ಚಿಕ್ಕಮಗಳೂರು : ತಂದೆಯನ್ನು ಕೊಂದು ಆಕ್ಸಿಡೆಂಟ್ ನಾಟಕವಾಡಿದ ಪುತ್ರನನ್ನು ಇದೀಗ ಪೊಲೀಸ್ ಮಾಡಿದ್ದಾರೆ, ಚಿಕ್ಕಮಗಳೂರು ತಾಲೂಕಿನ ಹನುಮನಹಳ್ಳಿ ಒಂದು ಘಟನೆ ನಡೆದಿದ್ದು, ಕುಡಿದ ಮತ್ತಿನಲ್ಲಿ ತಾಯಿ ರಾಜಮ್ಮ ಮೇಲೆ ತಂದೆ ಹಲ್ಲೆ ಮಾಡಿರುತ್ತಾರೆ. ತಂದೆಯ ತಲೆಗೆ ಮರದ ಮಣೆಯಿಂದ ಮಗ ಹೊಡೆದಿದ್ದಾನೆ.
ಈ ವೇಳೆ ಸ್ಥಳದಲ್ಲಿಯೇ ಕುಸಿದಿದೆ ಬಿದ್ದ ತಂದೆಯನ್ನು ಆಸ್ಪತ್ರೆಗೆ ದಾಖಲಿಸಲು ಮುಂದಾಗುತ್ತಾರೆ. ಆದರೆ ಮಾರ್ಗ ಮಧ್ಯೆಯೇ ತಂದೆ ಸಾವನ್ನಪ್ಪಿದ್ದಾನೆ. ಬೈಕ್ನಲ್ಲಿ ಬಿದ್ದು ಗಾಯಗೊಂಡರು ಎಂದು ಮಗ ಕುಮಾರ್ ನಾಟಕವಾಡಿದ್ದಾನೆ. ಪೊಲೀಸರ ತನಿಖೆಯ ವೇಳೆ ಕೊಲೆಯ ರಹಸ್ಯ ಬಯಲಾಗಿದೆ. ತಂದೆ ಕೆಂಚೇಗೌಡನನ್ನು ಕೊಂದ ಮಗ ಕುಮಾರ್ ಕೊಂದಿರುತ್ತಾನೆ. ಇದೀಗ ಪೊಲೀಸರು ಆತನನ್ನು ಅರೆಸ್ಟ್ ಮಾಡಿದ್ದಾರೆ. ಇದೆ ಸಂದರ್ಭದಲ್ಲಿ ನನ್ನ ಗಂಡನನ್ನು ನಾನೇ ಕೊಂದಿದ್ದೇನೆ ಅಂತ ತಾಯಿ ಕೂಡ ಹೇಳಿಕೆ ನೀಡಿದ್ದಾರೆ.








