿಯಲ್ಲಿ 165 ವಿದ್ಯಾರ್ಥಿನಿಯರು ಸಾವನ್ನಪ್ಪಿದ್ದು, 96 ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಶಾಲೆಯ ಕಟ್ಟಡವು ಸಂಪೂರ್ಣವಾಗಿ ನೆಲಸಮವಾಗಿದ್ದು, ರಕ್ಷಣಾ ಕಾರ್ಯಕರ್ತರು ಅವಶೇಷಗಳ ಅಡಿಯಿಂದ ಮಕ್ಕಳ ಶಾಲಾ ಬ್ಯಾಗ್‌ಗಳು ಮತ್ತು ಪುಸ್ತಕಗಳನ್ನು ಹೊರತೆಗೆಯುತ್ತಿರುವ ವಿಡಿಯೋಗಳು ಹರಿದಾಡುತ್ತಿವೆ.

ಅಂತರಾಷ್ಟ್ರೀಯ ಮಟ್ಟದಲ್ಲಿ ಆಕ್ರೋಶ:

ವಿಶ್ವಸಂಸ್ಥೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿರುವ ಇರಾನ್, ನಾಗರಿಕ ಮೂಲಸೌಕರ್ಯಗಳ ಮೇಲೆ ನಡೆದ ಈ ದಾಳಿಯನ್ನು “ಯುದ್ಧಾಪರಾಧ” ಮತ್ತು “ಮಾನವೀಯತೆಯ ವಿರುದ್ಧದ ಅಪರಾಧ” ಎಂದು ಕರೆದಿದೆ. ಆದರೆ, ಇಸ್ರೇಲ್ ಸೇನೆಯು ತನಗೆ ಇಂತಹ ಯಾವುದೇ ದಾಳಿಯ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದರೆ, ಅಮೆರಿಕ ಸೇನೆಯು ನಾಗರಿಕ ಸಾವುನೋವುಗಳ ವರದಿಯನ್ನು ಪರಿಶೀಲಿಸುತ್ತಿರುವುದಾಗಿ ತಿಳಿಸಿದೆ.

ಒಟ್ಟಾರೆಯಾಗಿ, ಬಲಿಷ್ಠ ರಾಷ್ಟ್ರಗಳ ನಡುವಿನ ಅಧಿಕಾರದ ಹಪಾಹಪಿಗೆ ತಳಮಟ್ಟದಲ್ಲಿ ಶಾಲಾ ಮಕ್ಕಳು ಮತ್ತು ನಾಗರಿಕರು ಬೆಲೆ ತೆರುತ್ತಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಟೀಕೆಗೆ ಗುರಿಯಾಗಿದೆ.

BIG BREAKING: ಭಾರತದಲ್ಲಿ ‘ಅಶ್ಲೀಲ ಕಂಟೆಂಟ್‌’ಗೆ ಬ್ರೇಕ್ ಹಾಕಿದ ಎಲಾನ್ ಮಸ್ಕ್‌ನ ‘X’ | Elon Musk’s X

ಬಿಜೆಪಿ ಎಷ್ಟೇ ಹುಳಿ ಹಿಂಡಿದ್ರು, ನನ್ನ, ಡಿಕೆ ಶಿವಕುಮಾರ್ ಹಾಲು ಜೇನಿನಂತ ಸಂಬಂಧದ ಮೇಲೆ ಯಾವುದೇ ಪರಿಣಾಮ ಬೀರಲ್ಲ : ಸಿಎಂ

Share. Facebook Twitter LinkedIn WhatsApp Email

Related Posts

BREAKING : ಪಾಕಿಸ್ತಾನದಲ್ಲಿ ಸೇನೆಯಿಂದ 17 ಭಯೋತ್ಪಾದಕರ ಹತ್ಯೆ.!

