Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದಲ್ಲಿ ಮತ್ತೊಂದು ದರೋಡೆ : 1 ಕೋಟಿಗೆ ಜಮೀನು ಮಾರಿದ್ದ ವರ್ತಕನ ವಾಹನ ಅಡ್ಡಗಟ್ಟಿ 38 ಲಕ್ಷ ದರೋಡೆ!

28/03/2026 4:58 PM

‘ವಿವಾಹಿತರು ವಿಚ್ಛೇದನ ನೀಡದೆ ಲಿವ್-ಇನ್ ಸಂಬಂಧದಲ್ಲಿ ಇರುವಂತಿಲ್ಲ’ : ತೀರ್ಪು ಬದಲಿಸಿದ ಹೈಕೋರ್ಟ್

28/03/2026 4:54 PM

ಹಾಸನದಲ್ಲಿ ಭೀಕರ ಅಪಘಾತ : ಕಾರು ಡಿಕ್ಕಿಯಾಗಿ ಆಗಷ್ಟೇ SSLC ಪರೀಕ್ಷೆ ಬರೆದು ಬಂದಿದ್ದ ವಿದ್ಯಾರ್ಥಿ ದುರಂತ ಸಾವು!

28/03/2026 4:43 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : 1 ಲಕ್ಷ ವಿದ್ಯಾರ್ಥಿಗಳಿಗೆ `ಉಚಿತ ಬ್ಯಾಗ್’ ವಿತರಣೆ.!
KARNATAKA

ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : 1 ಲಕ್ಷ ವಿದ್ಯಾರ್ಥಿಗಳಿಗೆ `ಉಚಿತ ಬ್ಯಾಗ್’ ವಿತರಣೆ.!

By kannadanewsnow5706/12/2024 1:26 PM

ಶಿವಮೊಗ್ಗ : ಮಕ್ಕಳ ಭವಿಷ್ಯ ಬೆಳಗಿಸುವ ನಿಟ್ಟಿನಲ್ಲಿ ಸರ್ಕಾರ ಶಿಕ್ಷಣ ನೀಡುತ್ತಿದೆ. ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರು, ಶಿಕ್ಷಣ ಮತ್ತು ಇತರೆ ಸೌಲಭ್ಯಗಳಿದ್ದು ವಿದ್ಯಾರ್ಥಿಗಳು ಇದರ ಸದ್ಬಳಕೆ ಮಾಡಿಕೊಂಡು ಮುಂದೆ ಬರಬೇಕೆಂದು ಸಂಸದರಾದ ಬಿ.ವೈ.ರಾಘವೇಂದ್ರ ನುಡಿದರು.

ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಅಡಿಯಲ್ಲಿ ಸಂಸದರ ನಿಧಿಯಿಂದ ಸರ್ಕಾರಿ ಪ್ರಾಥಮಿಕ ಶಾಲೆ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮವನ್ನು ಶುಕ್ರವಾರ ದುರ್ಗಿಗುಡಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ಗಳನ್ನು ವಿತರಣೆ ಮಾಡಿ ಅವರು ಮಾತನಾಡಿದರು.

ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಅಡಿ ಸಂಸದರ ನಿಧಿಯಲ್ಲಿ ಲೋಕಸಭಾ ಕ್ಷೇತ್ರದ 1 ಲಕ್ಷ ಸರ್ಕಾರಿ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ ಮಾಡಬಹುದೆಂದು ತಿಳಿದ ತಕ್ಷಣ ಕಾರ್ಯೋನ್ಮುಖನಾಗಿದ್ದೇನೆ. ತಮ್ಮ ಕ್ಷೇತ್ರದಲ್ಲಿ ಒಟ್ಟು 2013 ಶಾಲೆಗಳಿಗೆ 1 ರಿಂದ 7 ನೇ ತರಗತಿವರೆಗಿನ 94056 ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ನೀಡಲಾಗುತ್ತಿದೆ ಎಂದು ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಕರು ಇದ್ದು, ಕಂಪ್ಯೂಟರ್ ಶಿಕ್ಷಣ ಸಹ ನೀಡಲಾಗುತ್ತಿದೆ. ವಿದ್ಯಾರ್ಥಿಗಳು ಮೊಬೈಲ್ ಬಳಕೆಗೆ ಕಡಿವಾಣ ಹಾಕಬೇಕು. ಕಂಪ್ಯೂಟರ್ , ಡಿಜಿಟಲ್ ಸಾಕ್ಷರರಾಗಬೇಕು. ಯುನೈಟೆಡ್ ಕಿಂಗ್‌ಡಮ್ 18 ವರ್ಷ ತುಂಬದ ಮಕ್ಕಳು ಮೊಬೈಲ್ ಬಳಸಬಾರದೆಂದು ನಿರ್ಧಾರ ಕೈಗೊಂಡಿದೆ. ನಮ್ಮಲ್ಲಿಯೂ ಮಕ್ಕಳು ಶಾಲೆಗೆ ಮೊಬೈಲ್ ತರುವಂತಿಲ್ಲ. ಓದಿನ ಕಡೆ, ಕಂಪ್ಯೂಟರ್ ಸಾಕ್ಷರತೆ ಕಡೆ ಹೆಚ್ಚಿನ ಗಮನ ಹರಿಸಬೇಕು. ಇದು ವಿದ್ಯಾರ್ಥಿಗಳ ಮುಂದಿನ ಔದ್ಯೋಗಿಕ ಜೀವನಕ್ಕೆ ಸಹಕಾರಿಯಾಗಲಿದೆ ಎಂದರು.

ಜಿಲ್ಲೆಯಲ್ಲಿ ಕಳೆದ 12 ವರ್ಷಗಳಿಂದ ಶೈಕ್ಷಣಿಕ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆ ಆಗಿದೆ. ಕೃಷಿ ಮತ್ತು ತೋಟಗಾರಿಕೆ ಕಾಲೇಜು, ಸರ್ಕಾರಿ ಮೆಡಿಕಲ್ ಕಾಲೇಜು, ರಾಷ್ಟಿçÃಯ ರಕ್ಷಾ ವಿಶ್ವವಿದ್ಯಾಲಯ, ಇದೀಗ ಆಯುರ್ವೇದ ಕಾಲೇಜು ಹೀಗೆ ಸಾಕಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಉತ್ತಮ ಶಿಕ್ಷಣ ನೀಡುತ್ತಿವೆ. ದಕ್ಷಿಣ ಭಾರತದಲ್ಲೇ ಮೊದಲನೆಯದಾದ ರಾಷ್ಟಿçÃಯ ರಕ್ಷಾ ವಿಶ್ವವಿದ್ಯಾಲಯಕ್ಕೆ ಈಗ ತಮ್ಮಡಿಹಳ್ಳಿಯಲ್ಲಿ 25 ಎಕರೆ ಜಾಗ ಮಂಜೂರಾಗಿದ್ದು ಶಾಶ್ವತ ಕಟ್ಟಡ ನಿರ್ಮಾಣಕ್ಕೆ ರೂ.25 ಕೋಟಿ ಮಂಜೂರಾಗಿದೆ. ಇಲ್ಲಿ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಪ್ಲೊಮಾ ಮತ್ತು ಪದವಿ ನಂತರ ಉತ್ತಮ ಕೋರ್ಸ್ಗಳಿದ್ದು, ಈ ಕೋರ್ಸ್ ಮುಗಿದ ನಂತರ ಉತ್ತಮ ಉದ್ಯೋಗಾವಕಾಶಗಳು ಸಿಗಲಿದೆ. ಆದ್ದರಿಂದ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದರು.

