Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

ದಂಪತಿಗಳ ಲೈಂಗಿಕ ಜೀವನ ಸುಧಾರಿಸಲು ಈ ಒಂದು ಸರಳ ಅಭ್ಯಾಸ ಸಾಕು: ಸಂಶೋಧನೆಯಿಂದ ದೃಢ!

ದಂಪತಿಗಳ ನಡುವಿನ ಅನ್ಯೋನ್ಯತೆ ಹೆಚ್ಚಿಸಲು ಹೊಸ ಪ್ರಯೋಗ: ವೈವಾಹಿಕ ಜೀವನಕ್ಕೆ ಮರುಜೀವ ನೀಡಿದ ‘ನಗ್ನ ಛಾಯಾಚಿತ್ರ’

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸಾಗರದ ‘ಮಾರಿಗುಡಿ ನೂತನ ಸಮಿತಿ’ಗೆ ‘ಸರ್ಕಾರಿ ನೌಕರರ ಸಂಘ’ದಿಂದ ಸನ್ಮಾನ, ಅಭಿನಂದನೆ
KARNATAKA

ಸಾಗರದ ‘ಮಾರಿಗುಡಿ ನೂತನ ಸಮಿತಿ’ಗೆ ‘ಸರ್ಕಾರಿ ನೌಕರರ ಸಂಘ’ದಿಂದ ಸನ್ಮಾನ, ಅಭಿನಂದನೆ

By ವಸಂತ ಬಿ ಈಶ್ವರಗೆರೆ

ಶಿವಮೊಗ್ಗ: ಜಿಲ್ಲೆಯ ಸಾಗರದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಿ ನ್ಯಾಸ ಪ್ರತಿಷ್ಠಾನದ ನೂತನ ಸಮಿತಿಯ ಪದಾಧಿಕಾರಿಗಳನ್ನು ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ವತಿಯಿಂದ ಇಂದು ಸನ್ಮಾನಿಸಿ, ಗೌರವಿಸಲಾಯಿತು.

ನ್ಯಾಸ ಪ್ರತಿಷ್ಠಾನದ ನೂತನ ಸಮಿತಿಗೆ ಸನ್ಮಾನಿಸಿ ಗೌರವ:

ಇಂದು ಸಾಗರದ ಮಾರಿ ಗುಡಿ ಕಚೇರಿಯಲ್ಲಿ ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದಿಂದ ಶ್ರೀ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನದ ನೂತನ ಅಧ್ಯಕ್ಷರಾದ ಪವಿತ್ರ ನಾಗರಾಜ್, ಉಪಾಧ್ಯಕ್ಷರಾದ ಶ್ರೀನಿವಾಸ್ ಮೇಸ್ತ್ರಿ, ಪ್ರಧಾನ ಕಾರ್ಯದರ್ಶಿ ಎಂ.ಡಿ ಆನಂದ್, ಸಹ ಕಾರ್ಯದರ್ಶಿಗಳಾದಂತ ಡಿಶ್ ಗುರು, ಪುರುಷೋತ್ತಮ್ (ಪುಚ್ಚಿ) ಹಾಗೂ ಖಜಾಂಚಿ ವಿ.ಶಂಕರ್(ಮಾಸ್ಟರ್ ಶಂಕರ್) ಅವರನ್ನು ಸಾಗರ ಸರ್ಕಾರಿ ನೌಕರರ ಸಂಘದಿಂದ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸಲಾಯಿತು.

