ನವದೆಹಲಿ: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸ 2022 ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ನಿನ್ನೆ ನಡೆದಂತ ದಸರಾ ಜಂಬೂಸವಾರಿಯನ್ನು ಲಕ್ಷಾಂತರ ಜನರು ಕಣ್ ತುಂಬಿಕೊಂಡಿದ್ದಾರೆ. ಇದೇ ವೇಳೆಯಲ್ಲಿ ಮೈಸೂರು ದಸರಾ ಜಂಬೂಸವಾರಿಯ ( Mysore Dasara Jambo Savari ) ಪೋಟೋಗಳಿಗೆ ಪ್ರಧಾನಿ ನರೇಂದ್ರ ಮೋದಿಯವರು ( Prime Minister Narendra Modi ) ಫಿದಾ ಆಗಿದ್ದಾರೆ. ಅಲ್ಲದೇ ದಸರಾ ಯಶಸ್ವಿಯಾಗಿದ್ದಕ್ಕೆ ಮೈಸೂರಿನ ಜನತೆಗೆ ಧನ್ಯವಾದ ಕೂಡ ಅರ್ಪಿಸಿದ್ದಾರೆ.
ಅ.8ರಂದು ಜನತಾ ಮಿತ್ರ ಸಮಾರೋಪ ಸಮಾವೇಶ: ಪೂರ್ವ ಸಿದ್ಧತಾ ಸಭೆ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ
ಮೈಸೂರು ದಸರಾ ಜಂಬೂಸವಾರಿಯ ಪೋಟೋಗಳನ್ನು, ಆರ್ ಎಸ್ ಎಸ್ ಸ್ವಯಂ ಸೇವಕ ( RSS Worker ) ನಿವಣೆ ಕಾಲನಾಥ್ ಭಟ್ ಅವರು ಪ್ರಧಾನಿ ಮೋದಿಯವರಿಗೆ ಟ್ವಿಟ್ಟರ್ ನಲ್ಲಿ ( Twitter ) ಟ್ಯಾಗ್ ಮಾಡಿದ್ದರು. ಈ ಪೋಟೋ ಕಂಡಂತ ಮೋದಿಯವರು ದಸರಾ ಜಂಬೂಸವಾರಿಯ ಪೋಟೋಗಳಿಗೆ ಫಿಧಾ ಆಗಿದ್ದಾರೆ.
‘ST ಸಮುದಾಯ’ದವರಿಗೆ ಮೀಸಲಾತಿಯನ್ನು ಶೇ.3ರಿಂದ ಶೇ.7ಕ್ಕೆ ಹೆಚ್ಚಿಸಿ – ಸಿದ್ಧರಾಮಯ್ಯ ಆಗ್ರಹ
ಈ ಪೋಟೋ ಜೊತೆಗೆ ರೀ ಟ್ವಿಟ್ ಮಾಡಿರುವಂತ ಪ್ರಧಾನಿಯವರು, ಮೈಸೂರು ದಸರಾ ಅದ್ಭುತವಾಗಿದೆ. ಮೈಸೂರಿನ ಜನರು ತಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಇಷ್ಟು ಸುಂದರವಾಗಿ ಕಾಪಾಡಿಕೊಂಡಿರುವುದಕ್ಕೆ ನಾನು ಅವರನ್ನು ಶ್ಲಾಘಿಸುತ್ತೇನೆ. 2022 ರ ಯೋಗ ದಿನದಂದು ನನ್ನ ಮೈಸೂರು ಭೇಟಿಗಳ ಬಗ್ಗೆ ನನಗೆ ಮಧುರವಾದ ನೆನಪುಗಳಿವೆ ಎಂಬುದಾಗಿ ಹೇಳಿದ್ದಾರೆ.
Mysuru Dasara is spectacular. I commend the people of Mysuru for preserving their culture and heritage so beautifully. I have fond memories of my Mysuru visits, the most recent one being during 2022 Yoga Day. https://t.co/2jynlJav6f
— Narendra Modi (@narendramodi) October 6, 2022