ಬೆಂಗಳೂರು : ಇತ್ತೀಚಿಗೆ ಪ್ಲಾಸ್ಟಿಕ್ ನಲ್ಲಿ ತಯಾರಿಸುವಂತಹ ಇಡ್ಲಿ ಹಾಗೂ ಕಲ್ಲಂಗಡಿಯಲ್ಲಿ ಬಣ್ಣ ಹೆಚ್ಚು ಕಾಣಲು ಕೃತಕ ಬಣ್ಣ ಬಳಕೆ ಹಾಗೂ ಬೆಲ್ಲದಲ್ಲಿ ಸಹ ಆರೋಗ್ಯದ ಮೇಲೆ ಪರಿಣಾಮ ಬೀರುವ ಹಾನಿಕಾರಕ ಅಂಶಗಳು ಪತ್ತೆಯಾಗಿದ್ದವು. ಇದೀಗ ಹೆಣ್ಣು ಮಕ್ಕಳ ಅಚ್ಚುಮೆಚ್ಚು ಆಗಿರುವಂತಹ ಮಲ್ಲಿಗೆ ಹೂವಿನಲ್ಲಿ ಕೂಡ ಇದೀಗ ಕೆಮಿಕಲ್ ಬಳಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.
ಹೌದು ಸಾಮಾನ್ಯವಾಗಿ ಹೆಣ್ಣು ಮಕ್ಕಳಿಗೆ ಮಲ್ಲಿಗೆ ಹೂವೆಂದರೆ ಪಂಚಪ್ರಾಣ.ಎಷ್ಟೇ ದೊಡ್ಡದಾದ ಸಭೆ, ಸಮಾರಂಭಗಳಿರಲಿ ಯಾವುದೇ ಒಂದು ಕಾರ್ಯಕ್ರಮವಿರಲಿ ಮಹಿಳೆಯರು ಮಲ್ಲಿಗೆ ಹೂವು ಮುಡಿದುಕೊಳ್ಳುವುದನ್ನು ಮಾತ್ರ ಮರೆಯಲ್ಲ. ಇದೀಗ ಮಲ್ಲಿಗೆ ಹೂ ಬಾಡದಿರಲಿ ಅಂತ ಬಳಸುವ ಕೆಮಿಕಲ್ ಹೆಣ್ಣುಮಕ್ಕಳಿಗೆ ಕಂಟಕ ಎಂಬ ಅಘಾತಕಾರಿ ಮಾಹಿತಿ ಬಯಲಾಗಿದೆ.
ಮಲ್ಲಿಗೆ ಹೂವಿನ ಮೇಲೂ ಈ ಕೃತಕ ಬಣ್ಣ ಬಳಕೆಯ ಕರಾಳತೆ ಬಯಲಾಗಿದ್ದು, ಹೂ ಬಾಡದಿರಲಿ ಅಂತ ಬಳಸುವ ಈ ಕೃತಕ ಬಣ್ಣ, ಆರೋಗ್ಯದ ಮೇಲೆ ದಷ್ಪರಿಣಾಮ ಬೀರಲಿದೆ ಅನ್ನೋ ವರದಿ ಬೆಚ್ಚಿ ಬೀಳಿಸಿದೆ. ಹೂ ಬಾಡದಿರಲಿ ಅಂತ ಕೆಮಿಕಲ್ ಬಳಕೆ ಮಾಡಲಾಗುತ್ತಿದೆ. ಇದು ಚರ್ಮ, ಕೂದಲುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತೆ ಎಂದು ಹೇಳಲಾಗುತ್ತಿದೆ.ಕೃತಕ ಬಣ್ಣದಿಂದ ದೇಹದಲ್ಲಿ ಅಲರ್ಜಿ ಉಂಟಾಗುತ್ತೆ. ಹಾಗೆಯೇ ಕೂದಲು ಕೂಡ ಉದುರೋ ಸಾಧ್ಯತೆ ಇದೆ ಎನ್ನಲಾಗಿದೆ.