Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಬೇಸಿಗೆಯಲ್ಲಿ ‘ಲೈಟ್ ಫುಡ್’ ಸೇವಿಸುತ್ತಿದ್ದೀರಾ? ಎಚ್ಚರ! ಹಗುರ ಆಹಾರದ ಅತಿಯಾದ ಸೇವನೆಯಿಂದ ಕಾಡಬಹುದು ಈ 5 ಆರೋಗ್ಯ ಸಮಸ್ಯೆಗಳು

25/04/2026 7:30 PM

ರಾಘವ್ ಚಡ್ಡಾ ಬಿಜಿಪಿ ಸೇರ್ಪಡೆ: ಒಂದೇ ದಿನದಲ್ಲಿ 10 ಲಕ್ಷ ಫಾಲೋವರ್ಸ್ ಲಾಸ್ಟ್ | Raghav Chadha

25/04/2026 7:21 PM

ಇರಾನ್‌ನಲ್ಲಿ ಮತ್ತೆ ವಿಮಾನಗಳ ಹಾರಾಟ ಆರಂಭ: ಎರಡು ತಿಂಗಳ ಯುದ್ಧದ ನಂತರ ಟೆಹ್ರಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪುನಾರಂಭ!

25/04/2026 7:16 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಮುಸ್ಲಿಂ ದಂಪತಿಗೆ ವಿವಾಹ ಪ್ರಮಾಣಪತ್ರ ನೀಡುವ ರಾಜ್ಯ ವಕ್ಫ್‌ ಮಂಡಳಿ ಆದೇಶಕ್ಕೆ ‘ಹೈಕೋರ್ಟ್’ನಿಂದ ಮಧ್ಯಂತರ ತಡೆ
KARNATAKA

ಮುಸ್ಲಿಂ ದಂಪತಿಗೆ ವಿವಾಹ ಪ್ರಮಾಣಪತ್ರ ನೀಡುವ ರಾಜ್ಯ ವಕ್ಫ್‌ ಮಂಡಳಿ ಆದೇಶಕ್ಕೆ ‘ಹೈಕೋರ್ಟ್’ನಿಂದ ಮಧ್ಯಂತರ ತಡೆ

By kannadanewsnow0922/11/2024 7:21 PM

ಬೆಂಗಳೂರು: ವಿವಾಹಿತ ಮುಸ್ಲಿಂ ದಂಪತಿಗೆ ವಿವಾಹ ಪ್ರಮಾಣಪತ್ರ ನೀಡಲು ರಾಜ್ಯ ವಕ್ಫ್‌ ಮಂಡಳಿಗೆ ಅನುಮತಿ ನೀಡಿ ರಾಜ್ಯ ಸರ್ಕಾರ ಮಾಡಿದ್ದ ಆದೇಶವನ್ನು ಜನವರಿ 7ರವರೆಗೆ ಅಮಾನತಿನಲ್ಲಿಡುವ ಮೂಲಕ ರಾಜ್ಯ ಹೈಕೋರ್ಟ್‌ ಗುರುವಾರ ಮಧ್ಯಂತರ ಆದೇಶ ನೀಡಿದೆ. ಅಲ್ಲದೇ, ರಾಜ್ಯ ಸರ್ಕಾರ ಮತ್ತು ವಕ್ಪ್‌ ಮಂಡಳಿಗೆ ನೋಟಿಸ್‌ ಜಾರಿ ಮಾಡಿದೆ.

ಬೆಂಗಳೂರಿನ ಎ ಆಲಂ ಪಾಷಾ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

“ಮೇಲ್ನೋಟಕ್ಕೆ ಪ್ರಬಲವಾದ ಪ್ರಕರಣ ಕಂಡುಬಂದಿರುವುದರಿಂದ 2023 ರ ಆಗಸ್ಟ್ 30 ರಂದು ವಕ್ಫ್‌ ಮಂಡಳಿ ಮತ್ತು ಅದರ ಅಧಿಕಾರಿಗಳಿಗೆ ವಿವಾಹ ಪ್ರಮಾಣಪತ್ರಗಳನ್ನು ನೀಡಲು ಅನುಮತಿಸಿದ್ದ ಆಕ್ಷೇಪಾರ್ಹ ಆದೇಶವನ್ನು ಮುಂದಿನ ವಿಚಾರಣೆವರೆಗೆ ಅಮಾನತಿನಲ್ಲಿಡಲಾಗಿದೆ. ಸರ್ಕಾರದ ಆದೇಶದ ನೆಪದಲ್ಲಿ ವಕ್ಫ್‌ ಮಂಡಳಿ ಅಥವಾ ಅಧಿಕಾರಿಗಳು ವಿವಾಹ ಪ್ರಮಾಣಪತ್ರಗಳನ್ನು ಮುಂದಿನ ಆದೇಶದವರೆಗೆ ನೀಡುವಂತಿಲ್ಲ. ಯಾವುದೇ ಅರ್ಹತೆ ಇಲ್ಲದ ವಕ್ಫ್‌ ಮಂಡಳಿ ಅಥವಾ ಅಧಿಕಾರಿಗಳು ನೀಡುವ ವಿವಾಹ ಪ್ರಮಾಣಪತ್ರವನ್ನು ಯಾವುದೇ ಅಧಿಕೃತ ಉದ್ದೇಶಕ್ಕೆ ಸಿಂಧುವಾದ ಪ್ರಮಾಣಪತ್ರ ಎಂದು ಬಳಕೆ ಮಾಡುವುದನ್ನು ನಂಬಲು ಕಷ್ಟ” ಎಂದು ನ್ಯಾಯಾಲಯ ಹೇಳಿದೆ.

