ಬೆಂಗಳೂರು: ಪ್ರಯಾಣಿಕರಿಂದ ಆ್ಯಪ್ ( Application ) ಆಧಾರಿತ ಟ್ಯಾಕ್ಸಿಗಳಾದಂತ ಓಲಾ, ಊಬರ್ ( Ola, Uber Taxi ) ದುಬಾರಿ ದರ ವಸೂಲಿ ಮಾಡುತ್ತಿರೋ ಆರೋಪ ಕೇಳಿ ಬಂದಿತ್ತು. ಈ ಹಿನ್ನಲೆಯಲ್ಲಿ ಹೆಚ್ಚು ದರ ವಸೂಲಿ ಮಾಡಿದ್ರೇ ಓಲಾ, ಊಬರ್ ವಾಹನಗಳನ್ನು ಜಪ್ತಿ ಮಾಡೋದಾಗಿ ಸಚಿವ ಬಿ.ಶ್ರೀರಾಮುಲು ( Minister B Sriramulu ) ಖಡಕ್ ಎಟ್ಟರಿಕೆ ನೀಡಿದ್ದಾರೆ.
ಈ ಕುರಿತಂತೆ ಮಾತನಾಡಿದಂತ ಅವರು, ಸಾರಿಗೆ ಇಲಾಖೆಯಿಂದ ( Transport Department ) ಲೈಸೆನ್ಸ್ ನೀಡುವಾಗ, ಷರತ್ತುಳನ್ನು ವಿಧಿಸಲಾಗಿರುತ್ತದೆ. ಈ ನಿಯಮ ಉಲ್ಲಂಘಿಸಿ, ಪ್ರಯಾಣಿಕರಿಂದ ದುಬಾರಿ ದರ ವಸೂಲಿ ಮಾಡುತ್ತಿರೋದಾಗಿ ತಿಳಿದು ಬಂದಿದೆ. ಹೀಗೆ ದುಬಾರಿ ದರವನ್ನು ಪ್ರಯಾಣಿಕರಿಂದ ವಸೂಲಿ ಮಾಡುತ್ತಿರುವ ವಾಹನಗಳನ್ನು ಸೀಜ್ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿರೋದಾಗಿ ತಿಳಿಸಿದ್ದಾರೆ.
ಈಗಾಗಲೇ ಸಾರ್ವಜನಿಕರಿಂದ ಓಲಾ, ಊಬರ್ ಹೆಚ್ಚು ದರ ವಸೂಲಿ ಮಾಡುತ್ತಿರೋ ಬಗ್ಗೆ ದೂರು ಬಂದ ಕಾರಣ, ನೋಟಿಸ್ ನೀಡಲಾಗಿದೆ. ಆ ಸಂಸ್ಥೆಗಳಿಂದ ನೋಟಿಸ್ ಗೆ ಏನು ಉತ್ತರ ಬರಲಿದೆ ಎಂಬುದನ್ನು ಗಮನಿಸಿ, ಒಂದೆರಡು ದಿನಗಳಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುತ್ತದೆ. ಲೈಸೆನ್ಸ್ ನೀಡುವ ಸಂದರ್ಭದಲ್ಲಿ ಸಾರಿಗೆ ಇಲಾಖೆಯ ನಿಯಮಗಳು ಉಲ್ಲಂಘನೆಯಾಗಬಾರದು ಎಂಬ ಷರತ್ತು ವಿಧಿಸಲಾಗಿದೆ. ಆದರೂ ಈ ನಿಯಮ ಮೀರಿದಂತ ದೂರುಗಳು ಬರುತ್ತಿವೆ ಎಂದರು.
ಕಾಲು ಮುರಿದಿದ್ದರೂ ಕಾಮನ್ವೆಲ್ತ್ ಚಿನ್ನ ಗೆದ್ದೆ: ರೋಚಕ ಸಂಗತಿ ಬಿಚ್ಚಿಟ್ಟ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು