Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

NEET UG 2026ರ ಮರುಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ: ಈ ಹಂತ ಅನುಸರಿಸಿ ಡೌನ್ ಲೋಡ್ ಮಾಡಿ

BREAKING : ರಾಜ್ಯದಲ್ಲಿ ರೇಣುಕಾಸ್ವಾಮಿ ರೀತಿ ಹತ್ಯೆ : ಅಶ್ಲೀಲ ಮೆಸೇಜ್ ಮಾಡಿದಕ್ಕೆ, ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

​ಕ್ಯುರಾಕೊ ವಿರುದ್ಧ ಜರ್ಮನಿಗೆ 7-1 ರನ್‌ಗಳ ಭರ್ಜರಿ ಜಯ; ವಿಶ್ವಕಪ್ ಅಭಿಯಾನಕ್ಕೆ ಅದ್ಧೂರಿ ಚಾಲನೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ​ಕ್ಯುರಾಕೊ ವಿರುದ್ಧ ಜರ್ಮನಿಗೆ 7-1 ರನ್‌ಗಳ ಭರ್ಜರಿ ಜಯ; ವಿಶ್ವಕಪ್ ಅಭಿಯಾನಕ್ಕೆ ಅದ್ಧೂರಿ ಚಾಲನೆ!
INDIA

​ಕ್ಯುರಾಕೊ ವಿರುದ್ಧ ಜರ್ಮನಿಗೆ 7-1 ರನ್‌ಗಳ ಭರ್ಜರಿ ಜಯ; ವಿಶ್ವಕಪ್ ಅಭಿಯಾನಕ್ಕೆ ಅದ್ಧೂರಿ ಚಾಲನೆ!

By ಗೋಪಾಲ್‌ ಎನ್‌

​ಫಿಫಾ ವಿಶ್ವಕಪ್ 2062ರ ತನ್ನ ಮೊದಲ ಪಂದ್ಯದಲ್ಲಿ ಕ್ಯುರಾಕೊ ತಂಡವನ್ನು ಎದುರಿಸುವ ಮೂಲಕ ಜರ್ಮನಿ ತನ್ನ ವಿಶ್ವಕಪ್ ಅಭಿಯಾನವನ್ನು ಆರಂಭಿಸಿದೆ. ಜೂನ್ 14 ರಂದು ಹೂಸ್ಟನ್‌ನ ಹೂಸ್ಟನ್ ಸ್ಟೇಡಿಯಂನಲ್ಲಿ ಇವೆರಡೂ ತಂಡಗಳು ಮುಖಾಮುಖಿಯಾಗಿದ್ದವು. ಜರ್ಮನಿ ಈ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿ ಭರ್ಜರಿ ಜಯ ದಾಖಲಿಸಲಿದೆ ಎಂದು ಅನೇಕರು ನಿರೀಕ್ಷಿಸಿದ್ದರು, ಅದರಂತೆಯೇ ಜರ್ಮನಿ ಆಟಗಾರರು ಮೈದಾನದಲ್ಲಿ ಕ್ಯುರಾಕೊ ತಂಡವನ್ನು ಸಂಪೂರ್ಣವಾಗಿ ಧೂಳೀಪಟ ಮಾಡಿದರು.

​ಪಂದ್ಯದ 6ನೇ ನಿಮಿಷದಲ್ಲೇ ಫೆಲಿಕ್ಸ್ ನ್ಮೆಚಾ (Felix Nmecha) ಅವರು ಅತ್ಯುತ್ತಮ ಗೋಲು ಗಳಿಸುವ ಮೂಲಕ ಜರ್ಮನಿಗೆ ಮೊದಲ ಯಶಸ್ಸು ತಂದುಕೊಟ್ಟರು. ಅಲ್ಲಿಂದ ಜರ್ಮನಿ ತಂಡವು ಎದುರಾಳಿಗಳ ಮೇಲೆ ನಿರಂತರವಾಗಿ ದಾಳಿ ನಡೆಸುತ್ತಾ ಮುನ್ನುಗ್ಗಿತು. ಆದರೆ, ಈ ಮಧ್ಯೆ ಕ್ಯುರಾಕೊ ತಂಡವು ಒಂದು ರೋಚಕ ಕ್ಷಣವನ್ನು ಸೃಷ್ಟಿಸಿತು.

