Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಜೂ.1ರಿಂದ ಸರ್ಕಾರಿ ಶಾಲೆ ಪ್ರಾರಂಭ : ಶಾಲೆಗೆ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿ : ಸಚಿವ ಮಧು ಬಂಗಾರಪ್ಪ ಕರೆ

ಆನೆಧಾಮಕ್ಕೆ ಶೀಘ್ರವೇ ಟೆಂಡರ್, ಹೊಸ ಮೃಗಾಲಯ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಚಿವ ಈಶ್ವರ ಖಂಡ್ರೆ

BIG NEWS : ಜಿರಳೆ ಪಾರ್ಟಿಯನ್ನು ಭಾವನಾತ್ಮಕವಾಗಿ ನೋಡಬೇಡಿ : ಸುಪ್ರೀಂಕೋರ್ಟ್ ಕಿವಿಮಾತು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಆನೆಧಾಮಕ್ಕೆ ಶೀಘ್ರವೇ ಟೆಂಡರ್, ಹೊಸ ಮೃಗಾಲಯ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಚಿವ ಈಶ್ವರ ಖಂಡ್ರೆ
KARNATAKA

ಆನೆಧಾಮಕ್ಕೆ ಶೀಘ್ರವೇ ಟೆಂಡರ್, ಹೊಸ ಮೃಗಾಲಯ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಚಿವ ಈಶ್ವರ ಖಂಡ್ರೆ

By ಸುರೇಶ್‌

ಹಾಸನ, ಮೇ 26: ಮಾನವ-ಆನೆ ಸಂಘರ್ಷ ತಗ್ಗಿಸಲು 2000 ಹೆಕ್ಟೆರ್ ಪ್ರದೇಶದಲ್ಲಿ ಆನೆಧಾಮ ನಿರ್ಮಿಸಲು ಸರ್ಕಾರ ಯೋಜನೆ ರೂಪಿಸಿದ್ದು, 8-10 ದಿನಗಳಲ್ಲಿ ಟೆಂಡರ್ ಪ್ರಕ್ರಿಯೆ ಆರಂಭಿಸಲು ಸೂಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.

ಹಾಸನ ನಗರದ ಗೆಂಡೆಕಟ್ಟೆ ಅರಣ್ಯ ಅತಿಥಿಗೃಹದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನ, ಕೊಡಗು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ನೂರಾರು ಆನೆಗಳು ಕಾಡಿನ ಹೊರಗೇ ಇದ್ದು, ಆನೆಗಳಿಂದ ಬೆಳೆ ಮತ್ತು ಜೀವಹಾನಿ ಆಗದಂತೆ ತಡೆಯಲು ಆನೆಧಾಮ ನಿರ್ಮಿಸಲಾಗುತ್ತಿದೆ ಎಂದರು.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಮುಖ್ಯ ವನ್ಯಜೀವಿ ಪರಿಪಾಲಕರು ಈ ಸಂಬಂಧ ಸರ್ಕಾರಕ್ಕೆ ವರದಿ ಸಲ್ಲಿಸಿದ್ದು ಶೀಘ್ರವೇ ಟೆಂಡರ್ ಕರೆಯಲಾಗುವುದು ಎಂದರು.

ಹೊಸ ಮೃಗಾಲಯ ಪ್ರಸ್ತಾಪ ಇಲ್ಲ:
ಹಾಸನದಲ್ಲಿ ಮೃಗಾಲಯ ಸ್ಥಾಪಿಸುವ ಸಂಬಂಧ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಂದು ಹೊಸ ಮೃಗಾಲಯ ಸ್ಥಾಪಿಸಲು ಕೇಂದ್ರದ ಅನುಮತಿ ಪಡೆಯಬೇಕಾಗುತ್ತದೆ. ಅನುದಾನವನ್ನೂ ನೀಡಬೇಕಾಗುತ್ತದೆ. ನಿರ್ವಹಣೆಯ ಸಮಸ್ಯೆಯೂ ಇದೆ ಎಂದರು.

ರಾಜ್ಯದಲ್ಲಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯವಿದ್ದು, ಇದರ ಜೊತೆಗೆ ಹಲವು ಝೂಗಳು ಕಾರ್ಯ ನಿರ್ವಹಿಸುತ್ತಿವೆ. ಮೈಸೂರು ಮತ್ತು ಬನ್ನೇರುಘಟ್ಟ ಮೃಗಾಲಯದ ಆದಾಯದಿಂದ ಬೇರೆ ಮೃಗಾಲಯದ ಖರ್ಚುವೆಚ್ಚ ಸರಿದೂಗಿಸಲಾಗುತ್ತಿದೆ. ಹೀಗಾಗಿ ಹೊಸ ಮೃಗಾಲಯ ಸ್ಥಾಪನೆ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಸ್ಪಷ್ಟಪಡಿಸಿದರು.

