Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

ದಂಪತಿಗಳ ಲೈಂಗಿಕ ಜೀವನ ಸುಧಾರಿಸಲು ಈ ಒಂದು ಸರಳ ಅಭ್ಯಾಸ ಸಾಕು: ಸಂಶೋಧನೆಯಿಂದ ದೃಢ!

ದಂಪತಿಗಳ ನಡುವಿನ ಅನ್ಯೋನ್ಯತೆ ಹೆಚ್ಚಿಸಲು ಹೊಸ ಪ್ರಯೋಗ: ವೈವಾಹಿಕ ಜೀವನಕ್ಕೆ ಮರುಜೀವ ನೀಡಿದ ‘ನಗ್ನ ಛಾಯಾಚಿತ್ರ’

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಸಂಜೀವಿನಿ ಯೋಜನೆಗೆ ನೋಂದಣಿ ಬಗ್ಗೆ ಇಲ್ಲಿದೆ ಮಾಹಿತಿ
KARNATAKA

ರಾಜ್ಯ ಸರ್ಕಾರಿ ನೌಕರರಿಗೆ ಕರ್ನಾಟಕ ಸಂಜೀವಿನಿ ಯೋಜನೆಗೆ ನೋಂದಣಿ ಬಗ್ಗೆ ಇಲ್ಲಿದೆ ಮಾಹಿತಿ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯ ಸರ್ಕಾರದಿಂದ ಕರ್ನಾಟಕ ಸಂಜೀವನಿ ಯೋಜನೆಗೆ ಕುಟುಂಬಸ್ಥರ ನೋಂದಣಿಗೆ ಮಾರ್ಗಸೂಚಿಯನ್ನು ಪ್ರಕಟಿಸಲಾಗಿದೆ. ಅದು ಹೇಗೆ ಎನ್ನುವ ಬಗ್ಗೆ ಮುಂದೆ ಓದಿ.

ಈ ಕುರಿತಂತೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಸರ್ಕಾರದ ವಿಶೇಷ ಕಾರ್ಯದರ್ಶಿ ಸುತ್ತೋಲೆ ಹೊರಡಿಸಿದ್ದು, ರಾಜ್ಯ ಆಯವ್ಯಯದಲ್ಲಿ ಘೋಷಿಸಿದಂತೆ ರಾಜ್ಯ ಸರ್ಕಾರವು ರಾಜ್ಯ ಸರ್ಕಾರಿ ನೌಕರರಿಗೆ ಹಾಗೂ ಅವರ ಕುಟುಂಬದ ಅವಲಂಬಿತ ಸದಸ್ಯರಿಗೆ ಕರ್ನಾಟಕ ಆರೋಗ್ಯ ಸಂಜೀವಿನಿ (KASS) ಯೋಜನೆಯ ಮೂಲಕ ನಗದು ರಹಿತ ಆರೋಗ್ಯ ಸೇವೆಗಳನ್ನು ಒದಗಿಸುವ ವಿನೂತನ ಯೋಜನೆಯನ್ನು ರೂಪಿಸಿದ್ದು, ಈ ಯೋಜನೆಯು ಶೀಘ್ರದಲ್ಲಿ ಅನುಷ್ಠಾನಗೊಳ್ಳಲಿದೆ. ಈ ಯೋಜನೆಯನ್ನು ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಮೂಲಕ ಅನುಷ್ಠಾನಗೊಳಿಸಲಾಗುತ್ತಿದೆ ಎಂದಿದ್ದಾರೆ.

ಈ ಯೋಜನೆಯ ಕಾರ್ಯನೀತಿ ಸೂಚನೆಗಳನ್ನು ಸರ್ಕಾರದ ಆದೇಶ ಸಂಖ್ಯೆ:ಸಿಆಸುಇ 16 ಎಸ್ ಎಂಆರ್ 2020 ರ ದಿನಾಂಕ:17.08.2021, 05.09.2022, 09.03.2023 ಹಾಗೂ ದಿನಾಂಕ: 02.04.2025 ಗಳಲ್ಲಿ ನೀಡಲಾಗಿದೆ.

