Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹಗಲಿನ ಬಿಸಿಲಿಗಿಂತಲೂ ರಾತ್ರಿಯ ಸೆಖೆ ಅತ್ಯಂತ ಅಪಾಯಕಾರಿ!: ಭಾರತದ ಬಿಸಿಗಾಳಿ ಕುರಿತು ಶಾಕಿಂಗ್ ಸತ್ಯ ಬಿಚ್ಚಿಟ್ಟ ಸಂಶೋಧನೆ !

​ಪಶ್ಚಿಮ ಏಷ್ಯಾ ಮಹಾಯುದ್ಧಕ್ಕೆ ಬ್ರೇಕ್ ಬಿಳುತ್ತಾ?: ಇರಾನ್‌ಗೆ ಹೊಸ ಕದನ ವಿರಾಮ ಪ್ರಸ್ತಾವನೆ ಸಲ್ಲಿಸಿದ ಅಮೆರಿಕ!

ರಾಜೀವ್ ಗಾಂಧಿ ಪುಣ್ಯತಿಥಿ: ಮಾಜಿ ಪ್ರಧಾನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » GOOD NEWS: ರಾಜ್ಯದ ‘ಕ್ಯಾನ್ಸರ್ ರೋಗಿ’ಗಳಿಗೆ ಗುಡ್ ನ್ಯೂಸ್: 16 ಜಿಲ್ಲಾಸ್ಪತ್ರೆಗಳಲ್ಲಿ ‘ಕೀಮೋಥೆರಪಿ ಕೇಂದ್ರ’ ಆರಂಭ
KARNATAKA

GOOD NEWS: ರಾಜ್ಯದ ‘ಕ್ಯಾನ್ಸರ್ ರೋಗಿ’ಗಳಿಗೆ ಗುಡ್ ನ್ಯೂಸ್: 16 ಜಿಲ್ಲಾಸ್ಪತ್ರೆಗಳಲ್ಲಿ ‘ಕೀಮೋಥೆರಪಿ ಕೇಂದ್ರ’ ಆರಂಭ

By ವಸಂತ ಬಿ ಈಶ್ವರಗೆರೆ
vidhana soudha
vidhana soudha

ಬೆಂಗಳೂರು: ರಾಜ್ಯದ ಕ್ಯಾನ್ಸರ್ ರೋಗಿಗಳಿಗೆ ಗುಡ್ ನ್ಯೂಸ್ ಎನ್ನುವಂತೆ, ಕ್ಯಾನ್ಸರ್ ಚಿಕಿತ್ಸೆಗಾಗಿ ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದೆ.

ಕ್ಯಾನ್ಸರ್ ರೋಗಿಗಳ ಅನುಕೂಲಕ್ಕಾಗಿ ಸಮೀಪದ ಜಿಲ್ಲಾ ಆಸ್ಪತ್ರೆಗಳಲ್ಲಿ ಸುಲಭವಾಗಿ, ಗುಣಮಟ್ಟದ ಕೀಮೋಥೇರಪಿ ಮತ್ತು ಬೆಂಬಲ ಸೇವೆಗಳನ್ನು ಒದಗಿಸುವ ಉದೇಶದಿಂದ SAST ನೊಂದಯಿತ ತೃತೀಯ ಹಂತದ ಕ್ಯಾನ್ಸರ್ ಆಸ್ಪತ್ರೆಗಳಲ್ಲಿ ಪ್ರಾರಂಭಿಕ ಚಿಕಿತ್ಸೆ ಪಡೆದ ನಂತರ ಮುಂದುವರೆದ ಕೀಮೋಥೆರಪಿ ಚಿಕಿತ್ಸೆಗಾಗಿ ರಾಜ್ಯದ 16 ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಹಬ್- ಅಂಡ್-ಸ್ಟೋಕ್ ಮಾದರಿಯಲ್ಲಿ ಪ್ರಾರಂಭಿಸಲಾಗುವುದು.

