Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಚಿಕ್ಕಮಗಳೂರು : ತಂದೆಯನ್ನು ಕೊಂದು, ಅಪಘಾತವೆಂದು ನಾಟಕವಾಡಿದ ಮಗ ಅರೆಸ್ಟ್!

​ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದೀಪ್ತಿ ಶರ್ಮಾ ವಿಶ್ವ ದಾಖಲೆ: ಪಾಕಿಸ್ತಾನ ವಿರುದ್ಧ 5 ವಿಕೆಟ್ ಕಬಳಿಸಿ ಹೊಸ ಇತಿಹಾಸ!

BREAKING : ಯುದ್ಧ ಅಂತ್ಯ ಬೆನ್ನಲ್ಲೆ, ಒಂದೇ ದಿನಕ್ಕೆ ಶೇ.4 ರಷ್ಟು ಕಚ್ಚಾ ತೈಲ ಬೆಲೆ ಇಳಿಕೆ : ಸಿಲಿಂಡರ್ ಪೂರೈಕೆ ಸುಗಮ ಸಾಧ್ಯತೆ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಬಲ ಬದಲು ಎಡ ಕಿಡ್ನಿ ತೆಗೆದ ವೈದ್ಯ: ಮೃತಳ ಕುಟುಂಬಕ್ಕೆ 2 ಕೋಟಿ ಪರಿಹಾರ ನೀಡಲು NCDRC ಆದೇಶ
INDIA

ಬಲ ಬದಲು ಎಡ ಕಿಡ್ನಿ ತೆಗೆದ ವೈದ್ಯ: ಮೃತಳ ಕುಟುಂಬಕ್ಕೆ 2 ಕೋಟಿ ಪರಿಹಾರ ನೀಡಲು NCDRC ಆದೇಶ

By ವಸಂತ ಬಿ ಈಶ್ವರಗೆರೆ

ನವದೆಹಲಿ: ರೋಗಪೀಡಿತ ಬಲ ಕಿಡ್ನಿಯನ್ನು ತೆಗೆಯುವ ಬದಲು, ಮಹಿಳೆಯೊಬ್ಬರ ಸಂಪೂರ್ಣ ಆರೋಗ್ಯಕರವಾಗಿದ್ದ ಎಡ ಕಿಡ್ನಿಯನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದ ಉತ್ತರ ಪ್ರದೇಶದ ವೈದ್ಯರೊಬ್ಬರ ಕೃತ್ಯವನ್ನು “ಅತ್ಯಂತ ಘೋರ ನಿರ್ಲಕ್ಷ್ಯ” ಎಂದು ಕರೆದಿರುವ ರಾಷ್ಟ್ರೀಯ ಗ್ರಾಹಕರ ಕುಂದುಕೊರತೆಗಳ ಪರಿಹಾರ ಆಯೋಗವು (NCDRC), ಮೃತಳ ಕುಟುಂಬಕ್ಕೆ 2 ಕೋಟಿ ರೂಪಾಯಿ ಭಾರಿ ಪರಿಹಾರ ನೀಡುವಂತೆ ಆದೇಶಿಸಿದೆ.

ಆಯೋಗದ ಅಧ್ಯಕ್ಷ ಎ.ಪಿ. ಸಾಹಿ ಮತ್ತು ಸದಸ್ಯ ಭರತ್‌ಕುಮಾರ್ ಪಾಂಡ್ಯ ಅವರನ್ನೊಳಗೊಂಡ ಪೀಠವು, ಮೃತರಾದ 56 ವರ್ಷದ ಶಾಂತಿ ದೇವಿ ಅವರ ಕುಟುಂಬ ಸಲ್ಲಿಸಿದ್ದ ದೂರಿನ ವಿಚಾರಣೆ ನಡೆಸಿ, ಶಸ್ತ್ರಚಿಕಿತ್ಸೆ ನಡೆಸಿದ ಉತ್ತರ ಪ್ರದೇಶದ ಸರ್ಜನ್ ಡಾ. ರಾಜೀವ್ ಲೋಚನ್ ಅವರನ್ನು ದೋಷಿ ಎಂದು ಘೋಷಿಸಿದೆ.