KASS ಯೋಜನೆಯು ರಾಜ್ಯ ಸರ್ಕಾರದ ನೌಕರರಿಗೆ ಐಚ್ಛಿಕವಾಗಿದ್ದು, ಯೋಜನೆಯಡಿ ಸರ್ಕಾರಿ ನೌಕರರು ವೈದ್ಯಕೀಯ ಸೌಲಭ್ಯ ಪಡೆಯಲು ಹೊರಗುಳಿಯಲು (Opt in / Opt out) ಆಯ್ಕೆ / ಇಚ್ಛೆ ವ್ಯಕ್ತಪಡಿಸುವ ಕುರಿತಂತೆ ಈ ಕೆಳಕಂಡ ಸೂಚನೆಗಳನ್ನು ಹೊರಡಿಸಲಾಗಿದೆ ಹಾಗೂ ಅನುಬಂಧಗಳನ್ನು ಲಗತ್ತಿಸಲಾಗಿದೆ ಎಂದಿದೆ.

1. ಯೋಜನೆಯಡಿ ಸರ್ಕಾರಿ ನೌಕರರು ಒಳಪಡುವ ಕಾರ್ಯವಿಧಾನದ ಬಗ್ಗೆ: ಈ ಯೋಜನೆಯು ಎಲ್ಲಾ ಅರ್ಹ ಸರ್ಕಾರಿ ನೌಕರರಿಗೆ ಅನ್ವಯವಾಗಲಿದ್ದು ಯೋಜನೆಯ ಸೌಲಭ್ಯ ಪಡೆಯುವುದು ಐಚ್ಛಿಕವಾಗಿದ್ದು (Optional), ಕಡ್ಡಾಯ(Mandatory) ಆಗಿರುವುದಿಲ್ಲ. ಈ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ನೌಕರರು ಯೋಜನೆಯ ಸದುಪಯೋಗ ಪಡೆಯಲು ಇಚ್ಚಿಸಿದಲ್ಲಿ ಮಾತ್ರ ತನ್ನ ಆಯ್ಕೆಯನ್ನು ಸೂಚಿಸಬಹುದಾಗಿದೆ. ಇಚ್ಛೆ ಇಲ್ಲದ ಪಕ್ಷದಲ್ಲಿಯೂ ಸಹ ನಿಗದಿತ ನಮೂನೆಯಲ್ಲಿ ತಿಳಿಸಬಹುದಾಗಿದೆ.

2. ನೋಂದಾವಣೆಗೆ ಸಂಬಂಧಿಸಿದಂತೆ ಉಲ್ಲೇಖಿತ ದಿನಾಂಕ:09.03.2023 ಆದೇಶದ ಅನುಬಂಧಗಳಲ್ಲಿ ನೋಂದಾವಣೆ ಅರ್ಜಿ ನಮೂನೆಗಳನ್ನು, ವಿವಿಧ ಘೋಷಣಾ ಪತ್ರಗಳನ್ನು ಹಾಗೂ ನೋಂದಾವಣೆ ಕಾರ್ಯವಿಧಾನಗಳನ್ನು ನಿರ್ಧಿಷ್ಟಪಡಿಸಲಾಗಿದೆ. ಇವುಗಳನ್ನು ಎಲ್ಲಾ ಸರ್ಕಾರಿ ನೌಕರರು ಹಾಗೂ ಡಿಡಿಓಗಳು (DDOs) ತಪ್ಪದೇ ಅನುಸರಿಸತಕ್ಕದ್ದು. HRMS ತಂತ್ರಜ್ಞಾನದಲ್ಲಿ ಡಿಡಿಓಗಳು ಅರ್ಜಿಗಳನ್ನು ಅಪ್ ಲೋಡ್ ಮಾಡಲು ಕ್ರಮವಹಿಸುವುದು. 3. ಯೋಜನೆಯಲ್ಲಿ ಸರ್ಕಾರಿ ನೌಕರರನ್ನು ನೋಂದಾಯಿಸುವ ಬಗ್ಗೆ HRMS ನಿರ್ದೇಶನಾಲಯವು ಸಹ ದಿನಾಂಕ: 30.05.2023 ಹಾಗೂ 05.06.2023 ರಂದು ವಿವರವಾದ ಮಾರ್ಗಸೂಚಿಗಳನ್ನು ಹಾಗೂ KASS-ಡಿಡಿಓ ಬಳಕೆದಾರರ ಕೈಪಿಡಿ, WEB APPLICATION ಮುಂತಾದ ವಿವರಗಳನ್ನು ನೀಡಿರುತ್ತದೆ. ಈ ಸೂಚನೆಗಳನ್ನು ಎಲ್ಲಾ ಇಲಾಖೆಗಳ ಡಿಡಿಓಗಳು ತಪ್ಪದೇ ಅನುಸರಿಸುವುದು ಹಾಗೂ ನೌಕರರ ನೋಂದಾವಣೆಯನ್ನು ಚುರುಕುಗೊಳಿಸುವುದು.

