ಬೆಂಗಳೂರು: ನಗರದಲ್ಲಿ ಸುರಿಯುತ್ತಿರುವಂತ ಭಾರೀ ಮಳೆಯಿಂದಾಗಿ ( Heavy Rain ) ಬಹು ದೊಡ್ಡ ಅವಾಂತರವೇ ಉಂಟಾಗಿದೆ. ಎಲ್ಲೆಲ್ಲೂ ರಸ್ತೆಗೆ ನೀರು ನುಗ್ಗಿದ ಪರಿಣಾಮ, ಸಿಲಿಕಾನ್ ಸಿಟಿಯಲ್ಲಿ ( Silicon City ) ಜಲಪ್ರಳಯವೇ ಸೃಷ್ಠಿಯಾಗಿದೆ. ರಸ್ತೆಗಳಲ್ಲಿ ಎಲ್ಲೆಲ್ಲೂ ನೀರೋ ನೀರು. ಕರೆಯಾದ ರಸ್ತೆಗಳ ನೀರಿನಲ್ಲಿ ವಾಹನಗಳ ಮುಳುಗು ಸವಾರರು ಪರದಾಡುವಂತ ಪರಿಸ್ಥಿತಿ ಏರ್ಪಟ್ಟಿದೆ.
ಬೆಂಗಳೂರಿಗರೇ ಮನೆಯಿಂದ ಹೊರ ಬರೋ ಮುನ್ನಾ ಎಚ್ಚರ: ಮುಂದಿನ 3 ಗಂಟೆ ಭಾರಿ ಮಳೆ | Bengaluru Rain
ಬೆಂಗಳೂರಿನ ( Bengaluru Rain ) ಅನೇಕ ಕಡೆಯಲ್ಲಿ ವರುಣನ ಆರ್ಭಟದಿಂದಾಗಿ ಎಲ್ಲೆಲ್ಲೂ ರಸ್ತೆಗಳು ನದಿ, ಕೆರೆ, ಹೊಂಡಗಳಾಗಿ ಏರ್ಪಟ್ಟಿವೆ. ದೊಡ್ಡ ದೊಡ್ಡ ವಾಹನ ಸವಾರರು ಈ ಕೆರೆಯಲ್ಲೂ ಈಜಿ ಮುಂದೆ ಸಾಗಿದ್ರೇ.. ದ್ವಿಚಕ್ರ ವಾಹನ ಸವಾರರ ಪಾಟು ಹೇಳತೀರದಾಗಿದೆ.
ಅದರಲ್ಲೂ ಬೆಂಗಳೂರಿನ ಇನ್ಪೋಸಿಸ್ ಬಳಿಯಲ್ಲಿ ನಮ್ಮ ಮೆಟ್ರೋ ಕಾಮಗಾರಿ ನಡೆಯುತ್ತಿರೋ ಕಾರಣ, ಸೊಂಟಮಟ್ಟದಲ್ಲಿ ನೀರು ರಸ್ತೆಯಲ್ಲಿ ಹರಿಯುತ್ತಿದೆ. ನದಿಯಾದಂತ ರಸ್ತೆಯಲ್ಲಿ ಬೈಕ್ ಸವಾರರು ಮುಳುಗಿರೋ ದೃಶ್ಯಾವಳಿಯ ವೀಡಿಯೋ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ. ಆ ವೀಡಿಯೋ ಈ ಕೆಳಗಿದೆ ನೀವು ಒಮ್ಮೆ ನೋಡಿ..
#NammaBengaluru #RainEffect ನೋಡಿ ಸಿಲಿಕಾನ್ ಸಿಟಿ ಬೆಂಗಳೂರಿನ ಮಳೆಯಿಂದ ಉಂಟಾದ ಜಲಪ್ರಳಯ.. ನೀರಲ್ಲಿ ಮುಳುಗಿದ ವಾಹನ ಸವಾರರ ಪರಿಸ್ಥಿತಿ.. pic.twitter.com/pGe3D8i43R
— Vasantha B Eshwaragere (@vasanthabeshwar) September 5, 2022
ಅಂದಹಾಗೇ ಮೆಟ್ರೋ ಕಾಮಗಾರಿ ಕೆಲಸದಿಂದಾಗಿ ಸರಿಯಾದಂತ ಒಳಚರಂಡಿ ವ್ಯವಸ್ಥೆ ಇಲ್ಲದೇ ರಸ್ತೆಗೆ ಮಳೆಯ ನೀರು ನುಗ್ಗಿದೆ. ಇನ್ನೂ ಕೆಲವೆಡೆ ರಾಜಕಾಲುವೆ ಒತ್ತುವರಿ, ಒಳ ಚರಂಡಿ ಸಮರ್ಪಕ ನಿರ್ವಹಣೆ ಮಾಡದೇ ಇರೋ ಬಿಬಿಎಂಪಿಯ ನಿರ್ಲಕ್ಷ್ಯದಿಂದಲೂ ಸಮಸ್ಯೆ ಉಂಟಾಗಿದೆ. ಈ ಬಗ್ಗೆ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ ಎಂಬುದನ್ನು ಕಾದು ನೋಡಬೇಕಿದೆ.