ಬೆಂಗಳೂರು: ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ( CM Basavaraj Bommai ) ನೇತೃತ್ವದಲ್ಲಿ ಮಹತ್ವದ ಸಚಿವ ಸಂಪುಟ ಸಭೆ ( Karnataka Cabinet Meeting ) ನಡೆಯಿತು. ಈ ಸಭೆಯಲ್ಲಿ ರಾಜ್ಯದ ಶಾಲಾ ವಿದ್ಯಾರ್ಥಿಗಳಿಗೆ ( School Children’s ) ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್ ನೀಡೋದಕ್ಕೆ 123 ಕೋಟಿ ಅನುದಾನಕ್ಕೆ ಒಪ್ಪಿಗೆ ಸೂಚಿಸಿದೆ. ಇದಲ್ಲದೇ ಕಸ್ತೂರಿ ರಂಗನ್ ವರದಿಯನ್ನು ( Kasturirangan report ) ತಿರಸ್ಥರಿಸಲು ನಿರ್ಧಾರ ಕೈಗೊಂಡಿದ್ದು, ಈ ಬಗ್ಗೆ ಕೇಂದ್ರಕ್ಕೆ ತಿಳಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ. ಆ ಎಲ್ಲಾ ಹೈಲೈಟ್ಸ್ ಮುಂದೆ ಓದಿ..
ಈ ಬಗ್ಗೆ ಸಚಿವ ಸಂಪುಟ ಸಭೆಯ ಬಳಿಕ ಮಾಹಿತಿ ನೀಡಿದಂತ ಸಚಿವ ಜೆ ಸಿ ಮಾಧುಸ್ವಾಮಿಯವರು, ರಸಗೊಬ್ಬರ ದಾಸ್ತಾನಿಗೆ ಬ್ಯಾಂಕ್ ಗ್ಯಾರೆಂಟಿ, ಕೃಷಿ ಇಲಾಖೆಗೆ ಶೂರಿಟಿ ಕೊಡಲು ಅವಕಾಶ ಮಾಡಿಕೊಡಲಾಗಿದೆ ಎಂದರು.
ವಿವಿಧ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದವರಿಗೆ ಮಹತ್ವದ ಮಾಹಿತಿ: ಪರೀಕ್ಷಾ ಪೂರ್ವ ತರಬೇತಿ ಶಿಬಿರಕ್ಕೆ ಅರ್ಜಿ ಆಹ್ವಾನ
ಕಂಪ್ಲಿಯಲ್ಲಿ 100 ಹಾಸಿಗೆ ಆಸ್ಪತ್ರೆಗೆ ಅನುಮತಿ ನೀಡಲಾಗಿದೆ. 20 ಕೋಟಿರೂ.ವೆಚ್ಚದಲ್ಲಿ ಅನುಮತಿಸಲಾಗಿದೆ. ಉದ್ಯೋಗ ನೀತಿ ತಿದ್ದುಪಡಿಗೆ ಅನುಮತಿ ನೀಡಲಾಗಿದೆ. ಈ ಮೂಲಕ ಉದ್ಯೋಗಾವಕಾಶ ಹೆಚ್ಚಳ ಮಾಡಲಾಗುತ್ತದೆ ಎಂದು ಹೇಳಿದರು.
ಕೆಟಗರಿ ವೈಸ್ ಅವಕಾಶ ನೀಡಲು ಅನುಮತಿಸಲಾಗಿದೆ. 50 ಕೋಟಿ ವರೆಗೆ ಬಂಡವಾಳ ಹಾಕಲು ಅವಕಾಶ ನೀಡಲಾಗುತ್ತಿದೆ. ಕನ್ನಡಿಗರಿಗೆ ಉದ್ಯೋಗಾವಕಾಶ ನೀಡಬೇಕು. ಯಾರು ಕಂಪನಿ ಮಾಡ್ತಾರೆ ಅವರು ನೀಡಬೇಕು ಎಂದರು.
ಇನ್ವೆಸ್ಟ್ ಮೆಂಟ್ ಆಧಾರದಲ್ಲಿ ಕ್ಲಾಸ್ ಮಾಡಲಾಗಿದೆ. ಬೃಹತ್, ದೊಡ್ಡ, ಸಣ್ಣ ಎಂದು ಗುರ್ತಿಸಲಾಗಿದೆ. ಇದರಲ್ಲಿ ಕನ್ನಡಿಗರಿಗೆ ಹೆಚ್ಚಿನ ಅವಕಾಶಕ್ಕೆ ತಿಳಿಸಿದ್ದೇವೆ ಎಂದು ಹೇಳಿದರು.
