ಬೆಂಗಳೂರು: ಆಗಸ್ಟ್ 15, 2022ರಂದು ಮಾಣಿಕ್ ಷಾ ಮೈದಾನದಲ್ಲಿ ಸ್ವಾತಂತ್ರ್ಯೋತ್ಸವವ ಕಾರ್ಯಕ್ರಮ ನಡೆಯಲಿದೆ. ಈ ಹಿನ್ನಲೆಯಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆಯನ್ನು ಮಾಡಲಾಗಿದೆ.
ಈ ಬಗ್ಗೆ ಬೆಂಗಳೂರು ನಗರ ಸಂಚಾರ ಪೊಲೀಸರು ಮಾಹಿತಿ ಬಿಡುಗಡೆ ಮಾಡಿದ್ದು, 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆಯ ಅಂಗವಾಗಿ ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಈ ಹಿನ್ನಲೆಯಲ್ಲಿ ಕೆಲ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ತಿಳಿಸಿದೆ.
BIG NEWS: 1 ಕಿಲೋಮೀಟರ್ ನದಿಯಲ್ಲಿ ಕೊಚ್ಚಿ ಹೋದ್ರು.. ಪವಾಡ ಸಾದೃಶ ರೀತಿಯಲ್ಲಿ ಬದುಕಿ ಬಂದ ರೈತ: ಹೇಗೆ ಗೊತ್ತಾ.?
ಈ ಸ್ಥಳಗಳಲ್ಲಿ ವಾಹನ ನಿಲುಗಡೆ ನಿಷೇಧ
- ಸೆಂಟ್ರಲ್ ಸ್ಟ್ರೀಟ್, ಅನಿಲ್ ಕುಂಬ್ಳೆ ಸರ್ಕಲ್ ನಿಂದ ಶಿವಾಜಿನಗರ ಬಸ್ ನಿಲ್ದಾಣದವರೆಗೆ
- ಕಬ್ಬನ್ ರಸ್ತೆ, ಸಿಟಿಓ ವೃತ್ತದಿಂದ ಕೆ ಆರ್ ರಸ್ತೆ ಮತ್ತು ಕಬ್ಬನ್ ರಸ್ತೆ ಜಂಕ್ಷನ್ ವರೆಗೆ
- ಎಂ.ಜಿ ರಸ್ತೆ, ಅನಿಲ್ ಕುಂಬ್ಳೆ ವೃತ್ತದಿಂದ ಕ್ವೀನ್ಸ್ ವೃತ್ತದವರೆಗೆ
BIGG NEWS : ಸ್ವಾತಂತ್ರ್ಯ ಸಂಗ್ರಾಮ ಇತಿಹಾಸ ʼಇಂದಿನ ಯುವ ಸಮೂಹʼ ಅರಿತುಕೊಳ್ಳಬೇಕು : ಸಚಿವ ವಿ.ಸೋಮಣ್ಣ
ಈ ಸ್ಥಳಗಳಲ್ಲಿ ವಾಹನ ನಿಲುಗಡೆಗೆ ಅವಕಾಶ
ಬಿಳಿ ಕಾರ್ ಪಾಸ್
- ಈ ಪಾಸ್ ಹೊಂದಿರುವವರಿಗೆ ಕಬ್ಬನ್ ರಸ್ತೆಯಲ್ಲಿ ಸಂಚರಿಸಿ, ಪ್ರವೇಶ ದ್ವಾರ-3ರ ಮುಖಾಂತರ ಒಳ ಪ್ರವೇಶಿಸಲು ಅವಕಾಶ ನೀಡಲಾಗಿದೆ. ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದಲ್ಲಿನ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಳ್ಳುವವರು ತಮ್ಮ ವಾಹನಗಳನ್ನು ಮಣಿಪಾಲ್ ಸೆಂಟರ್ ನಿಂದ ಕಬ್ಬನ್ ರಸ್ತೆ ಜಂಕ್ಷನ್, ಸಫೀನಾ ಫ್ಲಾಜಾದ ಬಳಿ ಕಾಮರಾಜ ರಸ್ತೆ, ಆರ್ಮಿ ಪಬ್ಲಿಕ್ ಶಾಲೆ ಮುಂದೆ ರಸ್ತೆಯ ಎರಡು ಬದಿಗಳಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ.
ಪಿಂಕ್ ಪಾಸ್ ಹೊಂದಿರುವವರು
- ಈ ಪಾಸ್ ಹೊಂದಿರುವವರು ಮೈನ್ ಗಾರ್ಡ್ ಕ್ರಾಸ್ ರಸ್ತೆ ಸಫೀನಾ ಪ್ಲಾಜಾ ಮುಂಭಾಗ, ಕಾಮರಾಜ ರಸ್ತೆ ಆರ್ಮಿ ಪಬ್ಲಿಕ್ ಶಾಲೆ ಮುಂಭಾಗ ನಿಲುಗಡೆ ಮಾಡಿ ಗೇಟ್ ನಂ.2ರಲ್ಲಿ ಕಾಲ್ನಡಿಗೆಯ ಮೂಲಕ ಫೀಲ್ಡ್ ಮಾರ್ಷಲ್ ಮಾಣಿಕ್ ಶಾ ಮೈದಾನ ಪ್ರವೇಶಿಸಬೇಕು.
