ಬೆಂಗಳೂರು: ರಾಜ್ಯ ಸರ್ಕಾರದಿಂದ ಇಂದು 71 ತಹಶೀಲ್ದಾರ್ ಗ್ರೇಡ್-1 ಹುದ್ದೆಯಿಂದ, ಕರ್ನಾಟಕ ಆಡಳಿತ ಸೇವೆ (ಕಿರಿಯ ಶ್ರೇಣಿ)ಗೆ ಬಡ್ತಿ ನೀಡಿ ಆದೇಶಿಸಿದೆ. ಈ ಮೂಲಕ ಬಡ್ತಿ ನಿರೀಕ್ಷೆಯಲ್ಲಿ ಇದ್ದಂತ ತಹಶೀಲ್ದಾರ್ ಗಳಿಗೆ ಗುಡ್ ನ್ಯೂಸ್ ನೀಡಿದೆ.
Viral news : ಸೈಕಲ್ನಲ್ಲಿ ಸವಾರಿ ಮಾಡುತ್ತಲೇ ಸರ್ಕಸ್ ಮಾಡಿದ ʼವೃದ್ಧನ ಅಘಾತಕಾರಿʼ Video | watch
ಈ ಬಗ್ಗೆ ರಾಜ್ಯ ಸರ್ಕಾರದಿಂದ ಅಧಿಸೂಚನೆ ಹೊರಡಿಸಲಾಗಿದ್ದು, ತಹಶೀಲ್ದಾರ್ ಗ್ರೇಡ್-1 ವೃಂದದ 71 ಅಧಿಕಾರಿಗಳಿಗೆ ಆಡಳಿತಾತ್ಮಕ ಹಿತದೃಷ್ಠಿಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವೇತನ ಶ್ರೇಣಿ ರೂ.56,800 – 99,600ರ ಕರ್ನಾಟಕ ಆಡಳಿತ ಸೇವೆ(ಕಿರಿಯ ಶ್ರೇಣಿ) ಹುದ್ದೆಗೆ ಸ್ನಾನಾಪನ್ನ ಬಡ್ತಿ ನೀಡಿ ಆದೇಶಿಸಲಾಗಿದೆ ಎಂದಿದೆ.
ಬೆಂಗಳೂರಿನಲ್ಲಿ ಕುಖ್ಯಾತ ‘ಮೊಬೈಲ್’ ಕಳ್ಳರ ಬಂಧನ : 30 ಲಕ್ಷ ಮೌಲ್ಯದ ಫೋನ್ ಜಫ್ತಿ
ಇನ್ನೂ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ 2023ರ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿರುವ ಅಧಿಕಾರಿಗಳನ್ನು ಈ ಪ್ರಕ್ರಿಯೆ ಪೂರ್ಣಗೊಂಡ ನಂತರವೇ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳ ಕರ್ತವ್ಯದಿಂದ ಬಿಡುಗಡೆ ಗೊಳಿಸುವಂತೆಯೂ ಸಂಬಂಧಿಸಿದ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.