ಹಿನ್ನೆಲೆ

ವಾರ್ಷಿಕವಾಗಿ ಕರ್ನಾಟಕ ರಾಜ್ಯದಲ್ಲಿ ICMR-NCRP 2023 ವರದಿಯ ಪ್ರಕಾರ ಸುಮಾರು 70,000 ಹೊಸ ಕ್ಯಾನ್ಸರ್ ಪ್ರಕರಣಗಳನ್ನು ವರದಿಯಾಗುತ್ತಿದೆ.

ಪ್ರಮುಖ ಕ್ಯಾನ್ಸರ್‌ಗಳು: ಸ್ತನ ಕ್ಯಾನ್ಸರ್ (18%), ಗರ್ಭಕಂಠದ ಕ್ಯಾನ್ಸರ್ (14%), ಬಾಯಿ ಕ್ಯಾನ್ಸರ್ (12%), ಶ್ವಾಸಕೋಶ ಕ್ಯಾನ್ಸರ್ (8%), ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ (6%).

ಬಾಯಿಯ ಕ್ಯಾನ್ಸರ್ ಸಂಭವ: 12 ಪುಕರಣಗಳು /1 ಲಕ್ಷ ಜನಸಂಖ್ಯೆಗೆ
ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಸಂಭವ: 35 ಪ್ರಕರಣಗಳು /1 ಲಕ್ಷ ಮಹಿಳೆಯರ ಜನಸಂಖ್ಯೆಗೆ. ಗರ್ಭಕಂಠದ ಕ್ಯಾನ್ಸರ್ ಸಂಭವ: 15 ಪ್ರಕರಣಗಳು /1 ಲಕ್ಷ ಮಹಿಳೆಯರ ಜನಸಂಖ್ಯೆಗೆ.

ಬೆಂಗಳೂರು, ಹುಬ್ಬಳ್ಳಿ, ಕಲಬುರ್ಗಿ, ಬೆಳಗಾವಿ ಮತ್ತು ಮೈಸೂರು ನಗರಗಳಿಗೆ ಕೀಮೋಥೇರಪಿ ಸೇವೆಗಳಿಂದಾಗಿ ಶೇಕಡಾ 60% ರಷ್ಟು ರೋಗಿಗಳು 100 ಕಿ.ಮೀ.ಗಿಂತ ಹೆಚ್ಚು ಪ್ರಯಾಣಿಸುತ್ತಾರೆ.

ಪುನರಾವರ್ತಿತ ಭೇಟಿಗಳ ವೆಚ್ಚ / ಲಾಜಿಸ್ಟಿಕ್ಸ್ ಕಾರಣದಿಂದಾಗಿ ಹೆಚ್ಚಿನ ರೋಗಿಗಳು ಚಿಕಿತ್ಸೆಯಿಂದ ವಂಚಿತರಾಗುತ್ತಾರೆ. (ಶೇಕಡಾ 30% ರಷ್ಟು).

ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳ (DCCC) ಅವಶ್ಯಕತೆ:
ಕ್ಯಾನ್ಸರ್ ಆರೈಕೆಯಲ್ಲಿ ನಗರ-ಗ್ರಾಮೀಣ ಅಸಮಾನತೆಯನ್ನು ಕಡಿಮೆ ಮಾಡುವುದು. ಪರಿಣಾಮಕಾರಿ ಆರೈಕೆ ಮತ್ತು ಸ್ಥಿರ ರೋಗಿಗಳಿಗೆ ಪ್ರಯಾಣ/ಆಸ್ಪತ್ರೆ ವೆಚ್ಚವನ್ನು ಕಡಿಮೆ ಮಾಡುವುದು.

ಚಿಕಿತ್ಸೆಯ ಮುಂದುವರಿಕೆ ತ್ಯಜಿಸುವುದನ್ನು ತಡೆಯುವುದು.

