ನವದೆಹಲಿ: ಭಾರತೀಯ ಭೂಸೇನೆಯ (Indian Army) ಮುಂದಿನ ಮುಖ್ಯಸ್ಥರಾಗಿ (Chief of the Army Staff – COAS) ಲೆಫ್ಟಿನೆಂಟ್ ಜನರಲ್ ಧೀರಜ್ ಸೇಥ್ ಅವರು ಜೂನ್ 30 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂದು ಕೇಂದ್ರ ಸರ್ಕಾರ ಶನಿವಾರ ಪ್ರಕಟಿಸಿದೆ. ಪ್ರಸ್ತುತ ಸೇನಾ ಮುಖ್ಯಸ್ಥರಾಗಿರುವ ಜನರಲ್ ಉಪೇಂದ್ರ ದ್ವಿವೇದಿ ಅವರ ನಿವೃತ್ತಿಯ ಬೆನ್ನಲ್ಲೇ ಧೀರಜ್ ಸೇಥ್ ಅವರು ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲಿದ್ದಾರೆ.
The Government has appointed Lieutenant General Dhiraj Seth, PVSM, UYSM, AVSM, presently serving as the Vice Chief of the Army Staff, as the next Chief of the Army Staff in the substantive rank of General with effect from the afternoon of 30 June 2026.
An alumnus of the National… pic.twitter.com/RExcCKjWJh
— Ministry of Defence, Government of India (@SpokespersonMoD) June 13, 2026
ಲೆಫ್ಟಿನೆಂಟ್ ಜನರಲ್ ಧೀರಜ್ ಸೇಥ್ ಅವರು ಭಾರತೀಯ ಸೇನೆಯಲ್ಲಿ ಸುಮಾರು ನಾಲ್ಕು ದಶಕಗಳ ಕಾಲ ಅತ್ಯಂತ ವಿಶಿಷ್ಟ ಹಾಗೂ ಶ್ಲಾಘನೀಯ ಸೇವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ.
-
ಹಿನ್ನೆಲೆ ಮತ್ತು ಕಮಿಷನ್: ಖಡಕ್ವಾಸ್ಲಾದ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ (NDA) ಹಳೆಯ ವಿದ್ಯಾರ್ಥಿಯಾಗಿರುವ ಇವರು, 1986 ರಲ್ಲಿ ಆರ್ಮರ್ಡ್ ಕಾರ್ಪ್ಸ್ (ಸವಾರಿ ಪಡೆ) ಅಧಿಕಾರಿಯಾಗಿ ಭಾರತೀಯ ಭೂಸೇನೆಗೆ ಸೇರ್ಪಡೆಗೊಂಡರು.
- ಉನ್ನತ ಶಿಕ್ಷಣ ಮತ್ತು ತರಬೇತಿ: ಇವರು ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿರುವ ಮಿಲಿಟರಿ ಕಾಲೇಜಿನಲ್ಲಿ ಡಿಫೆನ್ಸ್ ಸರ್ವಿಸಸ್ ಕಮಾಂಡ್ ಮತ್ತು ಜನರಲ್ ಸ್ಟಾಫ್ ಕೋರ್ಸ್ ಪೂರೈಸಿದ್ದಾರೆ. ಅಷ್ಟೇ ಅಲ್ಲದೆ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಇಂಟರ್ನ್ಯಾಷನಲ್ ಡಿಫೆನ್ಸ್ ಅಕ್ವಿಸಿಷನ್ ಮ್ಯಾನೇಜ್‌ಮೆಂಟ್ ಕೋರ್ಸ್, ಮ್ಹೋವ್‌ನಲ್ಲಿ ಹೈಯರ್ ಕಮಾಂಡ್ ಕೋರ್ಸ್ ಮತ್ತು ನವದೆಹಲಿಯ ನ್ಯಾಷನಲ್ ಡಿಫೆನ್ಸ್ ಕಾಲೇಜಿನಲ್ಲಿ ಉನ್ನತ ತರಬೇತಿ ಪಡೆದಿದ್ದಾರೆ.
ಧೀರಜ್ ಸೇಥ್ ಅವರು ದೇಶದ ವಿವಿಧ ಕಾರ್ಯತಂತ್ರದ ಮತ್ತು ಕಾರ್ಯಾಚರಣೆಯ ವಲಯಗಳಲ್ಲಿ ಪ್ರಮುಖ ಕಮಾಂಡರ್ ಆಗಿ ಕಾರ್ಯನಿರ್ವಹಿಸಿದ್ದಾರೆ:
-
ಮರುಭೂಮಿ ವಲಯದಲ್ಲಿ ಆರ್ಮರ್ಡ್ ರೆಜಿಮೆಂಟ್ ಹಾಗೂ ಅಭಿವೃದ್ಧಿ ಹೊಂದಿದ ವಲಯದಲ್ಲಿ ಆರ್ಮರ್ಡ್ ಬ್ರಿಗೇಡ್ ಮುನ್ನಡೆಸಿದ್ದಾರೆ.
