ಬೇಲೂರು: ಮರಗಳನ್ನೇ ಮಕ್ಕಳಂತೆ ಪ್ರೀತಿಸಿದ ವೃಕ್ಷಮಾತೆ ಸಾಲುಮರದ ತಿಮ್ಮಕ್ಕ ಪ್ರಕೃತಿ ಪರಿಸರದ ಮೇಲೆ ಪ್ರೀತಿ ಹೊಂದಿದ್ದರು. ಅವರ ಹೆಸರಲ್ಲಿ 25 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಾಣ ಮಾಡಲು ವಿಸ್ತೃತ ಯೋಜನಾ ವರದಿ ಸಿದ್ಧವಾಗಿದ್ದು, ಇದಕ್ಕೆ ಬೆಂಬಲ ನೀಡುವುದಾಗಿ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ಬೇಲೂರಿನಲ್ಲಿಂದು ಬಸವ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರವಾಸೋದ್ಯಮ ಇಲಾಖೆಯಿಂದ ಬೇಲೂರು ತಾಲೂಕು ಹಳೇಬೀಡು ಯುನೆಸ್ಕೋ ತಾಣದಲ್ಲಿರುವ 10 ಎಕರೆ ಜಮೀನಿನಲ್ಲಿ ಸ್ಮಾರಕ ನಿರ್ಮಿಸಲು ಯೋಜಿಸಿದ್ದು, ಇದಕ್ಕೆ ಇಲಾಖೆಯ ವತಿಯಿಂದ ಬೆಂಬಲ ನೀಡುವುದಾಗಿ ತಿಳಿಸಿದರು.
ಆನೆ ಸಮಸ್ಯೆ ಪರಿಹಾರಕ್ಕೆ ಆನೆಧಾಮ ನಿರ್ಮಾಣ: ಈಶ್ವರ ಖಂಡ್ರೆ
ಬೇಲೂರು, ಕೊಡಗು ಮತ್ತು ಚಿಕ್ಕಮಗಳೂರಿನಲ್ಲಿ ಕಾಡಾನೆ ಸಮಸ್ಯೆ ಇದ್ದು, ನೂರಾರು ಆನೆಗಳು ಕಾಡಿನಿಂದ ಹೊರಗೆ ಇವೆ. ಇಂತಹ ಆನೆಗಳಿಂದ ಆಗುವ ಬೆಳೆಹಾನಿ, ಜೀವ ಹಾನಿ ತಪ್ಪಿಸಲು ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗಿದ್ದು, ಆನೆ ಧಾಮ ಸ್ಥಾಪನೆಗೆ ಈಗಾಗಲೇ 2 ಸಾವಿರ ಎಕರೆ ಭೂಮಿ ಗುರುತಿಸಲಾಗಿದ್ದು, ಸಚಿವ ಸಂಪುಟದ ಅನುಮೋದನೆ ಪಡೆಯಲಾಗಿದೆ ಎಂದರು.
ಆನೆಗಳ ಸಂಚಾರದ ಬಗ್ಗೆ ನಿಗಾ ಇಟ್ಟು ಸ್ಥಳೀಯರಿಗೆ ಮಾಹಿತಿ ನೀಡಲು ಕಮಾಂಡ್ ಸೆಂಟರ್ ಸ್ಥಾಪಿಸಲಾಗಿದೆ. ಇಲಾಖೆ ಸಿಬ್ಬಂದಿ ಆನೆ ಸಂಚಾರದ ಬಗ್ಗೆ ಕಾಲ ಕಾಲಕ್ಕೆ ನೀಡುವ ಎಚ್ಚರಿಕೆ ಪಾಲಿಸಿದರೆ ಅಮೂಲ್ಯ ಜೀವಹಾನಿ ತಪ್ಪಿಸಬಹುದು ಎಂದರು.
ಮಾರುತಗಳನ್ನು ತಡೆದು ವ್ಯಾಪಕ ಮಳೆ ಸುರಿಸುವಂತೆ ಮಾಡುವ, ನೂರಾರು ನದಿಗಳಿಗೆ ಮೂಲವಾದ ಪಶ್ಚಿಮಘಟ್ಟ ಇರುವ ಕರ್ನಾಟಕದಲ್ಲಿ ಹಚ್ಚ ಹಸಿರಿನ ಅರಣ್ಯವಿದ್ದು, ವನ ಮತ್ತು ವನ್ಯಜೀವಿ ಸಂರಕ್ಷಣೆ ನಮ್ಮ ಹೊಣೆಯಾಗಿದೆ. ಹೀಗಾಗಿ ಕಾಡಿನಂಚಿನ ಜನರು ವನ್ಯಜೀವಿಗಳೊಂದಿಗೆ ಸಹಬಾಳ್ವೆ ನಡೆಸಬೇಕು ಎಂದು ಈಶ್ವರ ಖಂಡ್ರೆ ಹೇಳಿದರು.
ನೀವು ದಿಂಬಿನ ಕೆಳಗೆ ಮೊಬೈಲ್ ಇಟ್ಟುಕೊಂಡು ಮಲಗ್ತೀರಾ? ಹಾಗಾದ್ರೆ ಈ ಸಮಸ್ಯೆಗಳನ್ನು ಕಾಡಬಹುದು ಎಚ್ಚರ!
ಗ್ರೀನ್ ಟೀ ಮರೆತುಬಿಡಿ, ಈಗ ‘ಬ್ಲೂ ಟೀ’ ಜಮಾನಾ: ತೂಕ ಇಳಿಕೆಯ ಜೊತೆಗೆ ಸಿಗಲಿದೆ ಹತ್ತಾರು ಲಾಭ!








