ಮಡಿಕೇರಿ: ಬೈಕ್ ಹಾಗೂ ಕೆ ಎಸ್ ಆರ್ ಟಿ ಸಿ ಬಸ್ ( KSRTC Bus ) ನಡುವೆ ಡಿಕ್ಕಿಯಾಗಿ, ಚಾಲಕನ ನಿಯಂತ್ರಣ ಉರುಳಿಬಿದ್ದ ಪರಿಣಾಮ, ಬಸ್ಸಿನಲ್ಲಿದ್ದಂತ ಹಲವು ಪ್ರಯಾಣಿಕರು ಗಾಯಗೊಂಡಿರೋ ಘಟನೆ ಮಡಿಕೇರಿಯ ಬೋಯಿಕೇರಿ ಬಳಿಯಲ್ಲಿ ನಡೆದಿದೆ. ಅದೃಷ್ಠವಶಾತ್ ಈ ಅಪಘಾತದಲ್ಲಿ ( Accident ) ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂಬುದಾಗಿ ತಿಳಿದು ಬಂದಿದೆ.
ಮಡಿಕೇರಿಯ ಬೋಯಿಕೇರಿ ಸಮೀಪದಲ್ಲಿ ಇಂದು 21 ಪ್ರಯಾಣಿಕರಿದ್ದಂತ ಕೆ ಎಸ್ ಆರ್ ಟಿ ಸಿ ಬಸ್ ಹಾಗೂ ಬೈಕ್ ನಡುವೆ ಡಿಕ್ಕಿಯಾಗಿದೆ. ಬೈಕ್ ಬಸ್ಸಿನ ಚಕ್ರದಡಿ ಸಿಲುಕಿದ ಪರಿಣಾಮ, ಬಸ್ ರಸ್ತೆ ಪಕ್ಕಕ್ಕೆ ಉರುಳಿ ಬಿದ್ದಿದೆ.
ಪತ್ರಿಕಾಗೋಷ್ಠಿಯಲ್ಲಿ ʻಆ ಒಂದು ಪದʼ ಬಳಸಲು ನಾಚಿ ನೀರಾದ ʻರಾಹುಲ್ ದ್ರಾವಿಡ್ʼ!… ವಿಡಿಯೋ ವೈರಲ್
ಬಸ್ ಉರುಳಿ ಬಿದ್ದ ಕಾರಣ ಬಸ್ಸಿನಲ್ಲಿದ್ದಂತ 21 ಪ್ರಯಾಣಿಕರಲ್ಲಿ ಹಲವರಿಗೆ ಗಾಯಗಳಾಗಿರೋದಾಗಿ ತಿಳಿದು ಬಂದಿದೆ. ಬೈಕ್ ಬಸ್ ನ ಚಕ್ರದಡಿ ಸಿಲುಕಿಕೊಂಡರೂ ಕೂಡ, ಬೈಕ್ ಸವಾರ ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
2029ರ ವೇಳೆಗೆ ಭಾರತವು ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ: ಎಸ್ಬಿಐ ವರದಿ
ಅಂದಹಾಗೇ ಕೆ ಎಸ್ ಆರ್ ಟಿ ಸಿ ಬಸ್ ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿತ್ತು. ಈ ಸಂದರ್ಭದಲ್ಲಿ ಬೋಯಿಕೇರಿ ಬಳಿಯಲ್ಲಿ ಬೈಕ್ ಗೆ ಡಿಕ್ಕಿಯಾಗಿ ಪಲ್ಟಿಯಾಗಿದೆ.