​ಯಾರೂ ಊಹಿಸದ ರೀತಿಯಲ್ಲಿ ಪಂದ್ಯದ 21ನೇ ನಿಮಿಷದಲ್ಲಿ ಲಿವಾನೋ ಕೊಮೆನೆನ್ಸಿಯಾ (Livano Comenencia) ಅವರು ಅತ್ಯಾಕರ್ಷಕ ಗೋಲು ಬಾರಿಸಿ ಪಂದ್ಯವನ್ನು ಸಮಬಲಗೊಳಿಸಿದರು. ಇದು ಕ್ಯುರಾಕೊ ಅಭಿಮಾನಿಗಳಲ್ಲಿ ಭಾರಿ ಸಂತಸ ಮೂಡಿಸಿತು ಮತ್ತು ಅವರು ಕ್ರೀಡಾಂಗಣದಲ್ಲಿ ಜೋರಾಗಿ ಘೋಷಣೆಗಳನ್ನು ಕೂಗಲಾರಂಭಿಸಿದರು. ಕ್ಯುರಾಕೊ ಸಮಬಲ ಸಾಧಿಸುತ್ತಿದ್ದಂತೆ ಮತ್ತೊಮ್ಮೆ ಆಕ್ರಮಣಕಾರಿ ಆಟಕ್ಕೆ ಮೊರೆಹೋದ ಜರ್ಮನಿ ತಂಡದ ವೇಗಕ್ಕೆ 2014ರ ವಿಶ್ವ ಚಾಂಪಿಯನ್ಸ್ ಮುಂದೆ ಕ್ಯುರಾಕೊಗೆ ಈಡುಕೊಡಲು ಸಾಧ್ಯವಾಗಲಿಲ್ಲ. ಪಂದ್ಯದ 38ನೇ ನಿಮಿಷದಲ್ಲಿ ಬಂದ ಕಾರ್ನರ್ ಅವಕಾಶವನ್ನು ಬಳಸಿಕೊಂಡ ನಿಕೊ ಸ್ಕ್ಲೋಟರ್‌ಬೆಕ್ (Niko Schlotterbeck) ಜರ್ಮನಿಯ ಮುನ್ನಡೆಯನ್ನು ದ್ವಿಗುಣಗೊಳಿಸಿದರು.

​ಇದಾದ ಬಳಿಕ, ಮೊದಲಾರ್ಧದ ಆಟ ಮುಕ್ತಾಯಗೊಳ್ಳುವ ಕೊನೆಯ ಕ್ಷಣದಲ್ಲಿ ಕಾಯ್ ಹಾವರ್ಟ್ಜ್ (Kai Havertz) ಪೆನಾಲ್ಟಿ ಮೂಲಕ ಸುಲಭವಾಗಿ ಗೋಲು ಗಳಿಸಿದರು. ಇನ್ನು ದ್ವಿತೀಯಾರ್ಧದ ಆಟ ಆರಂಭವಾಗುತ್ತಿದ್ದಂತೆ ಜರ್ಮನಿ ತನ್ನ ಆಟದ ವೇಗವನ್ನು ಮತ್ತೊಂದು ಮಟ್ಟಕ್ಕೆ ಕೊಂಡೊಯ್ದಿತು. ದ್ವಿತೀಯಾರ್ಧದ ಆರಂಭದಲ್ಲೇ ಜಮಾಲ್ ಮುಸಿಯಾಲಾ (Jamal Musiala) ಐದನೇ ಗೋಲು ಬಾರಿಸಿದರೆ, 68ನೇ ನಿಮಿಷದಲ್ಲಿ ನಥಾನಿಯಲ್ ಬ್ರೌನ್ (Nathaniel Brown) ಆರನೇ ಗೋಲು ತಂದುಕೊಟ್ಟರು. ತದನಂತರ, ಬದಲಿ ಆಟಗಾರನಾಗಿ ಮೈದಾನಕ್ಕಿಳಿದ ಡೆನಿಜ್ ಉಂಡಾವ್ (Deniz Undav) 78ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇದರ ಜೊತೆಗೆ 88ನೇ ನಿಮಿಷದಲ್ಲಿ ಕಾಯ್ ಹಾವರ್ಟ್ಜ್ ತಮ್ಮ ವೈಯಕ್ತಿಕ ಎರಡನೇ ಗೋಲು ಪೂರ್ಣಗೊಳಿಸುವುದರೊಂದಿಗೆ, ಜರ್ಮನಿ ತಂಡವು 7-1 ಅಂತರದ ಭಾರಿ ಜಯ ದಾಖಲಿಸಿತು.

​ಮುಂದಿನ ಪಂದ್ಯದಲ್ಲಿ ಕೋಟ್ ಡಿ ಐವರಿ (Ivory Coast) ವಿರುದ್ಧ ಜರ್ಮನಿ ಸೆಣಸಾಟ:
​ಕ್ಯುರಾಕೊ ವಿರುದ್ಧ ಸುಲಭ ಜಯ ದಾಖಲಿಸಿರುವ ಜರ್ಮನಿ, ತನ್ನ ಮುಂದಿನ ವಿಶ್ವಕಪ್ ಪಂದ್ಯದಲ್ಲಿ ಕೋಟ್ ಡಿ ಐವರಿ (ಐವರಿ ಕೋಸ್ಟ್) ತಂಡವನ್ನು ಎದುರಿಸಲಿದೆ. ಇವೆರಡೂ ತಂಡಗಳು ಜೂನ್ 21 ರಂದು ಟೊರಾಂಟೋದ ಟೊರಾಂಟೊ ಸ್ಟೇಡಿಯಂನಲ್ಲಿ ಮುಖಾಮುಖಿಯಾಗಲಿದ್ದು, ಈ ಪಂದ್ಯದಲ್ಲಿ ಯಾರು ಮೇಲುಗೈ ಸಾಧಿಸಲಿದ್ದಾರೆ ಎಂಬುದು ಕುತೂಹಲಕಾರಿಯಾಗಿದೆ.