ಮಡೆನೂರು 100 ಎಕರೆಭೂಮಿ ಮರು ವಶ:
ರಾಜ್ಯದಲ್ಲಿ ಅರಣ್ಯ ಇಲಾಖೆಗೆ ಸೇರಿದ ಯಾವುದೇ ಬೆಲೆಬಾಳುವ ಭೂಮಿಯನ್ನು ಮರು ವಶಪಡಿಸಿಕೊಳ್ಳಲು ಸರ್ಕಾರ ಕ್ರಮವಹಿಸಿದ್ದು, ಹಾಸನ ನಗರದ ಬಳಿ ಇರುವ ಮಡೇನೂರಿನಲ್ಲಿ 100 ಎಕರೆ ಅರಣ್ಯ ಪ್ರದೇಶವನ್ನು ಮರು ವಶಪಡಿಸಿಕೊಳ್ಳಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಸೆಕ್ಷನ್ 4 ಆದ ಬಳಿಕ ಸೆಕ್ಷನ್ 17 ಅಂದರೆ ಅರಣ್ಯ ಎಂದು ಘೋಷಿಸುವ ಪ್ರಕ್ರಿಯೆ ಮಂದಗತಿಯಲ್ಲಿ ಸಾಗಿದ್ದು, ವ್ಯವಸ್ಥಾಪನಾಧಿಕಾರಿಗಳ (ಫಾರೆಸ್ಟ್ ಸೆಟ್ಲ್ ಮೆಂಟ್ ಆಫೀಸರ್) ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಏಳುಕೊಂಡಲು, ಉಪ ಅರಣ್ಯ ಸಂರಕ್ಷಣಾಧಿಕಾರಿ ಸೌರಭ್ ಮತ್ತಿತರರು ಉಪಸ್ಥಿತರಿದ್ದರು.

Share. Facebook Twitter LinkedIn WhatsApp Email

Related Posts

ಜೂ.1ರಿಂದ ಸರ್ಕಾರಿ ಶಾಲೆ ಪ್ರಾರಂಭ : ಶಾಲೆಗೆ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿ : ಸಚಿವ ಮಧು ಬಂಗಾರಪ್ಪ ಕರೆ

1 Min Read

BIG NEWS : ಬೆಂಗಳೂರಲ್ಲಿ ಭೀಕರ ಮರ್ಡರ್ : ಆಟೋ ಚಾಲಕನ ಹತ್ಯೆಗೈದು ಹೂತು ಹಾಕಿದ ಸ್ನೇಹಿತರು!

1 Min Read

BREAKING : ಜೂನ್ 1ರಿಂದ ಕರ್ನಾಟಕದಲ್ಲಿ ಶಾಲೆಗಳು ಆರಂಭ: ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ

2 Mins Read
Recent News

ಜೂ.1ರಿಂದ ಸರ್ಕಾರಿ ಶಾಲೆ ಪ್ರಾರಂಭ : ಶಾಲೆಗೆ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿ : ಸಚಿವ ಮಧು ಬಂಗಾರಪ್ಪ ಕರೆ

ಆನೆಧಾಮಕ್ಕೆ ಶೀಘ್ರವೇ ಟೆಂಡರ್, ಹೊಸ ಮೃಗಾಲಯ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಚಿವ ಈಶ್ವರ ಖಂಡ್ರೆ

BIG NEWS : ಜಿರಳೆ ಪಾರ್ಟಿಯನ್ನು ಭಾವನಾತ್ಮಕವಾಗಿ ನೋಡಬೇಡಿ : ಸುಪ್ರೀಂಕೋರ್ಟ್ ಕಿವಿಮಾತು

BIG NEWS : ಬೆಂಗಳೂರಲ್ಲಿ ಭೀಕರ ಮರ್ಡರ್ : ಆಟೋ ಚಾಲಕನ ಹತ್ಯೆಗೈದು ಹೂತು ಹಾಕಿದ ಸ್ನೇಹಿತರು!

State News
KARNATAKA

ಜೂ.1ರಿಂದ ಸರ್ಕಾರಿ ಶಾಲೆ ಪ್ರಾರಂಭ : ಶಾಲೆಗೆ ಮಕ್ಕಳನ್ನು ಸಂಭ್ರಮದಿಂದ ಸ್ವಾಗತಿಸಿ : ಸಚಿವ ಮಧು ಬಂಗಾರಪ್ಪ ಕರೆ

By ಸುರೇಶ್‌ KARNATAKA 1 Min Read

ಬೆಂಗಳೂರು : ಹೊಸಶೈಕ್ಷಣಿಕ ಸಾಲು (2026-27) ಆರಂಭವಾಗುತ್ತಿದ್ದು, ಜೂ.1ರಿಂದ ಎಲ್ಲಾ ಸರ್ಕಾರಿ ಶಾಲೆಗಳನ್ನು ಪುನರ್ ಆರಂಭಿಸಿ ಹಬ್ಬದ ರೀತಿಯಲ್ಲಿ ಮಕ್ಕಳನ್ನು…

ಆನೆಧಾಮಕ್ಕೆ ಶೀಘ್ರವೇ ಟೆಂಡರ್, ಹೊಸ ಮೃಗಾಲಯ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ಸಚಿವ ಈಶ್ವರ ಖಂಡ್ರೆ

BIG NEWS : ಬೆಂಗಳೂರಲ್ಲಿ ಭೀಕರ ಮರ್ಡರ್ : ಆಟೋ ಚಾಲಕನ ಹತ್ಯೆಗೈದು ಹೂತು ಹಾಕಿದ ಸ್ನೇಹಿತರು!

BREAKING : ಜೂನ್ 1ರಿಂದ ಕರ್ನಾಟಕದಲ್ಲಿ ಶಾಲೆಗಳು ಆರಂಭ: ಶಿಕ್ಷಣ ಇಲಾಖೆಯಿಂದ ಕಟ್ಟುನಿಟ್ಟಿನ ಮಾರ್ಗಸೂಚಿ ಪ್ರಕಟ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.