ಬೆಂಗಳೂರು: ರಾಜ್ಯಾಧ್ಯಂತ ಈಗಾಗಲೇ ಸುರಿದಂತ ಮಳೆಯಿಂದಾಗಿ ( Rain ) ಜನರು ತತ್ತರಿಸಿ ಹೋಗಿದ್ದಾರೆ. ಈ ನಡುವೆಯೂ ಇಂದು ರಾಜ್ಯದ 6 ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ( Heavy Rain ) ಎಂಬುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ( Weather department forecast ) ನೀಡಿದೆ. ಅಲ್ಲದೇ ರೆಡ್ ಅಲರ್ಟ್ ( Red Alert ) ಕೂಡ ಘೋಷಣೆ ಮಾಡಿದೆ.
Bengaluru Rain: ಬೆಂಗಳೂರಿನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಮಳೆ: ಜೂನ್ ನಿಂದ ಸೆ.6ರವರೆಗೆ 103 ಸೆ ಮೀ ಮಳೆ ದಾಖಲು
ಈ ಬಗ್ಗೆ ಮಾಹಿತಿ ಬಿಡುಗಡೆ ಮಾಡಿರುವಂತ ಭಾರತೀಯ ಹವಾಮಾನ ಇಲಾಖೆಯು ( India Meteorological Department ), ರಾಜ್ಯದ ಕೊಡಗು ಹಾಗೂ ಹಾಸನ ಜಿಲ್ಲೆಯಲ್ಲಿ 20.44 ಸೆ.ಮೀ ಗಿಂತ ಹೆಚ್ಚು ಮಳೆಯಾಗುವ ಸಾಧ್ಯತೆ ಇರೋದ್ರಿಂದ ರೆಡ್ ಅಲರ್ಟ್ ಘೋಷಣೆ ಮಾಡಿದೆ.
ಇನ್ನೂ ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ 11.56 ಸೆ. ಮೀಟ ನಿಂದ 20.44 ಸೆ. ಮೀ ವರೆಗೆ ಮಳೆಯಾಗುವ ನಿರೀಕ್ಷೆಯಿಂದ ಎಂದು ಹೇಳಿದ್ದು, ಆರೆಂಜ್ ಅಲರ್ಟ್ ( Orange Alert ) ಘೋಷಣೆ ಮಾಡಿದೆ.
ಇದಲ್ಲದೇ ಮಂಡ್ಯ, ತುಮಕೂರು, ಬಳ್ಳಾರಿ, ಶಿವಮೊಗ್ಗ, ಚಿತ್ರದುರ್ಗ, ಹಾವೇರಿ, ಉತ್ತರ ಕನ್ನಡ, ಗದಗ, ಬಾಗಲಕೋಟೆ, ಕೊಪ್ಪಳ, ಬೆಳಗಾವಿ ಜಿಲ್ಲೆಯಲ್ಲಿಯೂ ಮಳೆಯಾಗಲಿದೆ ಎಂದು ತಿಳಿಸಿ ಯೆಲ್ಲೋ ಅಲರ್ಟ್ ನೀಡಲಾಗಿದೆ.
Bengaluru Rain: ಬೆಂಗಳೂರಿನಲ್ಲಿ ಸಾರ್ವಕಾಲಿಕ ದಾಖಲೆ ಬರೆದ ಮಳೆ: ಜೂನ್ ನಿಂದ ಸೆ.6ರವರೆಗೆ 103 ಸೆ ಮೀ ಮಳೆ ದಾಖಲು