ಶಾಸಕರಾದ ಎಸ್.ಎನ್.ಚನ್ನಬಸಪ್ಪ ಮಾತನಾಡಿ, ಸಂಸದರು ತಮ್ಮ ವ್ಯಾಪ್ತಿಯಲ್ಲಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತಹ ಕೆಲಸಗಳನ್ನು ಅತ್ಯಂತ ಶ್ರದ್ಧೆಯಿಂದ ಮಾಡುತ್ತಿದ್ದಾರೆ. ಮೊದಲನೆಯದಾಗಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ 1 ಲಕ್ಷ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಮಾಡುತ್ತಿದ್ದಾರೆ ಎಂದ ಅವರು ದುರ್ಗಿಗುಡಿ ಶಾಲಾ ಅಭಿವೃದ್ದಿಗೆ ತಾವು ಸಹಕರಿಸುವುದಾಗಿ ಭರವಸೆ ನೀಡಿದರು.

ಶಾಲೆಯ 867 ವಿದ್ಯಾರ್ಥಿಗಳಿಗೆ ಬ್ಯಾಗ್ ವಿತರಣೆ ಮಾಡಲಾಯಿತು. ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಡಿ.ಎಸ್. ಅರುಣ್, ಮಾಜಿ ಸೂಡಾ ಅಧ್ಯಕ್ಷರುಗಳಾದ ನಾಗರಾಜ್, ಜ್ಞಾನೇಶ್ವರ್, ಎಸ್‌ಡಿಎಂಸಿ ಅಧ್ಯಕ್ಷರಾದ ಚಂದ್ರಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕ ಮೋಹನೇಶ್, ದುರ್ಗಿಗುಡಿ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕಿ ಭಾರತಿ, ದೈಹಿಕ ಶಿಕ್ಷಣ ನಿರ್ದೇಶಕ ನಿರಂಜನ, ಇತರೆ ಶಿಕ್ಷಕರು, ವಿದ್ಯಾರ್ಥಿಗಳು ಹಾಜರಿದ್ದರು. , ಕ್ಷೇತ್ರ ಸಮನ್ವಯಾಧಿಕಾರಿ ಶಿವಪ್ಪ ಸಂಗಣ್ಣನವರ್ ಸ್ವಾಗತಿಸಿದರು. ಕಲ್ಲೇಶ್ ವಂದಿಸಿದರು.

Good news for government school children: Free bags distributed to 1 lakh students ಸರ್ಕಾರಿ ಶಾಲಾ ಮಕ್ಕಳಿಗೆ ಗುಡ್ ನ್ಯೂಸ್ : 1 ಲಕ್ಷ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ ವಿತರಣೆ.!
Share. Facebook Twitter LinkedIn WhatsApp Email

Related Posts

ರಾಜ್ಯದಲ್ಲಿ ಮತ್ತೊಂದು ದರೋಡೆ : 1 ಕೋಟಿಗೆ ಜಮೀನು ಮಾರಿದ್ದ ವರ್ತಕನ ವಾಹನ ಅಡ್ಡಗಟ್ಟಿ 38 ಲಕ್ಷ ದರೋಡೆ!

28/03/2026 4:58 PM1 Min Read

ಹಾಸನದಲ್ಲಿ ಭೀಕರ ಅಪಘಾತ : ಕಾರು ಡಿಕ್ಕಿಯಾಗಿ ಆಗಷ್ಟೇ SSLC ಪರೀಕ್ಷೆ ಬರೆದು ಬಂದಿದ್ದ ವಿದ್ಯಾರ್ಥಿ ದುರಂತ ಸಾವು!

28/03/2026 4:43 PM1 Min Read

ಮೃತ 11 ಅಭಿಮಾನಿಗಳಿಗೆ ಆರ್‌ಸಿಬಿ ಭಾವಪೂರ್ಣ ನಮನ: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 11 ಆಸನಗಳು ಖಾಲಿ!