ಹಬ್ ಮತ್ತು ಸೆಕ್ ಮಾದರಿ:

ಡೇ ಕೇರ್ ಕೀಮೋಥೆರಪಿ ಕೇಂದ್ರಗಳಿಗಾಗಿ ಹಬ್-ಅಂಡ್-ಸ್ಟೋಕ್ ಮಾದರಿಯಲ್ಲಿ SAST ನೊಂದಯಿತ ತೃತೀಯ ಹಂತದ ಆಸ್ಪತ್ರೆಗಳು ಮತ್ತು ಜಿಲ್ಲಾ ಆಸ್ಪತ್ರೆಗಳಿಗೆ ಸ್ಪಷ್ಟ ಜವಾಬ್ದಾರಿಗಳನ್ನು ವ್ಯಾಖ್ಯಾನಿಸುವ ಮೂಲಕ ಕ್ಯಾನ್ಸರ್ ಆರೈಕೆಯನ್ನು ಖಚಿತಪಡಿಸುವುದು, ಕರ್ನಾಟಕದಲ್ಲಿ, ಇದನ್ನು ತೃತೀಯ ಹಂತದ ಆಸ್ಪತ್ರೆಗಳು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕೀಮೋಥೆರಪಿ ಕೇಂದ್ರಗಳ ನಡುವಿನ ಒಪ್ಪಂದದ ಮೂಲಕ ಸ್ಥಾಪಿಸಲಾಗಿದೆ. ಪ್ರಸ್ತಾವಿತ ಪಟ್ಟಿಯನ್ನು ಅನುಬಂಧ 1 ರಲ್ಲಿ ಲಗತ್ತಿಸಲಾಗಿದೆ.

ಹಬ್ ಆಸ್ಪತ್ರೆಗಳ ಪಾತ್ರ (ತೃತೀಯ ಕ್ಯಾನ್ಸರ್ ಕೇಂದ್ರಗಳು):-

ಕ್ಲಿನಿಕಲ್ ಸೇವೆಗಳು: ಸಂಕೀರ್ಣ ಚಿಕಿತ್ಸಾ ವಿತರಣೆ, ಕೀಮೋಥೆರಪಿಯನ್ನು ನಿರ್ವಹಿಸುವುದು, ಚಿಕಿತ್ಸೆಗೆ ಸಂಬಂಧಿಸಿದ ತೊಡಕುಗಳನ್ನು ನಿರ್ವಹಿಸುವುದು, ವಿಶೇಷ ರೋಗನಿರ್ಣಯ ಮತ್ತು ಹಂತ, PET-CT, ಆಣಿಕ ಪ್ರೊಫೈಲಿಂಗ್ ಮತ್ತು ಸುಧಾರಿತ ಬಯಾಸ್ಸಿಗಳನ್ನು ನಡೆಸುವುದು. ಸ್ಟೋಕ್ ಕೇಂದ್ರಗಳಿಗೆ ರೋಗಶಾಸ್ತ್ರ ಮತ್ತು ವಿಕಿರಣಶಾಸ್ತ್ರ ಬೆಂಬಲವನ್ನು ಒದಗಿಸುವುದು.

ತರಬೇತಿ ನೀಡುವುದು.

ರೆಫರಲ್ ಮತ್ತು ಟೆಲಿಮೆಡಿಸಿನ್.

ಗುಣಮಟ್ಟದ ಭರವಸೆ ಮತ್ತು ಮೇಲ್ವಿಚಾರಣೆ, ಪ್ರತಿ ವಾರ Medical Oncologist ರವರು ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿ ರೋಗಗಳ ತಪಾಸಣೆ ಮಾಡುವುದು.
ಪೋರ್ಟಲ್‌ಗಳನ್ನು ಬಳಸಿ, ಔಷಧಿಗಳನ್ನು ತಯಾರಿಸಿ, ಸೆಕ್ ಕೇಂದ್ರಗಳಿಗೆ ರವಾನಿಸುವುದು ಮತ್ತು ದಾಸ್ತಾನು ಮತ್ತು ಅಗತ್ಯ ಕೀಮೋಥೆರಪಿ ಒದಗಿಸುವುದು.

