ಕೋಲಾರ : ಕೋಲಾರದಲ್ಲಿ ಸರ್ಕಾರಿ ಶಾಲೆಯ ಮೇಲ್ಚಾವಣಿ ಪ್ಲಾಸ್ಟಿಂಗ್ ಕುಸಿದು ಶಿಕ್ಷಕಿಗೆ ಗಂಭೀರವಾದ ಗಾಯಗಳಾಗಿರುವ ಘಟನೆ ವರದಿಯಾಗಿದೆ. ಶಿಕ್ಷಕಿ ಯಶೋಧ ಅವರಿಗೆ ಗಂಭೀರವಾದಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೋಲಾರ ನಗರದ ಹಳೆಯ ಮಾಧ್ಯಮಿಕ ಶಾಲೆಯಲ್ಲಿ ಈ ಒಂದು ಘಟನೆ ನಡೆದಿದೆ.
ಪಾಠ ಮಾಡುವಾಗ ಶಿಕ್ಷಕಿಯ ಮೇಲೆ ಪ್ಲಾಸ್ಟಿಂಗ್ ಸಿಮೆಂಟ್ ಕುಸಿದು ಬಿದ್ದಿದೆ. ಇತ್ತೀಚಿಗೆ ಅಷ್ಟೇ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಕಟ್ಟಡವನ್ನು ದುರಸ್ತಿ ಮಾಡಲಾಗಿತ್ತು . ಆದರೂ ಶಾಲಾ ಕೊಠಡಿಯ ಮೇಲ್ಚಾವಣಿಯ ಪ್ಲಾಸ್ಟಿಂಗ್ ಕುಸಿತವಾಗಿದೆ. ಅದೃಷ್ಟವಶಾತ್ ಶಾಲಾ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.