-
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ನಿಗ್ರಹ ಪಡೆಯ (Counter Insurgency Force) ಕಮಾಂಡರ್ ಆಗಿ ಸೇವೆ ಸಲ್ಲಿಸಿದ್ದಾರೆ.
-
ಸುದರ್ಶನ ಚಕ್ರ ಕಾರ್ಪ್ಸ್ ಕಮಾಂಡರ್ ಆಗಿ ಮತ್ತು ದೆಹಲಿ ಏರಿಯಾದ ಜನರಲ್ ಆಫೀಸರ್ ಕಮಾಂಡಿಂಗ್ (GOC) ಆಗಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಮುಖ ಕಾರ್ಯಕ್ರಮಗಳ ಮೇಲ್ವಿಚಾರಣೆ ನಡೆಸಿದ್ದಾರೆ.
-
ಕಳೆದ ವರ್ಷ ನಡೆದ ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ಪುಣೆ ಪ್ರಧಾನ ಕಚೇರಿಯ ಸದರ್ನ್ ಕಮಾಂಡ್ ಅನ್ನು ಮುನ್ನಡೆಸಿದ್ದ ಇವರು, ಪಶ್ಚಿಮ ಗಡಿಯಲ್ಲಿ ನಡೆದ ಪ್ರಮುಖ ತ್ರಿ-ಸೇವಾ ಜಂಟಿ ಯುದ್ಧಾಭ್ಯಾಸಗಳ ಉಸ್ತುವಾರಿ ವಹಿಸಿದ್ದರು.
ಪ್ರಮುಖ ಕಾರ್ಯತಂತ್ರದ ಹುದ್ದೆಗಳು:
ಸೇನೆಯ ಆಡಳಿತ ಮತ್ತು ಕಾರ್ಯತಂತ್ರ ರೂಪಿಸುವಲ್ಲಿ ಇವರು ಮಹತ್ವದ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ:
-
ಜಮ್ಮು ಮತ್ತು ಕಾಶ್ಮೀರದ ಸ್ವತಂತ್ರ ಆರ್ಮರ್ಡ್ ಬ್ರಿಗೇಡ್‌ನ ಬ್ರಿಗೇಡ್ ಮೇಜರ್.
-
ಅಂಗೋಲಾದಲ್ಲಿ ನಡೆದ ವಿಶ್ವಸಂಸ್ಥೆಯ ಶಾಂತಿಪಾಲನಾ ಮಿಷನ್‌ನಲ್ಲಿ (UN Mission) ಆಪರೇಷನ್ ಆಫೀಸರ್.
-
ಆರ್ಮಿ ಹೆಡ್‌ಕ್ವಾರ್ಟರ್ಸ್‌ನಲ್ಲಿ ಅಸಿಸ್ಟೆಂಟ್ ಮಿಲಿಟರಿ ಸೆಕ್ರೆಟರಿ.
-
ಸೌತ್ ವೆಸ್ಟರ್ನ್ ಕಮಾಂಡ್ ಹೆಡ್‌ಕ್ವಾರ್ಟರ್ಸ್‌ನಲ್ಲಿ ಬ್ರಿಗೇಡಿಯರ್ ಜನರಲ್ ಸ್ಟಾಫ್ ಆಪರೇಷನ್ಸ್.
-
ಸೇನೆಯ ಡೈರೆಕ್ಟರ್ ಜನರಲ್ (ಡಿಸಿಪ್ಲಿನ್, ಸೆರೆಮೋನಿಯಲ್ ಮತ್ತು ವೆಲ್ಫೇರ್) ಆಗಿ ಕಾರ್ಯನಿರ್ವಹಣೆ.
ಸದ್ಯ ಸೇನೆಯ ವೈಸ್ ಚೀಫ್ ಆಗಿ ಕಾರ್ಯನಿರ್ವಹಿಸುತ್ತಿರುವ ಲೆಫ್ಟಿನೆಂಟ್ ಜನರಲ್ ಧೀರಜ್ ಸೇಥ್ ಅವರು ಜೂನ್ 30 ರಂದು ಅಧಿಕೃತವಾಗಿ ಭಾರತೀಯ ಭೂಸೇನೆಯ ಚುಕ್ಕಾಣಿ ಹಿಡಿಯಲಿದ್ದಾರೆ.








