ಮಂಡ್ಯ : ಹೆಂಡತಿಯ ಮುಂದೆ ಸ್ಟೇಟಸ್ ತೋರಿಸಲು ಹೋಗಿ ಪೊಲೀಸರ ಕೈಗೆ ತಗಲಾಕ್ಕೊಂಡ ಐನಾತಿ ಪತಿಯೊಬ್ಬ ಇದೀಗ ಪೋಲೀಸರ ಅಥಿತಿಯಾಗಿದ್ದಾನೆ. ಕಿರುಗಾವಲು ಪೊಲೀಸರ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಪ್ರಕರಣ ಸಂಬಂಧ ನಾಲ್ವರು ಸರಗಳ್ಳರ ಬಂಧನವಾಗಿದೆ.
ಬಂಧಿತರನ್ನ ಮಳವಳ್ಳಿ ತಾಲ್ಲೂಕಿನ ತಳಗವಾದಿ ಗ್ರಾಮದ ಗುರು ಪ್ರಸಾದ್ @ಗುರು(36), ರೋಹಿತ್@ಗೆದ್ವಾ(20), ನಂಜೇಗೌಡ@ಕಾಶಿ(19), ಹಾಗೂ ಮಣಿಗೆರೆ ಗ್ರಾಮದ ಮಾದೇಶ@ಮಾದ(20) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ. ಗುರು ಪ್ರಸಾದ್ @ಗುರು ಹೆಂಡತಿಯ ಬಳಿ ಶ್ರೀಮಂತಿಕೆ ತೋರಿಸಲು ಸರಗಳ್ಳತನ ಮಾಡ್ತಿದ್ದ ಐನಾತಿ. ಮಾರ್ಚ್ 30 ರಂದು ಕಿರುಗಾವಲು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಜಮೀನಿನ ಬಳಿ ತೆರಳುವ ಒಂಟಿ ಮಹಿಳೆಯರ ಟಾರ್ಗೆಟ್ ಮಾಡಿ ಸರಗಳ್ಳತನ ಮಾಡ್ತಿದ್ದ ಖತರ್ನಾಕ್ ಗಳು.
ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದ ಎಸ್ಪಿ, ಎಎಸ್ಪಿ ತಿಮ್ಮಯ್ಯ, ಸಿಪಿಐ ಶ್ರೀಧರ್, ನೇತೃತ್ವದಲ್ಲಿ ಕಿರುಗಾವಲು ಪಿಎಸ್ಐ ರವಿಕುಮಾರ್, ಬೆಳಕವಾಡಿ ಪಿಎಸ್ಐ ಪ್ರಕಾಶ್, ಸಿಬ್ಬಂದಿಗಳಾದ ಸುನೀಲ್, ಸಿದ್ದಣ್ಣ,ಹರ್ಷ,ಜಯಂತ್,ಲೋಕೇಶ್ ಸೇರಿದಂತೆ ತಂಡ ರಚನೆಯಾಗಿತ್ತು. ಯಶಸ್ಸಿ ಕಾರ್ಯಾಚರಣೆ ಮೂಲಕ ಆರೋಪಿಗಳ ಬಂಧನವಾಗಿದೆ. ಬಂಧಿತ ಆರೋಪಿಗಳಿಂದ 70 ಲಕ್ಷ ಮೌಲ್ಯದ 475 ಗ್ರಾಂ ಚಿನ್ನಾಭರಣ ಹಾಗೂ ಬೈಕ್ ಗಳ ವಶಕ್ಕೆ ಪಡೆಯಲಾಗಿದೆ. ವಿವಿಧ ಠಾಣೆಯಲ್ಲಿ ಸುಮಾರು 16 ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಗಳು. ಕಿರುಗಾವಲು ಪೊಲೀಸರ ಕಾರ್ಯಕ್ಕೆ ಮಂಡ್ಯ ಎಸ್ಪಿ ಡಾ.ವಿಜೆ ಶೋಭಾರಾಣಿ ಶ್ಲಾಘಿಸಿದ್ದಾರೆ.