Germany decimate Curacao to kick off FIFA World Cup campaign register 7-1 victory
Share. Facebook Twitter LinkedIn WhatsApp Email

Related Posts

NEET UG 2026ರ ಮರುಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ: ಈ ಹಂತ ಅನುಸರಿಸಿ ಡೌನ್ ಲೋಡ್ ಮಾಡಿ

2 Mins Read

​ಯುಎಸ್-ಇರಾನ್ ಶಾಂತಿ ಒಪ್ಪಂದದ ಹೊಸ್ತಿಲಲ್ಲೇ ಕಿಡಿ ಹೊತ್ತಿಸಿದ ಇಸ್ರೇಲ್: ಬೈರೂತ್‌ನಲ್ಲಿ ಹಿಜ್ಬುಲ್ಲಾ ನೆಲೆಗಳ ಮೇಲೆ ಭೀಕರ ವೈಮಾನಿಕ ದಾಳಿ!

2 Mins Read

ಯುಎಸ್ ದಾಳಿಗೆ ಮೂವರು ಭಾರತೀಯ ನಾವಿಕರು ಬಲಿ ಪ್ರಕರಣ:​ಭೀಕರ ದಾಳಿಗೂ ಮುನ್ನ ಹಡಗಿಗೆ 60 ಬಾರಿ ಎಚ್ಚರಿಕೆ ನೀಡಿದ್ದ ಅಮೆರಿಕ!

2 Mins Read
Recent News

NEET UG 2026ರ ಮರುಪರೀಕ್ಷೆಗೆ ಪ್ರವೇಶ ಪತ್ರ ಬಿಡುಗಡೆ: ಈ ಹಂತ ಅನುಸರಿಸಿ ಡೌನ್ ಲೋಡ್ ಮಾಡಿ

BREAKING : ರಾಜ್ಯದಲ್ಲಿ ರೇಣುಕಾಸ್ವಾಮಿ ರೀತಿ ಹತ್ಯೆ : ಅಶ್ಲೀಲ ಮೆಸೇಜ್ ಮಾಡಿದಕ್ಕೆ, ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

​ಕ್ಯುರಾಕೊ ವಿರುದ್ಧ ಜರ್ಮನಿಗೆ 7-1 ರನ್‌ಗಳ ಭರ್ಜರಿ ಜಯ; ವಿಶ್ವಕಪ್ ಅಭಿಯಾನಕ್ಕೆ ಅದ್ಧೂರಿ ಚಾಲನೆ!

​ಯುಎಸ್-ಇರಾನ್ ಶಾಂತಿ ಒಪ್ಪಂದದ ಹೊಸ್ತಿಲಲ್ಲೇ ಕಿಡಿ ಹೊತ್ತಿಸಿದ ಇಸ್ರೇಲ್: ಬೈರೂತ್‌ನಲ್ಲಿ ಹಿಜ್ಬುಲ್ಲಾ ನೆಲೆಗಳ ಮೇಲೆ ಭೀಕರ ವೈಮಾನಿಕ ದಾಳಿ!

State News
KARNATAKA

BREAKING : ರಾಜ್ಯದಲ್ಲಿ ರೇಣುಕಾಸ್ವಾಮಿ ರೀತಿ ಹತ್ಯೆ : ಅಶ್ಲೀಲ ಮೆಸೇಜ್ ಮಾಡಿದಕ್ಕೆ, ಯುವಕನ ಕೊಂದು, ಶವ ಸುಟ್ಟು ಹಾಕಿದ ದಂಪತಿ!

By ಸುರೇಶ್‌ KARNATAKA 2 Mins Read

ಬಳ್ಳಾರಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಇಡೀ ರಾಜ್ಯವನ್ನೇ ನಡುಗಿಸಿತ್ತು. ಈ ಘಟನೆಯ ಬೆನ್ನಲ್ಲೇ ಇದೀಗ ಬಳ್ಳಾರಿಯಲ್ಲೂ ಅದೇ ಮಾದರಿಯ…

BIG NEWS: ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಊರಿನ ಬಡ ರೈತ ಮಹಿಳೆಗೆ ಸಿಗದ ‘ಗಂಗಾ ಕಲ್ಯಾಣ ಬೋರ್ ವೆಲ್’

Indian Blackberry: ಈ ವರ್ಷ ನೇರಳೆ ಹಣ್ಣುಗಳ ವಿಪರೀತ ಫಸಲು; ಹಿರಿಯರು ಹೇಳೋ ಆಘಾತಕಾರಿ ಮಾಹಿತಿ ಇಲ್ಲಿದೆ

SHOCKING : ರಾಜ್ಯದಲ್ಲಿ ಹೃದಯಾಘಾತಕ್ಕೆ ಮತ್ತೊಂದು ಬಲಿ : ಶಾಲೆಯಲ್ಲಿ ಆಟವಾಡುತ್ತಲೆ ಕುಸಿದು ಬಿದ್ದು 1ನೇ ತರಗತಿ ವಿದ್ಯಾರ್ಥಿ ಸಾವು!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.