ಮೇ 18ರಂದು ನೀಡಿರುವ ಆದೇಶದಲ್ಲಿ ಆಯೋಗವು, “ಇದು ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳ ಮುಂದೆ ಬರುವ ಪ್ರಕರಣಗಳಲ್ಲೇ ಅತ್ಯಂತ ಅಪರೂಪದ ಹಾಗೂ ಗಂಭೀರ ಸ್ವರೂಪದ ವೈದ್ಯಕೀಯ ನಿರ್ಲಕ್ಷ್ಯ ಎಂಬುದರಲ್ಲಿ ನಮಗೆ ಯಾವುದೇ ಸಂದೇಹವಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಪ್ರಕರಣದ ಹಿನ್ನೆಲೆ: ಏನಾಗಿತ್ತು?

  • ಏಪ್ರಿಲ್ 2012: ಶಾಂತಿ ದೇವಿ ಅವರು ತೀವ್ರ ಹೊಟ್ಟೆನೋವಿನ ಕಾರಣದಿಂದ ಡಾ. ರಾಜೀವ್ ಲೋಚನ್ ಅವರನ್ನು ಸಂಪರ್ಕಿಸಿದ್ದರು. ತಪಾಸಣೆ ನಡೆಸಿದಾಗ ಅವರ ಬಲ ಕಿಡ್ನಿಯಲ್ಲಿ ತೀವ್ರ ಉರಿಯೂತದ ಸಮಸ್ಯೆ (Severe Hydronephrosis) ಇರುವುದು ಪತ್ತೆಯಾಗಿತ್ತು. ಶಸ್ತ್ರಚಿಕಿತ್ಸೆಗೆ ಮುನ್ನ ಮಾಡಿಸಲಾದ ವೈದ್ಯಕೀಯ ವರದಿಗಳಲ್ಲಿ ಇವೆರಡೂ ಕಿಡ್ನಿಗಳು ಯಥಾಸ್ಥಿತಿಯಲ್ಲಿದ್ದವು ಮತ್ತು ಬಲ ಕಿಡ್ನಿ ಮಾತ್ರ ರೋಗಗ್ರಸ್ತವಾಗಿರುವುದು ಸ್ಪಷ್ಟವಾಗಿತ್ತು.

  • ಮೇ 6, 2012: ಬಲ ಕಿಡ್ನಿಯನ್ನು ತೆಗೆಯಲು ಶಸ್ತ್ರಚಿಕಿತ್ಸೆ ನಿಗದಿಯಾಗಿತ್ತು.

  • ಜೂನ್ 2012: ಶಸ್ತ್ರಚಿಕಿತ್ಸೆಯ ನಂತರ ಮಹಿಳೆಗೆ ಮತ್ತೆ ಸಮಸ್ಯೆ ಕಾಣಿಸಿಕೊಂಡಾಗ ನಡೆಸಲಾದ ಸಿಟಿ ಸ್ಕ್ಯಾನ್ ಮತ್ತು ರೇಡಿಯೋಲಾಜಿಕಲ್ ಪರೀಕ್ಷೆಗಳಲ್ಲಿ ಆಘಾತಕಾರಿ ವಿಷಯ ಬೆಳಕಿಗೆ ಬಂದಿತು. ರೋಗಪೀಡಿತ ಬಲ ಕಿಡ್ನಿ ದೇಹದಲ್ಲಿ ಹಾಗೇ ಇತ್ತು, ಆದರೆ ಆರೋಗ್ಯಕರವಾಗಿದ್ದ ಎಡ ಕಿಡ್ನಿ ನಾಪತ್ತೆಯಾಗಿತ್ತು!