‘ಭಗವತಿ ಏತ ನೀರಾವರಿ ಯೋಜನೆ’ಗೆ ‘ಸಚಿವ ಸಂಪುಟ’ ಅಸ್ತು – ಸಚಿವ ಗೋವಿಂದ ಕಾರಜೋಳ
ಶೂ, ಸಾಕ್ಸ್ ವಿತರಣೆಗೆ ಘಟನೋತ್ತರ ಅನುಮೋದನೆ ನೀಡಲಾಗಿದೆ. 123 ಕೋಟಿ ಅನುದಾನ ಸರ್ಕಾರ ಒದಗಿಸಿತ್ತು. ಒಂದು ಜೊತೆ ಶೂ, ಎರಡು ಜೊತೆ ಸಾಕ್ಸ್ ವಿತರಣೆ ಮಾಡಲು ಬಜೆಟ್ ನಲ್ಲಿ ಕೇವಲ ಅನೌನ್ಸ್ ಮಾಡಲಾಗಿತ್ತು. ಇಂದಿನ ಕ್ಯಾಬಿನೆಟ್ ನಲ್ಲಿ ಅಪ್ರೂವ್ ಮಾಡಿದ್ದೇವೆ ಎಂದರು.
ಸನ್ನಡತೆ ಅಧಾರದಲ್ಲಿ ಕೈದಿಗಳ ಬಿಡುಗಡೆ ವಿಚಾರ ಮಾತನಾಡಿದ ಅವರು, ಮೊದಲಿದ್ದ ನಿಯಮಗಳಿಗೆ ತಿದ್ದುಪಡಿ ಮಾಡಲಾಗಿದೆ. ಎರಡು ಮೂರು ಮರ್ಡರ್ ಮಾಡಿದವರು, ಮಕ್ಕಳ ಮೇಲೆ ಅತ್ಯಾಚಾರ ಮಾಡಿದವರು, ಮಹಿಳೆಯರ ಅತ್ಯಾಚಾರ, ಕೊಲೆ ಮಾಡಿದವರು, ಇವರನ್ನ ಬಿಡುಗಡೆ ನಿಯಮದಿಂದ ಕೈಬಿಡಲಾಗಿದೆ. ಸನ್ನಡತೆ ಆಧಾರದ ಮೇಲೆ ಮೊದಲು ಇವರಿಗೆ ಅವಕಾಶವಿತ್ತು. ಈಗ ಅಂತವರನ್ನ ಬಿಡದಂತೆ ನಿಯಮಗಳಿಗೆ ಬ್ರೇಕ್ ಹಾಕಲಾಗಿದೆ. ಇವರನ್ನು ಬಿಟ್ಟು ಬೇರೆಯ ಖೈದಿಗಳಿಗೆ ಸನ್ನಡತೆಯ ಆಧಾರದ ಮೇಲೆ ಬಿಡುಗಡೆಗಾಗಿ ರಾಜ್ಯಾಪಾಲರಿಗೆ ಶಿಫಾರಸು ಮಾಡಿದ್ದೇವೆ ಎಂದರು.
Viral Video: ನೀರೆಂದುಕೊಂಡು ಬಿಯರ್ ಕುಡಿದ ಕೋಳಿಗಳು… ಮುಂದೇನಾಯ್ತು ಅಂತಾ ಇಲ್ಲಿ ನೋಡಿ!
ಲಕ್ಷ ಮನೆ ಯೋಜನೆ ಬಗ್ಗೆ ಮಾಹಿತಿ ನೀಡಿದ ಅವರು, ಸಿಂಗಲ್ ಬೆಡ್ ರೂಂಗೆ ಸಬ್ಸಿಡಿ ಇದೆ. ಡಬಲ್ ಬೆಡ್ ರೂಂಗೆ ಸಬ್ಸಿಡಿ ಇಲ್ಲ. ಈಗಾಗಲೇ 8000 ಮನೆಗಳನ್ನ ಕಟ್ಟಿದ್ದೇವೆ. 6000 ಮನೆಗಳಿಗೆ ಈಗಾಗಲೇ ಹಣ ಕಟ್ಟಿದ್ದಾರೆ. ಡಬಲ್ ಬೆಡ್ ರೂಂ ಹಣ 14 ಲಕ್ಷಕ್ಕೆ ಇಳಿಸಿದ್ದೇವೆ. ಮೊದಲು 15 ಲಕ್ಷ ಹಣ ನಿಗದಿ ಮಾಡಲಾಗಿತ್ತು ಎಂದು ಹೇಳಿದರು.