ಸ್ಪೋಕ್ ಕೇಂದ್ರಗಳ ಪಾತ್ರ (ಜಿಲ್ಲಾ ಡೇ ಕೇರ್ ಕೀಮೋಥೆರಪಿ ಘಟಕಗಳು)

ಔಷಧಿಗಳನ್ನು ರೋಗಿಯ ಆರೈಕೆ: ಕೀಮೋಥೆರಪಿ ಆಡಳಿತ, ಸಹಾಯಕ/ ಉಪಶಾಮನಕಾರಿ ಕೀಮೋ, ಪೂರ್ವ-ಕೀಮೋ ವರ್ಕಪ್, ಮೂಲಭೂತ ಪ್ರಯೋಗಾಲಯ ಪರೀಕ್ಷೆಗಳು (CBC, LFT, RFT) ಮತ್ತು ECG ಮೇಲ್ವಿಚಾರಣೆಯನ್ನು ಒದಗಿಸುವುದು.

ಹಬ್‌ನೊಂದಿಗೆ ಸಮನ್ವಯ: ರೆಫರಲ್ ವ್ಯವಸ್ಥೆ, ವಿಕಿರಣ/ ಶಸ್ತ್ರಚಿಕಿತ್ಸೆ ಅಗತ್ಯವಿರುವ ರೋಗಿಗಳನ್ನು ಗುರುತಿಸಿ ಮತ್ತು ಕೇಂದ್ರಗಳಿಗೆ ವರ್ಗಾಯಿಸಿ, ನೈಜ-ಸಮಯದ ರೆಫರಲ್ ಮಾಡಲಾಗುವುದು.

ಹಬ್ ಕೇಂದ್ರಗಳಿಂದ ಬಂದಂತಹ ಔಷಧಿಗಳನ್ನು ದಾಸ್ತಾನುಗಳನ್ನು ಸ್ವಿಕರಿಸಿ, ಶಿಷ್ಟಾಚಾರದ ರೀತಿ ರೋಗಿಗಳಿಗೆ ಬಳಕೆ ಮಾಡಲಾಗುವುದು.

ಬೆಂಬಲ ಸೇವೆಗಳು: ಉಪಶಾಮನಕಾರಿ ಆರೈಕೆ: ಸಮಾಲೋಚನೆ ಮತ್ತು ಡೇಟಾ ವರದಿ ಮಾಡುವುದು.

ಡೇ ಕೇರ್ ಕೀಮೋಥೆರಪಿ ಕೇಂದ್ರಗಳ ಪ್ರಯೋಜನಗಳು:

ರೋಗಿಗಳಿಗೆ:-
ಕಡಿಮೆ ಪ್ರಯಾಣ: ತಮ್ಮ ಜಿಲ್ಲೆಯೊಳಗಿನ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ.
ಕಡಿಮೆ ವೆಚ್ಚಗಳು: OOP ವೆಚ್ಚಗಳಲ್ಲಿ ಶೇಕಡಾ 40% ರಷ್ಟು ಕಡಿತ (ಅಂದಾಜು).
ಸುಧಾರಿತ ಅನುಸರಣೆ: ಸ್ಥಳೀಯ ಬೆಂಬಲ ವ್ಯವಸ್ಥೆಗಳು ಚಿಕಿತ್ಸೆಯಿಂದ ವಂಚಿತರಾಗುವ ಪ್ರಕರಣಗಳ ಕಡಿಮೆಯಾಗುವುದು.