ವೈದ್ಯರು ತಮ್ಮ ಲಿಖಿತ ಉತ್ತರದಲ್ಲಿ, “ಬಲ ಭಾಗದಲ್ಲೇ ಶಸ್ತ್ರಚಿಕಿತ್ಸೆಯ ಗಾಯ (Incision) ಮಾಡಲಾಗಿತ್ತು, ಆದರೆ ಹೊರಗೆ ತೆಗೆದದ್ದು ಎಡ ಕಿಡ್ನಿಯನ್ನು” ಎಂದು ತಾವೇ ಒಪ್ಪಿಕೊಂಡಿದ್ದಾರೆ.

‘ವೈದ್ಯಕೀಯ ದುರಂತ’ ಎಂದ ಆಯೋಗ

ಸಂಪೂರ್ಣ ರೋಗದ ಪತ್ತೆ, ಚಿಕಿತ್ಸೆಯ ಯೋಜನೆ ಎಲ್ಲವೂ ಬಲ ಕಿಡ್ನಿಗೆ ಸಂಬಂಧಿಸಿದ್ದಾಗಿದ್ದರೂ ವೈದ್ಯರು ಎಡ ಕಿಡ್ನಿಯನ್ನು ತೆಗೆದಿರುವುದು ಗಂಭೀರ ಅಪರಾಧ ಎಂದು ಆಯೋಗ ಹೇಳಿದೆ. “ಒಬ್ಬ ಅರ್ಹ ವೈದ್ಯನಿಗೆ ತಾನು ತೆಗೆಯುತ್ತಿರುವುದು ಬಲ ಕಿಡ್ನಿಯೋ ಅಥವಾ ಎಡ ಕಿಡ್ನಿಯೋ ಎಂಬುದನ್ನು ಗುರುತಿಸಲು ಸಾಧ್ಯವಾಗದಿರುವುದು ಅಕ್ಷಮ್ಯ ಅಪರಾಧ. ಇದೊಂದು ವೈದ್ಯಕೀಯ ದುರಂತ” ಎಂದು ಪೀಠ ಹೇಳಿದೆ. ಎಡ ಕಿಡ್ನಿ ಸುರಕ್ಷಿತವಾಗಿದ್ದಿದ್ದರೆ ರೋಗಿ ಇನ್ನು ಹೆಚ್ಚಿನ ಕಾಲ ಬದುಕುತ್ತಿದ್ದರು ಎಂದು ಆಯೋಗ ಬೇಸರ ವ್ಯಕ್ತಪಡಿಸಿದೆ.

ಬಲ ಕಿಡ್ನಿ ಹಾಗೇ ಉಳಿದಿದ್ದರಿಂದ ಮಹಿಳೆಯ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸಿತು. ಅವರು ಸುಮಾರು ಎರಡು ವರ್ಷಗಳ ಕಾಲ ನಿರಂತರ ಡಯಾಲಿಸಿಸ್‌ಗೆ ಒಳಗಾಗಬೇಕಾಯಿತು. ಕೊನೆಗೆ ಫೆಬ್ರವರಿ 20, 2014 ರಂದು ಅವರು ಮೃತಪಟ್ಟರು.

ನಕಲಿ ದಾಖಲೆ ಸೃಷ್ಟಿಸಿದ್ದ ವೈದ್ಯ!

ಈ ಹಿಂದೆ ಉತ್ತರ ಪ್ರದೇಶ ವೈದ್ಯಕೀಯ ಮಂಡಳಿ ಮತ್ತು ಭಾರತೀಯ ವೈದ್ಯಕೀಯ ಮಂಡಳಿ (MCI) ಎರಡೂ ಸಹ ಈ ವೈದ್ಯನನ್ನು ಅಪರಾಧಿ ಎಂದು ಘೋಷಿಸಿದ್ದವು. ವಿಚಾರಣೆ ವೇಳೆ ವೈದ್ಯರು ತಮ್ಮ ಬಚಾವ್‌ಗಾಗಿ ನಕಲಿ ಕೇಸ್ ಶೀಟ್ ಸೃಷ್ಟಿಸಿ ಸಲ್ಲಿಕೆ ಮಾಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ವೈದ್ಯಕೀಯ ಮಂಡಳಿಯು ವೈದ್ಯರ ನೋಂದಣಿಯನ್ನು ಎರಡು ವರ್ಷಗಳ ಕಾಲ ಅಮಾನತುಗೊಳಿಸಿತ್ತು.