28/03/2026 4:04 PM1 Min Read
Recent News

ರಾಜ್ಯದಲ್ಲಿ ಮತ್ತೊಂದು ದರೋಡೆ : 1 ಕೋಟಿಗೆ ಜಮೀನು ಮಾರಿದ್ದ ವರ್ತಕನ ವಾಹನ ಅಡ್ಡಗಟ್ಟಿ 38 ಲಕ್ಷ ದರೋಡೆ!

28/03/2026 4:58 PM

‘ವಿವಾಹಿತರು ವಿಚ್ಛೇದನ ನೀಡದೆ ಲಿವ್-ಇನ್ ಸಂಬಂಧದಲ್ಲಿ ಇರುವಂತಿಲ್ಲ’ : ತೀರ್ಪು ಬದಲಿಸಿದ ಹೈಕೋರ್ಟ್

28/03/2026 4:54 PM

ಹಾಸನದಲ್ಲಿ ಭೀಕರ ಅಪಘಾತ : ಕಾರು ಡಿಕ್ಕಿಯಾಗಿ ಆಗಷ್ಟೇ SSLC ಪರೀಕ್ಷೆ ಬರೆದು ಬಂದಿದ್ದ ವಿದ್ಯಾರ್ಥಿ ದುರಂತ ಸಾವು!

28/03/2026 4:43 PM

BREAKING : 1 ವರ್ಷದ ಹಿಂದೆ ಶೇ.3.2ರಷ್ಟಿದ್ದ ‘ನಿರುದ್ಯೋಗ ದರ’ 3.1%ಕ್ಕೆ ಇಳಿದಿದೆ ; ಸಮೀಕ್ಷೆ

28/03/2026 4:21 PM
State News
KARNATAKA

ರಾಜ್ಯದಲ್ಲಿ ಮತ್ತೊಂದು ದರೋಡೆ : 1 ಕೋಟಿಗೆ ಜಮೀನು ಮಾರಿದ್ದ ವರ್ತಕನ ವಾಹನ ಅಡ್ಡಗಟ್ಟಿ 38 ಲಕ್ಷ ದರೋಡೆ!

By kannadanewsnow0528/03/2026 4:58 PM KARNATAKA 1 Min Read

ದಾವಣಗೆರೆ : ರಾಜ್ಯದಲ್ಲಿ ಮತ್ತೊಂದು ಬೃಹತ್ ದರೋಡೆ ನಡೆದಿದ್ದು ಜಮೀನು ಮಾರಾಟ ಮಾಡಿದ ಹಣದೊಂದಿಗೆ ಪ್ರಯಾಣಿಸುತ್ತಿದ್ದ ವ್ಯಕ್ತಿಯ ಓಮಿನಿ ವಾಹನ…

ಹಾಸನದಲ್ಲಿ ಭೀಕರ ಅಪಘಾತ : ಕಾರು ಡಿಕ್ಕಿಯಾಗಿ ಆಗಷ್ಟೇ SSLC ಪರೀಕ್ಷೆ ಬರೆದು ಬಂದಿದ್ದ ವಿದ್ಯಾರ್ಥಿ ದುರಂತ ಸಾವು!

28/03/2026 4:43 PM

ಮೃತ 11 ಅಭಿಮಾನಿಗಳಿಗೆ ಆರ್‌ಸಿಬಿ ಭಾವಪೂರ್ಣ ನಮನ: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 11 ಆಸನಗಳು ಖಾಲಿ!

28/03/2026 4:04 PM

ವಿದ್ಯಾರ್ಥಿಗಳನ್ನು ಬಿಸಿಲಲ್ಲಿ ನಿಲ್ಲಿಸಿದ್ದಕ್ಕೆ ಕ್ರಿಮಿನಲ್ ಕೇಸ್: ಪ್ರಿನ್ಸಿಪಾಲ್, ಶಿಕ್ಷಕರ ವಿರುದ್ಧದ ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ

28/03/2026 3:52 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.