ಮೈಸೂರು ವಿಮಾನ ನಿಲ್ದಾಣ ವಿಸ್ತರಣೆ ಕುರಿತು ಮಾತನಾಡಿದ ಅವರು, ರಾಷ್ಟ್ರೀಯ ವಿಮಾನ ಪ್ರಾಧಿಕಾರಕ್ಕೆ ಭೂಮಿ ಹಸ್ತಾಂತರ ಮಾಡಲಾಗಿದೆ. 242 ಎಕರೆ ಭೂಮಿ ಹಸ್ತಾಂತರ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಹೆಸರಿಡಲು ನಿರ್ಧಾರಿಸಲಾಗಿದೆ ಎಂದರು.
ಮಚಖಂಡಿ ಕೆರೆಗೆ ಘಟಪ್ರಭಾ ನೀರು ಪೂರೈಕೆ ಮಾಡಲಾಗುತ್ತದೆ. ಜಲಜೀವನ್ ಮಿಷನ್ ಅಡಿ ಕುಡಿಯುವ ನೀರು ಪೂರೈಕೆ. ಕಿತ್ತೂರು ತಾ.ದೇಗಾಂವ 16 ಗ್ರಾಮಗಳಿಗೆ ನೀರು ಪೂರೈಕೆ. 565 ಕೋಟಿ ಮೊತ್ತದ ಯೋಜನೆಗೆ ಸಂಪುಟ ಒಪ್ಪಿಗೆ ನೀಡಲಾಗಿದೆ. ದೇವತ್ಕಲ್ ಏತ ನೀರಾವರಿ ಯೋಜನೆಗೆ ಅನುಮತಿ ನೀಡಲಾಗಿದೆ. ಒಟ್ಟು 119 ಕೋಟಿ ವೆಚ್ಚಕ್ಕೆ ಸಂಪುಟ ಒಪ್ಪಿಗೆ ಸೂಚಿಸಲಾಗಿದೆ ಎಂದರು.
ಹುಕ್ಕೇರಿ ತಾಲೂಕಿನ 19 ಕೆರೆಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ. ಹಿರಣ್ಯಕೇಶಿ ನದಿಯಿಂದ ಪೂರೈಕೆಗೆ ಒಪ್ಪಿಗೆ ಸೂಚಿಸಲಾಗಿದೆ. ಒಟ್ಟು 42 ಕೋಟಿ ಮೊತ್ತದ ಯೋಜನೆಯಾಗಿದೆ. ಮಚಕಂಡಿ ಕೆರೆಗೆ ಘಟಪ್ರಭಾದಿಂದ ನೀರು ಪೂರೈಕೆ ಮಾಡಲಾಗುತ್ತದೆ. 49 ಕೋಟಿ ರೂಗಳ ಅನುದಾನಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಕೊಪ್ಪಳದ ಹಿರೆಹಳ್ಳ ಬ್ಯಾರೇಜ್ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ ಎಂದು ಹೇಳಿದರು.
ಬಳ್ಳಾರಿ ನ್ಯಾಯಾಲಯ ಸಂಕೀರ್ಣ ನಿರ್ಮಾಣಕ್ಕೆ 121 ಕೋಟಿ ಅನುದಾನ ನೀಡಲು ಸಂಪುಟದ ಒಪ್ಪಿಗೆ ನೀಡಿದೆ. ಹೇರೂರಿನ 16 ಗ್ರಾಮಗಳಿಗೆ ಕುಡಿಯುವ ನೀರಿಗಾಗಿ 43 ಕೋಟಿ ವೆಚ್ಚಕ್ಕೆ ಅನುಮೋದನೆ ನೀಡಲಾಗಿದೆ. ಅಥಣಿಯ ಸತ್ತಿ ಗ್ರಾಮದ ಕುಡಿಯುವ ನೀರಿನ ಯೋಜನೆಗಾಗಿ 79 ಕೋಟಿ ವೆಚ್ಚಕ್ಕೆ ಸಂಪುಟ ಒಪ್ಪಿಗೆ ನೀಡಿದೆ ಎಂದರು.