ಪರಿಹಾರದ ವಿವರಗಳು:

NCDRC ಆದೇಶದ ಪ್ರಕಾರ ದೂರುದಾರರಿಗೆ ಒಟ್ಟು 2 ಕೋಟಿ ರೂಪಾಯಿ ಪರಿಹಾರ ಸಿಗಲಿದೆ:

  1. ವೈದ್ಯಕೀಯ ನಿರ್ಲಕ್ಷ್ಯಕ್ಕಾಗಿ: 1.5 ಕೋಟಿ ರೂ.

  2. ಕುಟುಂಬದ ಪ್ರೀತಿ, ಒಡನಾಟದ ನಷ್ಟಕ್ಕಾಗಿ (Loss of consortium & affection): ತಲಾ 10 ಲಕ್ಷ ರೂ. (ದೂರುದಾರರಿಗೆ)

  3. ಕಾನೂನು ವೆಚ್ಚಕ್ಕಾಗಿ: 1 ಲಕ್ಷ ರೂ.

ಬಡ್ಡಿ ಪಾವತಿ ನಿಯಮ: ಈ ಸಂಪೂರ್ಣ ಮೊತ್ತವನ್ನು ಮೂರು ತಿಂಗಳ ಒಳಗಾಗಿ ಪಾವತಿಸಬೇಕು. ಮಹಿಳೆ ಮೃತಪಟ್ಟ ದಿನಾಂಕದಿಂದ (ಫೆಬ್ರವರಿ 20, 2014) ಅನ್ವಯವಾಗುವಂತೆ ವಾರ್ಷಿಕ ಶೇ. 6ರಷ್ಟು ಬಡ್ಡಿಯೊಂದಿಗೆ ಈ ಹಣವನ್ನು ನೀಡಬೇಕು. ಒಂದು ವೇಳೆ ಮೂರು ತಿಂಗಳೊಳಗೆ ಪಾವತಿಸಲು ವಿಫಲವಾದರೆ ಬಡ್ಡಿ ದರವನ್ನು ಶೇ. 9ಕ್ಕೆ ಏರಿಸಲಾಗುವುದು ಎಂದು ಕಡಕ್ ಆದೇಶ ನೀಡಲಾಗಿದೆ.

ಕಾಂಗ್ರೆಸ್‌ನಲ್ಲಿ ‘ಬೆಕ್ಕು-ಮಂಗನ’ ಜಗಳ; ಸಿಎಂ ಆಗಲು ಖರ್ಗೆ ಕಾಯುತ್ತಿದ್ದಾರೆ: ರಾಧಾಮೋಹನ್ ದಾಸ್ ಅಗ್ರವಾಲ್ ಲೇವಡಿ

JOB ALERT: ರಾಜ್ಯದ ವಿವಿಧ ಇಲಾಖೆ, ನಿಗಮಗಳಲ್ಲಿ ಖಾಲಿ ಇರುವ ‘ಎಂಜಿನಿಯರ್ ಹುದ್ದೆ’ಗಳ ಭರ್ತಿಗೆ ಅರ್ಜಿ ಆಹ್ವಾನ

Share. Facebook Twitter LinkedIn WhatsApp Email

Related Posts

​ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದೀಪ್ತಿ ಶರ್ಮಾ ವಿಶ್ವ ದಾಖಲೆ: ಪಾಕಿಸ್ತಾನ ವಿರುದ್ಧ 5 ವಿಕೆಟ್ ಕಬಳಿಸಿ ಹೊಸ ಇತಿಹಾಸ!

2 Mins Read

BREAKING : ಯುದ್ಧ ಅಂತ್ಯ ಬೆನ್ನಲ್ಲೆ, ಒಂದೇ ದಿನಕ್ಕೆ ಶೇ.4 ರಷ್ಟು ಕಚ್ಚಾ ತೈಲ ಬೆಲೆ ಇಳಿಕೆ : ಸಿಲಿಂಡರ್ ಪೂರೈಕೆ ಸುಗಮ ಸಾಧ್ಯತೆ!