4. ಸರ್ಕಾರಿ ನೌಕರ ಯೋಜನೆಗೆ ಒಳಪಡಲು ಆಯ್ಕೆಯನ್ನು ವ್ಯಕ್ತಪಡಿಸಲು ಉದ್ದೇಶಿಸಿದಲ್ಲಿ ದಿನಾಂಕ: 20.05.2025 ರ ಒಳಗಾಗಿ ಈ ಸಂಬಂಧ ಅನುಬಂಧ-2 ರ ನಮೂನೆ-1 ರಲ್ಲಿ ಘೋಷಣೆಯನ್ನು ತನ್ನ ಮೇಲಾಧಿಕಾರಿ ಮೂಲಕ ಡಿಡಿಓ ಗಳಿಗೆ ಸಲ್ಲಿಸತಕ್ಕದ್ದು. ಇಂತಹ ಘೋಷಣೆಯನ್ನು ಸಲ್ಲಿಸುವ ನೌಕರರಿಂದ ಯೋಜನೆಯ ವಂತಿಕೆಯನ್ನು ಮೇ 2025ರ ಮಾಹೆಯಿಂದ ಸ್ವಯಂಚಾಲಿತವಾಗಿ HRMS ನಲ್ಲಿ ಕಟಾಯಿಸಲಾಗುವುದು.
5. ನೌಕರರು ಈ ಯೋಜನೆಗೆ ಒಳಪಡದೇ ಇರಲು ಇಚ್ಚಿಸಿದಲ್ಲಿ ದಿನಾಂಕ: 20.05.2025 ರ ಒಳಗಾಗಿ ಈ ಸಂಬಂಧ ಅನುಬಂಧ-2 ರ ನಮೂನೆ-2 ರಲ್ಲಿ ಘೋಷಣೆಯನ್ನು ತನ್ನ ಮೇಲಾಧಿಕಾರಿ ಮೂಲಕ ಡಿಡಿಓ ಗಳಿಗೆ ಸಲ್ಲಿಸತಕ್ಕದ್ದು, ತಪ್ಪಿದಲ್ಲಿ ಇಂತಹ ನೌಕರರು ಯೋಜನೆಗೆ ಒಳಪಡಲು ಇಚ್ಚಿಸಿದ್ದಾರೆಂದು ಪರಿಗಣಿಸಿ ಅವರ ಮೇ 2025ರ ವೇತನದಿಂದ HRMS ಮುಖಾಂತರ ವಂತಿಕೆ ಕಟಾವಣೆ ಮಾಡಲಾಗುತ್ತದೆ.

6. ಯೋಜನೆಗೆ ನೌಕರರ ವಂತಿಕೆ: ಯೋಜನೆಗೆ ಒಳಪಡುವ ಸರ್ಕಾರಿ ನೌಕರ ಈ ಕೆಳಂಡಂತೆ ಮಾಸಿಕ ವಂತಿಕೆಯನ್ನು ನೀಡಬೇಕಾಗುತ್ತದೆ.

ಗ್ರೂಪ್ ಎ – ರೂ.1000/-
ಗ್ರೂಪ್ ಬಿ – ರೂ. 500-
ಗ್ರೂಪ್ ಸಿ – ರೂ. 350
ಗ್ರೂಪ್ ಡಿ –  ರೂ.250

ಮಾಸಿಕ ವಂತಿಕೆಯನ್ನು HRMS ಮೂಲಕ ನೌಕರರ ಮೇ 2025 ರಿಂದ ಮಾಸಿಕ ವೇತನದಲ್ಲಿ ಕಡಿತಗೊಳಿಸಲು ಸಂಬಂಧ ಪಟ್ಟ ಡಿಡಿಓಗಳು ಕ್ರಮವಹಿಸತಕ್ಕದ್ದು, ಯಾವ ಲೆಕ್ಕ ಶೀರ್ಷಿಕೆಯಡಿ ಈ ಮೊತ್ತವನ್ನು ಜಮಾ ಮಾಡಬೇಕು ಹಾಗು ಇತರ ವಿಧಿ-ವಿಧಾನಗಳ ಬಗ್ಗೆ ಸರ್ಕಾರದಿಂದ ಶೀಘ್ರದಲ್ಲಿ ಮಾರ್ಗಸೂಚನೆಗಳನ್ನು (SOP) ಆರ್ಥಿಕ ಇಲಾಖೆಯಿಂದ ಹೊರಡಿಸಲಾಗುತ್ತದೆ.
7. ಮೇಲಿನ ಸೂಚನೆಗಳನ್ನು ಎಲ್ಲಾ ಸರ್ಕಾರಿ ನೌಕರರ ಹಾಗೂ ಗಮನಕ್ಕೆ ತರುವಂತೆ ಎಲ್ಲಾ ಇಲಾಖಾ ಮುಖ್ಯಸ್ಮರಿಗೆ ಡಿಡಿಓಗಳ ತಿಳಿಸಲಾಗಿದೆ ಎಂದಿದ್ದಾರೆ.