ಆರೋಗ್ಯ ವ್ಯವಸ್ಥೆಗಾಗಿ:
ತೃತೀಯ ಹಂತದ ಆಸ್ಪತ್ರೆಗಳಲ್ಲಿ ಕಾಯ್ದಿರಿಸಿದ ರೋಗಿಗಳ ಪ್ರಮಾಣ ಕಡಿಮೆಯಾಗುವುದು. ಆರಂಭಿಕ ಪತ್ತೆ: ಜಿಲ್ಲಾ ಆಸ್ಪತ್ರೆಗಳಲ್ಲಿ ಆರಂಭಿಕ ಹಂತದಲ್ಲಿ ತಪಾಸಣೆಯನ್ನು ಅಸಾಂಕ್ರಾಮಿಕ ರೋಗಗಳ ಕಾರ್ಯಕ್ರಮದಡಿಯಲ್ಲಿ ದಾಖಲಿಸುವುದು.

ಡೇ ಕೇರ್ ಕೀಮೋಥೆರಪಿ ಕೇಂದ್ರಗಳಲ್ಲಿ ನೀಡಲಾಗುವ ಸೇವೆಗಳು

ಮುಂದುವರೆದ ಕೀಮೋಥೆರಪಿ ಚಿಕಿತ್ಸೆ.
ನೋವು ನಿರ್ವಹಣೆ ಚಿಕಿತ್ಸೆ,
ಅಪ್ತ ಸಮಾಲೋಚನೆ.
ಜಿಲ್ಲಾ ಆಸ್ಪತ್ರೆಗಳಿಂದ ಟೆಲಿಮೆಡಿಸಿನ್ ಮುಖಾಂತರ ಚಿಕಿತ್ಸೆ.

ಅಗತ್ಯವಿರುವ ಸಿಬ್ಬಂದಿ:

ವೈದ್ಯಕೀಯ ಆಂಕೊಲಾಜಿಸ್ಟ್ ಒಬ್ಬರು (ಭೇಟಿ)
ಕೀಮೋಥೆರಪಿ ಚಿಕಿತ್ಸೆಯಲ್ಲಿ ತರಬೇತಿ ಪಡೆದ 2 ದಾದಿಯರು.
ವೈದ್ಯರು
ಫಾರ್ಮಾಸಿ ಅಧಿಕಾರಿಗಳು
ಅಪ್ತ ಸಮಾಲೋಚಕರು

ರಾಜ್ಯದ ಈ 16 ಜಿಲ್ಲಾಸ್ಪತ್ರೆಗಳಲ್ಲಿ ಕಿಮೋಥೆರಪಿ ಕೇಂದ್ರ ಆರಂಭ

ಪರಮೇಶ್ವರ್ ಪ್ರಾಮಾಣಿಕರು, ಯಾವುದೇ ತಪ್ಪು ಮಾಡಿಲ್ಲ: ಡಿಸಿಎಂ ಡಿ.ಕೆ ಶಿವಕುಮಾರ್

BIG NEWS: ಅತ್ಯಾಚಾರ, ಎರಡು ಬಾರಿ ಪ್ರಗ್ನೆಂಟ್, ಅಬಾಷನ್: ಕಲಾವಿದ ಮನು ಕರಾಳ ಮುಖ ಬಿಚ್ಚಿಟ್ಟ ಸಂತ್ರಸ್ತೆ | Madenuru Manu

Share. Facebook Twitter LinkedIn WhatsApp Email

Related Posts

ಶನಿವಾರದೊಳಗೆ ಹಕ್ಕುಪತ್ರ ನೀಡದಿದ್ದರೆ ಸಾಗರ ನಗರಸಭೆ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ: ತೀ.ನ.ಶ್ರೀನಿವಾಸ್ ಡೆಡ್ ಲೈನ್

2 Mins Read

ಶಿವಮೊಗ್ಗದಲ್ಲಿ ಜಿಂಕೆ ಜಾತಿಗೆ ಸೇರಿದ ಪ್ರಾಣಿ ಬೇಟೆಯಾಡಿದ ಮೂವರ ಬಂಧನ

1 Min Read

ಕಾಂಗ್ರೆಸ್‌ನಲ್ಲಿ ‘ಬೆಕ್ಕು-ಮಂಗನ’ ಜಗಳ; ಸಿಎಂ ಆಗಲು ಖರ್ಗೆ ಕಾಯುತ್ತಿದ್ದಾರೆ: ರಾಧಾಮೋಹನ್ ದಾಸ್ ಅಗ್ರವಾಲ್ ಲೇವಡಿ

