ತೆಹ್ರಾನ್: ಇರಾನ್ ಮತ್ತು ಅಮೆರಿಕ ನಡುವಿನ ಶಾಂತಿ ಮಾತುಕತೆಗಳು ಹಳಿತಪ್ಪುತ್ತಿರುವ ಬೆನ್ನಲ್ಲೇ, ಇರಾನ್ ನೌಕಾಪಡೆಯ ಮುಖ್ಯಸ್ಥ ರಿಯರ್ ಅಡ್ಮಿರಲ್ ಶಹ್ರಾಮ್ ಇರಾನಿ (Shahram Irani) ಅಮೆರಿಕಕ್ಕೆ ವ್ಯಂಗ್ಯಭರಿತ ಎಚ್ಚರಿಕೆಯನ್ನು ನೀಡಿದ್ದಾರೆ.
ಇತ್ತೀಚಿನ ಮಿಲಿಟರಿ ಬೆಳವಣಿಗೆಗಳ ಬಗ್ಗೆ ಮಾತನಾಡಿದ ಶಹ್ರಾಮ್ ಇರಾನಿ, “ನಮ್ಮ ಸಾಮರ್ಥ್ಯವನ್ನು ಕಂಡು ಅವರಿಗೆ (ಅಮೆರಿಕಕ್ಕೆ) ಹಾರ್ಟ್ ಅಟ್ಯಾಕ್ ಆಗದಿರಲಿ ಎಂದು ನಾನು ಆಶಿಸುತ್ತೇನೆ” ಎಂದು ಲೇವಡಿ ಮಾಡಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ನಡೆಯುತ್ತಿದ್ದ ಶಾಂತಿ ಮಾತುಕತೆಗಳು ಫಲಪ್ರದವಾಗದ ಹಿನ್ನೆಲೆಯಲ್ಲಿ ಈ ಹೇಳಿಕೆ ಹೊರಬಿದ್ದಿದೆ. ಹಾರ್ಮುಜ್ ಜಲಸಂಧಿಯ ಮೇಲಿನ ನಿಯಂತ್ರಣ ಮತ್ತು ಅಮೆರಿಕದ ದಿಗ್ಬಂಧನದ ವಿಚಾರವಾಗಿ ಉಭಯ ದೇಶಗಳ ನಡುವೆ ಸಂಘರ್ಷ ತೀವ್ರಗೊಂಡಿದೆ.
ಇರಾನ್ ಅನ್ನು ಕೇವಲ ಮೂರರಿಂದ ಏಳು ದಿನಗಳಲ್ಲಿ ಸೋಲಿಸಬಹುದು ಎಂಬ ಅಮೆರಿಕದ ಕಲ್ಪನೆ ಈಗ ಮಿಲಿಟರಿ ವಿಶ್ವವಿದ್ಯಾಲಯಗಳಲ್ಲಿ ತಮಾಷೆಯ ವಿಷಯವಾಗಿದೆ ಎಂದು ಇರಾನಿ ಟೀಕಿಸಿದ್ದಾರೆ.








