ಚಿತ್ರದುರ್ಗ: ಮುರುಘಾ ಶ್ರೀಗಳ ವಿರುದ್ಧದ ಪೋಸ್ಕೋ ಕೇಸ್ ಪ್ರಕರಣದಲ್ಲಿ, ಇಂದು 3ನೇ ಆರೋಪಿಯಾಗಿರುವಂತ ಮಠದ ಉತ್ತರಾಧಿಕಾರಿಗೆ ಚಿತ್ರದುರ್ಗದ ಬಾಲ ನ್ಯಾಯ ಮಂಡಳಿಯಿಂದ ಮಧ್ಯಂತರ ಜಾಮೀನು ಮಂಜೂರು ಮಾಡಲಾಗಿದೆ.
ಉನ್ನತ ಶಿಕ್ಷಣ ಪರಿಷತ್ತಿಗೆ ಮೈಂಡ್ ಟ್ರೀ ಸಿಇಒ ಸೇರಿ 10 ಮಂದಿ ನಾಮನಿರ್ದೇಶನ – ಸಚಿವ ಅಶ್ವತ್ಥನಾರಾಯಣ
ಇಂದು ಈ ಸಂಬಂಧದ ಅರ್ಜಿಯ ವಿಚಾರಣೆಯನ್ನು ಚಿತ್ರದುರ್ಗದ ಬಾಲ ನ್ಯಾಯ ಮಂಡಳಿಯಿಂದ ನಡೆಸಲಾಯಿತು. ಈ ವೇಳೆ ಮುರುಘಾ ಶ್ರೀ ವಿರುದ್ಧದ ಪೋಸ್ಕೋ ಕೇಸ್ ನಲ್ಲಿ 3ನೇ ಆರೋಪಿಯಾಗಿರುವಂತ ಮಠದ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿರುವಂತ ಬಸವಾದಿತ್ಯ ಕೂಡ ತಮ್ಮ ವಕೀಲರ ಮೂಲಕ ಹಾಜರಾಗಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ಬಾಲ ನ್ಯಾಯ ಮಂಡಳಿಯು, ಬಸವಾದಿತ್ಯಗೆ ಮಧ್ಯಂತರ ಜಾಮೀನನ್ನು ಮಂಜೂರು ಮಾಡಿದೆ. ಈ ಮೂಲಕ ಮುರುಘಾ ಶ್ರೀಗಳ ವಿರುದ್ಧದ ಪೋಸ್ಕೋ ಕೇಸ್ ನ 1 ಮತ್ತು 2ರಲ್ಲಿ ಜಾಮೀನು ಪಡೆದಂತೆ ಆಗಿದೆ.