2 Mins Read

​ಸ್ಲೋವಾಕಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ‘ವಂದೇ ಮಾತರಂ’ ಗೀತೆಯೊಂದಿಗೆ ಅದ್ಧೂರಿ ಸ್ವಾಗತ!

2 Mins Read
Recent News

ಚಿಕ್ಕಮಗಳೂರು : ತಂದೆಯನ್ನು ಕೊಂದು, ಅಪಘಾತವೆಂದು ನಾಟಕವಾಡಿದ ಮಗ ಅರೆಸ್ಟ್!

​ಮಹಿಳಾ ಟಿ20 ವಿಶ್ವಕಪ್‌ನಲ್ಲಿ ದೀಪ್ತಿ ಶರ್ಮಾ ವಿಶ್ವ ದಾಖಲೆ: ಪಾಕಿಸ್ತಾನ ವಿರುದ್ಧ 5 ವಿಕೆಟ್ ಕಬಳಿಸಿ ಹೊಸ ಇತಿಹಾಸ!

BREAKING : ಯುದ್ಧ ಅಂತ್ಯ ಬೆನ್ನಲ್ಲೆ, ಒಂದೇ ದಿನಕ್ಕೆ ಶೇ.4 ರಷ್ಟು ಕಚ್ಚಾ ತೈಲ ಬೆಲೆ ಇಳಿಕೆ : ಸಿಲಿಂಡರ್ ಪೂರೈಕೆ ಸುಗಮ ಸಾಧ್ಯತೆ!

​ಸ್ಲೋವಾಕಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ‘ವಂದೇ ಮಾತರಂ’ ಗೀತೆಯೊಂದಿಗೆ ಅದ್ಧೂರಿ ಸ್ವಾಗತ!

State News
KARNATAKA

ಚಿಕ್ಕಮಗಳೂರು : ತಂದೆಯನ್ನು ಕೊಂದು, ಅಪಘಾತವೆಂದು ನಾಟಕವಾಡಿದ ಮಗ ಅರೆಸ್ಟ್!

By ಸುರೇಶ್‌ KARNATAKA 1 Min Read

ಚಿಕ್ಕಮಗಳೂರು : ತಂದೆಯನ್ನು ಕೊಂದು ಆಕ್ಸಿಡೆಂಟ್ ನಾಟಕವಾಡಿದ ಪುತ್ರನನ್ನು ಇದೀಗ ಪೊಲೀಸ್ ಮಾಡಿದ್ದಾರೆ, ಚಿಕ್ಕಮಗಳೂರು ತಾಲೂಕಿನ ಹನುಮನಹಳ್ಳಿ ಒಂದು ಘಟನೆ…

SHOCKING : ಕೋಲಾರದಲ್ಲಿ ಘೋರ ದುರಂತ : ನೀರಿನ ಸಂಪ್ ಗೆ ಬಿದ್ದು 3 ವರ್ಷದ ಮಗು ದಾರುಣ ಸಾವು!

BIG NEWS : ಭಾರತದ ಆರ್ಥಿಕತೆ ವಿನಾಶದ ಹಾದಿಯಲ್ಲಿಲ್ಲ, ವೇಗದ ಆರ್ಥಿಕತೆ ಆಗುತ್ತಿದೆ : ನಿರ್ಮಲಾ ಸೀತಾರಾಮನ್

BIG NEWS: ರಾಜ್ಯದ ಆರೋಗ್ಯ ಇಲಾಖೆಯ ‘NHM ಗುತ್ತಿಗೆ ನೌಕರ’ರನ್ನು ‘ಖಾಯಂ’ ಬಗ್ಗೆ ಸಚಿವ ಯು.ಟಿ ಖಾದರ್ ಹೇಳಿದ್ದೇನು ಗೊತ್ತಾ?

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.