2 Mins Read
Recent News

ಹಗಲಿನ ಬಿಸಿಲಿಗಿಂತಲೂ ರಾತ್ರಿಯ ಸೆಖೆ ಅತ್ಯಂತ ಅಪಾಯಕಾರಿ!: ಭಾರತದ ಬಿಸಿಗಾಳಿ ಕುರಿತು ಶಾಕಿಂಗ್ ಸತ್ಯ ಬಿಚ್ಚಿಟ್ಟ ಸಂಶೋಧನೆ !

​ಪಶ್ಚಿಮ ಏಷ್ಯಾ ಮಹಾಯುದ್ಧಕ್ಕೆ ಬ್ರೇಕ್ ಬಿಳುತ್ತಾ?: ಇರಾನ್‌ಗೆ ಹೊಸ ಕದನ ವಿರಾಮ ಪ್ರಸ್ತಾವನೆ ಸಲ್ಲಿಸಿದ ಅಮೆರಿಕ!

ರಾಜೀವ್ ಗಾಂಧಿ ಪುಣ್ಯತಿಥಿ: ಮಾಜಿ ಪ್ರಧಾನಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ!

ಶನಿವಾರದೊಳಗೆ ಹಕ್ಕುಪತ್ರ ನೀಡದಿದ್ದರೆ ಸಾಗರ ನಗರಸಭೆ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ: ತೀ.ನ.ಶ್ರೀನಿವಾಸ್ ಡೆಡ್ ಲೈನ್

State News
KARNATAKA

ಶನಿವಾರದೊಳಗೆ ಹಕ್ಕುಪತ್ರ ನೀಡದಿದ್ದರೆ ಸಾಗರ ನಗರಸಭೆ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ: ತೀ.ನ.ಶ್ರೀನಿವಾಸ್ ಡೆಡ್ ಲೈನ್

By ವಸಂತ ಬಿ ಈಶ್ವರಗೆರೆ KARNATAKA 2 Mins Read

ಶಿವಮೊಗ್ಗ: ಜಿಲ್ಲೆಯ ಸಾಗರ ಪಟ್ಟಣ ಸಮೀಪದ ಅರಳಿಕೊಪ್ಪ ಗ್ರಾಮದ ಜನ್ನತ್‌ನಗರದಲ್ಲಿರುವ 136 ಕುಟುಂಬಗಳಿಗೆ ಶನಿವಾರದೊಳಗೆ ಹಕ್ಕುಪತ್ರ ನೀಡದಿದ್ದಲ್ಲಿ ನಗರಸಭೆಯ ಎದುರು…

ಶಿವಮೊಗ್ಗದಲ್ಲಿ ಜಿಂಕೆ ಜಾತಿಗೆ ಸೇರಿದ ಪ್ರಾಣಿ ಬೇಟೆಯಾಡಿದ ಮೂವರ ಬಂಧನ

ಕಾಂಗ್ರೆಸ್‌ನಲ್ಲಿ ‘ಬೆಕ್ಕು-ಮಂಗನ’ ಜಗಳ; ಸಿಎಂ ಆಗಲು ಖರ್ಗೆ ಕಾಯುತ್ತಿದ್ದಾರೆ: ರಾಧಾಮೋಹನ್ ದಾಸ್ ಅಗ್ರವಾಲ್ ಲೇವಡಿ

ಬಾಯಿ ಮಾತಿನ ಲೆಕ್ಕ ಬಿಟ್ಟು ದಾಖಲೆ ಬಿಡುಗಡೆ ಮಾಡಿ: ಮಧು ಬಂಗಾರಪ್ಪ, ಗೋಪಾಲಕೃಷ್ಣಗೆ ಹರತಾಳು ಹಾಲಪ್ಪ ಸವಾಲ್

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.