ಹಾಸನ : ಶಾಸಕ ಕೆಎಂ ಶಿವಲಿಂಗೇಗೌಡ ವಿರುದ್ಧ ಕರ ಪತ್ರಹಂಚಿಕೆ ಆರೋಪ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕರಪತ್ರ ಹಂಚಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಇದೀಗ ಶಾಸಕ ಶಿವಲಿಂಗೇಗೌಡ ಹಾಸನ ಜಿಲ್ಲೆಯ ಅರಸೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಅಖಿಲ ಭಾರತ ವೀರಶೈವ ಮಹಾಸಭಾ ಅರಸೀಕೆರೆ ಘಟಕ ಹೆಸರಲ್ಲಿ ಕರಪತ್ರ ಹಂಚಲಾಗಿತ್ತು.
ವೀರಶೈವ ಸಮುದಾಯದ ಬಗ್ಗೆ ಅವಹೇಳನ ಹಾಗೂ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದ್ದು, ವೀರಶೈವ ಸಮಾಜವನ್ನು ಕೆಟ್ಟ ದೃಷ್ಟಿಯಲ್ಲಿ ನೋಡುತ್ತಿದ್ದಾರೆ ಎಂದು ಆರೋಪಿಗಳು ಕರಪತ್ರ ಹಂಚಿದ್ದಾರೆ.ಅರಸಿಕೆರೆ ಪಟ್ಟಣದಲ್ಲಿ ಅಪರಿಚಿತರು ಮನೆ ಮನೆಗೆ ಶಿವಲಿಂಗೇಗೌಡ ವಿರುದ್ಧ ಕರಪತ್ರ ಹಂಚಿದ್ದಾರೆ. ಕರಪತ್ರ ಹಚ್ಚಿದವರ ವಿರುದ್ಧ ಇದೀಗ ಕ್ರಮ ಕೈಗಳು ಒಂದು ಆಗ್ರಹಿಸಿ ಶಿವಲಿಂಗೇಗೌಡ ದೂರು ಕೊಟ್ಟಿದ್ದಾರೆ.