ಸಾರ್ವಜನಿಕರೇ ಎಚ್ಚರ ; ವಾಟ್ಸಾಪ್ನಲ್ಲಿ ‘ಬಿಲ್ ಕ್ಲಿಯರ್ ಮಾಡಿ’ ಅಂತಾ ಮೆಸೇಜ್ ಬಂದ್ರೆ ಹುಷಾರು.!
ಹಸಿರು ಬಣ್ಣದ ಪಾಸ್ ಹೊಂದಿರುವವರು
- ತಮ್ಮ ವಾಹನಗಳನ್ನು ಶಿವಾಜಿನಗರ ಬಸ್ ನಿಲ್ದಾಣ 1ನೇ ಮಹಡಿಯ ವಾಹನ ನಿಲುಗಡೆ ಸ್ಥಳದಲ್ಲಿ ನಿಲುಗಡೆ ಮಾಡಿ, ಪರೇಡ್ ಮೈದಾನದ ಪ್ರವೇಶ ದ್ವಾರ 4ರ ಮುಖಾಂತರ ಕಾಲ್ನಡಿಗೆಯಲ್ಲಿ ಒಳ ಪ್ರವೇಶಿಸುವಂತೆ ಸೂಚಿಸಲಾಗಿದೆ.
ಮಾಧ್ಯಮದವರಿಗೆ
- ಇನ್ನೂ ಈ ಕಾರ್ಯಕ್ರಮಕ್ಕೆ ಬರುವಂತ ಎಲ್ಲಾ ಮಾಧ್ಯಮದವರ ವಾಹನಗಳು, ಇತರೆ ಇಲಾಖೆಗಳ ಮೇಲಧಿಕಾರಿಗಳ ವಾಹನಗಳು ಪ್ರವೇಶ ದ್ವಾರ 4ರ ಮೂಲಕ ಒಳಪ್ರವೇಶಿಸಿ, ಮೈದಾನ ಪೂರ್ವ ಭಾಗದಲ್ಲಿ ವಾಹನ ನಿಲುಗಡೆ ಮಾಡಬಹುದಾಗಿದೆ.
ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಭಾಗಿಯಾಗುವವರು
- ಕವಾಯಿತಿನಲ್ಲಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಾರ್ವಜನಿಕರು, ವಿದ್ಯಾರ್ಥಿಗಳನ್ನು ಕರೆತರುವ ಎಲ್ಲಾ ಬಸ್ ಗಳು ಪ್ರವೇಶ ದ್ವಾರ 2ರ ಬಳಿ ನಿಲ್ಲಿಸಿ, ಮಕ್ಕಳನ್ನು ಇಳಿಸಿ, ನಂತ್ರ ತಮ್ಮ ವಾಹನಗಳನ್ನು ಎಂಜಿ ರಸ್ತೆಯಲ್ಲಿ, ಅನಿಲ್ ಕುಂಬ್ಳೆ ವೃತ್ತದಿಂದ ಮೆಟ್ರೋ ನಿಲ್ದಾಣದ ವರೆಗೆ ರಸ್ತೆಯ ಉತ್ತರ ಭಾಗದಲ್ಲಿ ವಾಹನಗಳನ್ನು ನಿಲುಗಡೆ ಮಾಡತಕ್ಕದ್ದು.
ದಿನಾಂಕ : 15.08.2022 ರಂದು ಫೀಲ್ಡ್ ಮಾರ್ಷಲ್ ಮಾಣಿಕ್ ಷಾ ಕವಾಯತು ಮೈದಾನದಲ್ಲಿ 75ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಈ ಕೆಳಕಂಡಂತೆ ವಾಹನ ನಿಲುಗಡೆ ನಿಷೇಧ ಮತ್ತು ವಾಹನ ನಿಲುಗಡೆಗೆ ವ್ಯವಸ್ಥೆ ಹಾಗೂ ಸಂಚಾರ ನಿರ್ಬಂಧ ಮತ್ತು ನಿರ್ಬಂಧಿಸಿದ ಸಂಚಾರಕ್ಕೆ ಪರ್ಯಾಯ ವ್ಯವಸ್ಥೆಯ ಬಗ್ಗೆ ತಿಳಿಸಲಾಗಿದೆ. pic.twitter.com/aorojBUAmt
— Dr.B.R. Ravikanthe Gowda IPS (@jointcptraffic) August 13, 2022