ನೌಕರರ ಸಹಕಾರ ಸದಾ ಇರಲಿದೆ: ಸಂತೋಷ್ ಕುಮಾರ್

ಸನ್ಮಾನಿಸಿ ಮಾತನಾಡಿದ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಂತೋಷ್ ಕುಮಾರ್ ಎನ್. ಅವರು, “ಮಾರಿಕಾಂಬಾ ದೇವಿಯ ಜಾತ್ರಾ ಮಹೋತ್ಸವದ ಯಶಸ್ಸಿನಲ್ಲಿ ಅಧಿಕಾರಿಗಳು ಮತ್ತು ನೌಕರರು ಸದಾ ಕೈಜೋಡಿಸುತ್ತಾ ಬಂದಿದ್ದಾರೆ. ಸಮಿತಿಯ ಇತ್ತೀಚಿನ ಚುನಾವಣೆಯನ್ನು ನೌಕರರು ಅತ್ಯಂತ ಪಾರದರ್ಶಕವಾಗಿ ನಡೆಸಿಕೊಟ್ಟಿರುವುದು ಹೆಮ್ಮೆಯ ವಿಷಯ. ಮುಂದಿನ ದಿನಗಳಲ್ಲಿ ಸಮಿತಿಯು ಕೈಗೊಳ್ಳುವ ಎಲ್ಲಾ ಸಮಾಜಮುಖಿ ಕಾರ್ಯಗಳಿಗೆ ನೌಕರರ ಸಂಘವು ಸಂಪೂರ್ಣ ಸಹಕಾರ ನೀಡಲಿದೆ” ಎಂದು ಭರವಸೆ ನೀಡಿದರು.

ನೌಕರರ ಸೇವೆಯನ್ನು ಸ್ಮರಿಸಿದ ಅಧ್ಯಕ್ಷ ಪವಿತ್ರ ನಾಗರಾಜ್

ಸನ್ಮಾನ ಸ್ವೀಕರಿಸಿ ಮಾತನಾಡಿದಂತ ಮಾರಿಕಾಂಬ ದೇವಿ ನ್ಯಾಸ ಪ್ರತಿಷ್ಠಾನ ಅಧ್ಯಕ್ಷ ಪವಿತ್ರ ನಾಗರಾಜ್ ಅವರು, “ಮಾರಿಕಾಂಬಾ ಸಮಿತಿಗೆ ಸರ್ಕಾರಿ ನೌಕರರ ಸಹಕಾರ ಅತ್ಯಗತ್ಯ. ಕಳೆದ ಮಾರಿ ಜಾತ್ರೆಯ ಸಂದರ್ಭದಲ್ಲಿ ನೌಕರರು ನೀಡಿದ ಸೇವೆಯನ್ನು ಮರೆಯಲು ಸಾಧ್ಯವಿಲ್ಲ. ನೌಕರರ ಸಂಘ ಮತ್ತು ಸಮಿತಿಯ ನಡುವಿನ ಈ ಬಾಂಧವ್ಯ ಮುಂದೆಯೂ ಹೀಗೆ ಮುಂದುವರಿಯಲಿ,” ಎಂದು ಆಶಿಸಿದರು.

ಸಾಗರ ತಾಲ್ಲೂಕು ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಉಪಸ್ಥಿತಿ:

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಕಾರ್ಯದರ್ಶಿ ಅಣ್ಣಪ್ಪ, ಖಜಾಂಚಿ ಸಹದೇವ್, ರಾಜ್ಯ ಪರಿಷತ್ ಸದಸ್ಯ ದೇವೇಂದ್ರಪ್ಪ, ಪದಾಧಿಕಾರಿಗಳಾದ ಮಂಜುನಾಥ್, ಗಿರೀಶ್, ಪರಶುರಾಮ್, ಸಮನ್ವಿತಾ, ಅನುಸೂಯ ತಳವಾರ್, ವಿದ್ಯಾ.ಎಂ.ಪಿ, ನಾಗರಾಜ್, ಮಂಜುನಾಥ್ (ಸಹಕಾರ ಇಲಾಖೆ) ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಒಟ್ಟಾರೆಯಾಗಿ ಭಕ್ತಿ ಮತ್ತು ಕರ್ತವ್ಯದ ಹಾದಿಯಲ್ಲಿ ಸಾಗರ ತಾಲ್ಲೂಕಿನ ಸರ್ಕಾರಿ ನೌಕರರು ಮತ್ತು ಮಾರಿಕಾಂಬಾ ನ್ಯಾಸ ಸಮಿತಿಯ ನಡುವಿನ ಒಗ್ಗಟ್ಟನ್ನು ಈ ಕಾರ್ಯಕ್ರಮ ಪ್ರತಿಬಿಂಬಿಸಿತು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು…

ನಿಗಧಿತ ಅವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ: ಮದ್ದೂರು ಶಾಸಕ ಕೆ.ಎಂ.ಉದಯ್