ರಾಜ್ಯ ಸರ್ಕಾರದ ಅಲ್ಪಸಂಖ್ಯಾತ, ವಕ್ಫ್‌ ಮತ್ತು ಹಜ್‌ ಇಲಾಖೆಯ ಅಧೀನ ಕಾರ್ಯದರ್ಶಿ 2023ರ ಆಗಸ್ಟ್‌ 30ರಂದು ಹೊರಡಿಸಿರುವ ಆದೇಶವು ವಕ್ಪ್‌ ಕಾಯಿದೆ 1995ಕ್ಕೆ ವಿರುದ್ಧವಾಗಿದೆ ಎಂದು ಆಕ್ಷೇಪಿಸಿ ಆಲಂ ಪಾಷಾ ಅವರು ಪಿಐಎಲ್‌ ಸಲ್ಲಿಸಿದ್ದರು.

ಅರ್ಜಿದಾರರ ಪರ ವಕೀಲೆ ಸರಸ್ವತಿ ಅವರು “ವಕ್ಪ್‌ ಮಂಡಳಿ ಅಥವಾ ವಕ್ಪ್‌ ಅಧಿಕಾರಿಗಳು ಮುಸ್ಲಿಂ ಸಮುದಾಯವರಿಗೆ ವಿವಾಹ ಪ್ರಮಾಣಪತ್ರ ನೀಡುವ ಅಧಿಕಾರ ಹೊಂದಿಲ್ಲ. ವಿವಾಹ ನೋಂದಣಿ ಕಾಯಿದೆ ಮತ್ತು ವಿಶೇಷ ವಿವಾಹ ನೋಂದಣಿ ಕಾಯಿದೆಯ ನಿಬಂಧನೆಗಳ ಅಡಿ ಯಾವುದೇ ಸಮುದಾಯದವರು ವಿವಾಹ ನೋಂದಣಿ ಮಾಡಿಸಬಹುದಾಗಿದೆ. ವಕ್ಪ್‌ ಕಾಯಿದೆಯು ತನ್ನದೇ ಆದ ವಿಶೇಷ ಉದ್ದೇಶಗಳನ್ನು ಹೊಂದಿದೆ. ವಕ್ಪ್‌ ಆಸ್ತಿ ಮತ್ತು ಸಂಬಂಧಿತ ವಿಚಾರಗಳಿಗೆ ಉತ್ತಮ ಆಡಳಿತ ನೀಡುವುದು ಕಾಯಿದೆಯ ಉದ್ದೇಶವಾಗಿದೆ” ಎಂದರು.

ವಾದ-ಪ್ರತಿವಾದ ಆಲಿಸಿ, ತಡೆ ವಿಧಿಸಿರುವ ನ್ಯಾಯಾಲಯವು ವಿಚಾರಣೆಯನ್ನು 2025ರ ಜನವರಿ 7ಕ್ಕೆ ಮುಂದೂಡಿದೆ.

ರಾಜ್ಯದ ‘ಮೀನುಗಾರ’ರಿಗೆ ಗುಡ್ ನ್ಯೂಸ್: ಇನ್ಮುಂದೆ ಅಪಾಯಕ್ಕೆ ಸಿಲುಕಿ ಮೃತಪಟ್ಟರೇ ’10 ಲಕ್ಷ’ ಪರಿಹಾರ

BREAKING : ಬೆಂಗಳೂರಲ್ಲಿ ಸಿಸಿಬಿ ಮತ್ತೊಂದು ಕಾರ್ಯಾಚರಣೆ : ಇಬ್ಬರು ವಿದೇಶಿ ಪೆಡ್ಲರ್ ಗಳ ಬಂಧನ

Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಬಿಸಿಲ ಬೇಗೆಯಿಂದ ಜನರನ್ನು ರಕ್ಷಿಸಲು ಸ್ಥಳೀಯ ಸಂಸ್ಥೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಈ ಕ್ರಮಕ್ಕೆ ಸೂಚನೆ

25/04/2026 6:53 PM2 Mins Read

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹರಿದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

25/04/2026 6:10 PM1 Min Read

BIG NEWS: ಮುಂದಿನ ದಿನಗಳಲ್ಲಿ ಅಪಮೃತ್ಯು ಭಯ, ಆಹಾರದ ಕ್ಷಾಮ; ಕೋಡಿಮಠದ ಶ್ರೀಗಳ ಸ್ಪೋಟಕ ಭವಿಷ್ಯ!

25/04/2026 5:45 PM2 Mins Read
Recent News

ಬೇಸಿಗೆಯಲ್ಲಿ ‘ಲೈಟ್ ಫುಡ್’ ಸೇವಿಸುತ್ತಿದ್ದೀರಾ? ಎಚ್ಚರ! ಹಗುರ ಆಹಾರದ ಅತಿಯಾದ ಸೇವನೆಯಿಂದ ಕಾಡಬಹುದು ಈ 5 ಆರೋಗ್ಯ ಸಮಸ್ಯೆಗಳು

25/04/2026 7:30 PM

ರಾಘವ್ ಚಡ್ಡಾ ಬಿಜಿಪಿ ಸೇರ್ಪಡೆ: ಒಂದೇ ದಿನದಲ್ಲಿ 10 ಲಕ್ಷ ಫಾಲೋವರ್ಸ್ ಲಾಸ್ಟ್ | Raghav Chadha

25/04/2026 7:21 PM

ಇರಾನ್‌ನಲ್ಲಿ ಮತ್ತೆ ವಿಮಾನಗಳ ಹಾರಾಟ ಆರಂಭ: ಎರಡು ತಿಂಗಳ ಯುದ್ಧದ ನಂತರ ಟೆಹ್ರಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪುನಾರಂಭ!

25/04/2026 7:16 PM

ಇಸ್ಲಾಮಾಬಾದ್‌ಗೆ ಅಮೆರಿಕ ಸಂಧಾನಕಾರರ ಭೇಟಿ: ನೇರ ಮಾತುಕತೆಗೆ ಇರಾನ್ ನಕಾರ; ಪಾಕಿಸ್ತಾನ ಮಧ್ಯಸ್ಥಿಕೆ!

25/04/2026 7:03 PM
State News
KARNATAKA

ರಾಜ್ಯದಲ್ಲಿ ಬಿಸಿಲ ಬೇಗೆಯಿಂದ ಜನರನ್ನು ರಕ್ಷಿಸಲು ಸ್ಥಳೀಯ ಸಂಸ್ಥೆಗಳಿಗೆ ಸಚಿವ ಪ್ರಿಯಾಂಕ್ ಖರ್ಗೆ ಈ ಕ್ರಮಕ್ಕೆ ಸೂಚನೆ

By kannadanewsnow0925/04/2026 6:53 PM KARNATAKA 2 Mins Read

ಬೆಂಗಳೂರು: ರಾಜ್ಯದಾದ್ಯಂತ, ವಿಶೇಷವಾಗಿ ಉತ್ತರ ಕರ್ನಾಟಕ ಭಾಗದಲ್ಲಿ ತಾಪಮಾನವು ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಆರೋಗ್ಯ ಮತ್ತು ಹಿತದೃಷ್ಟಿಯಿಂದ ಮುನ್ನೆಚ್ಚರಿಕಾ ಕ್ರಮಗಳನ್ನು…

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಹರಿದು ಇಂಜಿನಿಯರಿಂಗ್ ವಿದ್ಯಾರ್ಥಿನಿ ಸಾವು

25/04/2026 6:10 PM

BIG NEWS: ಮುಂದಿನ ದಿನಗಳಲ್ಲಿ ಅಪಮೃತ್ಯು ಭಯ, ಆಹಾರದ ಕ್ಷಾಮ; ಕೋಡಿಮಠದ ಶ್ರೀಗಳ ಸ್ಪೋಟಕ ಭವಿಷ್ಯ!

25/04/2026 5:45 PM

ಜಾನಪದ, ಕಲೆ, ಸಂಸ್ಕೃತಿಯನ್ನು ಉಳಿಸಿ, ಬೆಳೆಸುವುದು ನಮ್ಮೆಲ್ಲರ ಆದ್ಯತೆ: ಸಚಿವ ಎನ್. ಚಲುವರಾಯಸ್ವಾಮಿ

25/04/2026 5:39 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.