BREAKING: ರಾಜ್ಯದ 222 ಗ್ರಾಮ ಪಂಚಾಯ್ತಿಗಳ ಉಪ ಚುನಾವಣೆ ದಿನಾಂಕ ಮುಂದೂಡಿಕೆ | Gram Pachayat By-Election

ಸ್ಮಾರ್ಟ್ ಮೀಟರ್ ಅವ್ಯವಹಾರ ತನಿಖೆಗೆ ಲೋಕಾಯುಕ್ತಕ್ಕೆ ದೂರು: ಡಾ.ಸಿ.ಎನ್.ಅಶ್ವತನಾರಾಯಣ್

Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

2 Mins Read

ಜನಿವಾರಕ್ಕೆ ಇವರೇನು ಅನುಮತಿ ನೀಡೋದು? ಕೇಸರಿ ಶಾಲು ನಿಷೇಧಿಸಲು ಇವರ್ಯಾರು?: ಪ್ರಹ್ಲಾದ್ ಜೋಶಿ ಪ್ರಶ್ನೆ

1 Min Read

ಮಂಗಳೂರಲ್ಲಿ ಹವಾಮಾನ ವೈಫರಿತ್ಯದಿಂದ ಆಕಾಶದಲ್ಲೇ ಅರ್ಧ ಗಂಟೆ ಗಿರಕಿ ಹೊಡೆದ ವಿಮಾನಗಳು

1 Min Read
Recent News

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

ದಂಪತಿಗಳ ಲೈಂಗಿಕ ಜೀವನ ಸುಧಾರಿಸಲು ಈ ಒಂದು ಸರಳ ಅಭ್ಯಾಸ ಸಾಕು: ಸಂಶೋಧನೆಯಿಂದ ದೃಢ!

ದಂಪತಿಗಳ ನಡುವಿನ ಅನ್ಯೋನ್ಯತೆ ಹೆಚ್ಚಿಸಲು ಹೊಸ ಪ್ರಯೋಗ: ವೈವಾಹಿಕ ಜೀವನಕ್ಕೆ ಮರುಜೀವ ನೀಡಿದ ‘ನಗ್ನ ಛಾಯಾಚಿತ್ರ’

ನೈಸರ್ಗಿಕ ಪೋಷಕಾಂಶಗಳ ಗಣಿ: ಪ್ರತಿದಿನ ಮೊಳಕೆ ಕಾಳುಗಳನ್ನು ತಿನ್ನುವುದರಿಂದಾಗುವ 7 ಲಾಭಗಳು

State News
KARNATAKA

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆಯುತ್ತಿರುವ ಭೂ ಮಾಫಿಯಾದ ಭೀಕರ ದಂಧೆಯೊಂದು ಬಯಲಿಗೆ ಬಂದಿದೆ. ಸತ್ತವರ ಹೆಸರಿನಲ್ಲಿ ನಕಲಿ…

ಜನಿವಾರಕ್ಕೆ ಇವರೇನು ಅನುಮತಿ ನೀಡೋದು? ಕೇಸರಿ ಶಾಲು ನಿಷೇಧಿಸಲು ಇವರ್ಯಾರು?: ಪ್ರಹ್ಲಾದ್ ಜೋಶಿ ಪ್ರಶ್ನೆ

ಮಂಗಳೂರಲ್ಲಿ ಹವಾಮಾನ ವೈಫರಿತ್ಯದಿಂದ ಆಕಾಶದಲ್ಲೇ ಅರ್ಧ ಗಂಟೆ ಗಿರಕಿ ಹೊಡೆದ ವಿಮಾನಗಳು

BIG NEWS: ಸಾಗರದ ನಾಡಕಲಸೆಯಲ್ಲಿ ‘ಕಂದಾಯ ಭೂಮಿ’ ಒತ್ತುವರಿ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.