ರಾಜ್ಯದಲ್ಲಿ ವನ್ಯಜೀವಿಗಳಿಂದ ಬೆಳೆ ಹಾನಿ: ಶೀಘ್ರ ಪರಿಹಾರ ನೀಡಲು ಸಚಿವ ಈಶ್ವರ್ ಖಂಡ್ರೆ ಸೂಚನೆ

Share. Facebook Twitter LinkedIn WhatsApp Email

Related Posts

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

2 Mins Read

ಜನಿವಾರಕ್ಕೆ ಇವರೇನು ಅನುಮತಿ ನೀಡೋದು? ಕೇಸರಿ ಶಾಲು ನಿಷೇಧಿಸಲು ಇವರ್ಯಾರು?: ಪ್ರಹ್ಲಾದ್ ಜೋಶಿ ಪ್ರಶ್ನೆ

1 Min Read

ಮಂಗಳೂರಲ್ಲಿ ಹವಾಮಾನ ವೈಫರಿತ್ಯದಿಂದ ಆಕಾಶದಲ್ಲೇ ಅರ್ಧ ಗಂಟೆ ಗಿರಕಿ ಹೊಡೆದ ವಿಮಾನಗಳು

1 Min Read
Recent News

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

ದಂಪತಿಗಳ ಲೈಂಗಿಕ ಜೀವನ ಸುಧಾರಿಸಲು ಈ ಒಂದು ಸರಳ ಅಭ್ಯಾಸ ಸಾಕು: ಸಂಶೋಧನೆಯಿಂದ ದೃಢ!

ದಂಪತಿಗಳ ನಡುವಿನ ಅನ್ಯೋನ್ಯತೆ ಹೆಚ್ಚಿಸಲು ಹೊಸ ಪ್ರಯೋಗ: ವೈವಾಹಿಕ ಜೀವನಕ್ಕೆ ಮರುಜೀವ ನೀಡಿದ ‘ನಗ್ನ ಛಾಯಾಚಿತ್ರ’

ನೈಸರ್ಗಿಕ ಪೋಷಕಾಂಶಗಳ ಗಣಿ: ಪ್ರತಿದಿನ ಮೊಳಕೆ ಕಾಳುಗಳನ್ನು ತಿನ್ನುವುದರಿಂದಾಗುವ 7 ಲಾಭಗಳು

State News
KARNATAKA

ಸಾಗರದಲ್ಲಿ ‘ಸತ್ತವರ ಹೆಸರ’ಲ್ಲಿ ಆಸ್ತಿ ಮಾರಾಟ, ಬೃಹತ್ ಭೂ ಹಗರಣ: ‘ಲೋಕಾಯುಕ್ತ’ದಿಂದ ತನಿಖೆಗೆ ಆದೇಶ

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆಯುತ್ತಿರುವ ಭೂ ಮಾಫಿಯಾದ ಭೀಕರ ದಂಧೆಯೊಂದು ಬಯಲಿಗೆ ಬಂದಿದೆ. ಸತ್ತವರ ಹೆಸರಿನಲ್ಲಿ ನಕಲಿ…

ಜನಿವಾರಕ್ಕೆ ಇವರೇನು ಅನುಮತಿ ನೀಡೋದು? ಕೇಸರಿ ಶಾಲು ನಿಷೇಧಿಸಲು ಇವರ್ಯಾರು?: ಪ್ರಹ್ಲಾದ್ ಜೋಶಿ ಪ್ರಶ್ನೆ

ಮಂಗಳೂರಲ್ಲಿ ಹವಾಮಾನ ವೈಫರಿತ್ಯದಿಂದ ಆಕಾಶದಲ್ಲೇ ಅರ್ಧ ಗಂಟೆ ಗಿರಕಿ ಹೊಡೆದ ವಿಮಾನಗಳು

BIG NEWS: ಸಾಗರದ ನಾಡಕಲಸೆಯಲ್ಲಿ ‘ಕಂದಾಯ ಭೂಮಿ’ ಒತ್ತುವರಿ: ಲೋಕಾಯುಕ್ತರಿಂದ ಸ್ವಯಂ ಪ್ರೇರಿತ ಮೊಕದ್ದಮೆ ದಾಖಲು

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.