ರಾಷ್ಟ್ರೋತ್ಥಾನ ಪರಿಷತ್ ಗೆ ಭೂಮಿ ಮಂಜೂರು ಮಾಡಲಾಗಿದೆ. ಶಿಕ್ಷಣ ಸಂಸ್ಥೆಗಳ ನಿರ್ಮಾಣಕ್ಕೆ ಮಂಜೂರು ಮಾಡಿದೆ. ಅನಂತ್ ಕುಮಾರ್ ಪ್ರತಿಷ್ಠಾನಕ್ಕೆ ಭೂಮಿ ಮಂಜೂರು ಮಾಡಲಾಗಿದೆ. 3 ಎಕರೆ ಜಮೀನು ಮಂಜೂರು ಮಾಡಲಾಗಿದೆ. ದೇವನಹಳ್ಳಿ ಕುಂದಾಣ ಹೋಬಳಿಯಲ್ಲಿ ನೀಡಿಕೆ. ಹಸಿರು ಸಂರಕ್ಷಣೆಗಾಗಿ ಭೂಮಿ ನೀಡಿಕೆಗೆ ಒಪ್ಪಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.
ಕಸ್ತೂರಿರಂಗನ್ ವರದಿಗೆ ಆಕ್ಷೇಪಣೆ ಬಗ್ಗೆ ಮಾತನಾಡಿದ ಅವರು, ಆ ಭಾಗದ ಜನತೆಗೆ ಅನ್ಯಾಯವಾಗಲಿದೆ. ಎರಡು ಬಾರಿ ಸರ್ಕಾರ ಆಕ್ಷೇಪಣೆ ಸಲ್ಲಿಸಿದೆ. ಅರಣ್ಯ ಜನರನ್ನ ಒಕ್ಕಲೆಬ್ಬಿಸುವುದು ಸರಿಯಲ್ಲ. ಇದರ ಬಗ್ಗೆ ಸಮಗ್ರ ವಿವರವನ್ನ ಕೇಂದ್ರಕ್ಕೆ ಸ್ಪಷ್ಟಪಡಿಸಿದ್ದೇವೆ. ಕಸ್ತೂರಿರಂಗನ್ ವರದಿಗೆ ಸರ್ಕಾರ ವಿರೋಧವಿದೆ ಎಂದರು.
ಒಬಿಸಿ ಮೀಸಲಾತಿ ಸುಪ್ರೀಂ ಮುಂದಿದೆ. ಹಾಗಾಗಿ ಅದರ ಬಗ್ಗೆ ಚರ್ಚೆ ಇಲ್ಲ. ಭಕ್ತವತ್ಸಲಂ ಕಮಿಟಿ ರಿಪೋರ್ಟ್ ಕೊಟ್ಟಿದೆ. ಸೆಪ್ಟಂಬರ್ ವರೆಗೆ ಇದರ ಬಗ್ಗೆ ಗಮನಹರಿಸಲ್ಲ
ಸುಪ್ರೀಂ ಏನು ಹೇಳುತ್ತೆ ಅದರ ಮೇಲೆ ತೀರ್ಮಾನ ಕೈಗೊಳ್ಳಲಾಗುತ್ತದೆ. ಮೀಸಲಾತಿ ಬಹಳ ಗೊಂದಲವಿದೆ. ನಿರ್ದಿಷ್ಟ ಮಾನದಂಡಗಳು ಇದರ ಬಗ್ಗೆ ಇಲ್ಲ. ಆರ್ಥಿಕ ಶೈಕ್ಷಣಿಕ ಮೀಸಲಾತಿ ಇದಕ್ಕೂ ಅನ್ವಯಿಸಿದ್ದೆವು. ರಾಜಕೀಯ ಮೀಸಲಾತಿಗೂ ಅನ್ವಯಿಸಿದ್ದೆವು. ಹಾಗಾಗಿ ಇದರ ಬಗ್ಗೆ ಇನ್ನೂ ಗೊಂದಲವಿದೆ ಎಂದು ತಿಳಿಸಿದರು.