1 Min Read
ಟ್ರಂಪ್ ಮತ್ತು ನೆತನ್ಯಾಹು ರಾಜತಾಂತ್ರಿಕ ಮಾತುಕತೆ

ನೀನು ಹುಚ್ಚ, ನೆತನ್ಯಾಹು ವಿರುದ್ಧ ಟ್ರಂಪ್‌ ಕೆಂಡಾಮಂಡಲ

3 Mins Read

BREAKING : ಅಮೆರಿಕದ ಮಸ್ಕಟೈನ್‌ ನಲ್ಲಿ ಭೀಕರ ಗುಂಡಿನ ದಾಳಿ : ಶಂಕಿತ ಸೇರಿದಂತೆ 7 ಜನರು ಸಾವು | Shootout in America

1 Min Read
Recent News

ಕದನ ವಿರಾಮದ ನಡುವೆಯೂ, ವಶಪಡಿಸಿಕೊಂಡ ಇರಾನ್ ಹಣವನ್ನು ಗಲ್ಫ್ ಮಿತ್ರರಾಷ್ಟ್ರಗಳ ಪುನರ್ನಿರ್ಮಾಣಕ್ಕೆ ಬಳಸಲು ಅಮೇರಿಕಾ ಯೋಜನೆ!

BIG NEWS : ಗ್ರಾಹಕರಿಗೆ ಗುಡ್ ನ್ಯೂಸ್ : `ಅಡುಗೆ ಎಣ್ಣೆ ಪ್ಯಾಕೇಜಿಂಗ್’ ಗಾತ್ರದಲ್ಲಿ ಏಕರೂಪತೆ ಕಡ್ಡಾಯ!

​ಅಮೆರಿಕದ ಟೊಲೆಡೊದಲ್ಲಿ ದುರಂತ: ಓಲ್ಡ್ ವೆಸ್ಟ್ ಎಂಡ್ ಫೆಸ್ಟಿವಲ್ ಬಳಿ ಗುಂಡಿನ ದಾಳಿ, 12ಕ್ಕೂ ಹೆಚ್ಚು ಮಂದಿಗೆ ಗಾಯ!

ಸಾರ್ವಜನಿಕರಿಗೆ ಜೀರೋ ಟ್ರಾಫಿಕ್ ತೊಂದರೆ ತಪ್ಪಿಸಲು ಮೆಟ್ರೋ ಮೊರೆ ಹೋದ ಸಿಎಂ ಡಿಕೆಶಿ : ಇಂದು ನಮ್ಮ ಮೆಟ್ರೋದಲ್ಲಿ ಪ್ರಯಾಣ

State News
KARNATAKA

ಸಾರ್ವಜನಿಕರಿಗೆ ಜೀರೋ ಟ್ರಾಫಿಕ್ ತೊಂದರೆ ತಪ್ಪಿಸಲು ಮೆಟ್ರೋ ಮೊರೆ ಹೋದ ಸಿಎಂ ಡಿಕೆಶಿ : ಇಂದು ನಮ್ಮ ಮೆಟ್ರೋದಲ್ಲಿ ಪ್ರಯಾಣ

By kannadanewsnow57 KARNATAKA 1 Min Read

ಬೆಂಗಲೂರು : ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ “ಜೀರೋ ಟ್ರಾಫಿಕ್” ಕಾರು ಪ್ರಯಾಣವನ್ನು ತಪ್ಪಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು…

BIG NEWS : ರಾಜ್ಯದ ಕಂದಾಯ ಇಲಾಖೆ ಸಿಬ್ಬಂದಿಗಳಿಗೆ ಗುಡ್ ನ್ಯೂಸ್ : `ಮುಂಬಡ್ತಿ’ ಪ್ರಕ್ರಿಯೆಗೆ ಸರ್ಕಾರ ಮಹತ್ವದ ಆದೇಶ

ಹುಟ್ಟಿದ ದಿನಾಂಕದಲ್ಲಿದೆ ಮಗುವಿನ ಭವಿಷ್ಯ: ನಿಮ್ಮ ಮಗು ಎಷ್ಟು ಜೀನಿಯಸ್ ಅಂತ ಜಸ್ಟ್ ಹೀಗೆ ತಿಳಿಯಿರಿ!

ರಾಜ್ಯದ ಜನತೆಯ ಗಮನಕ್ಕೆ : ‘ಬಾಪೂಜಿ ಸೇವಾ ಕೇಂದ್ರ’ಗಳಲ್ಲಿ ಯಾವ ಸೇವೆಗೆ ಎಷ್ಟು ಹಣ? ಇಲ್ಲಿದೆ ಸಂಪೂರ್ಣ ಮಾಹಿತಿ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.