Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಕೋಲಾರದಲ್ಲಿ ಘೋರ ದುರಂತ : ನೀರಿನ ಸಂಪ್ ಗೆ ಬಿದ್ದು 3 ವರ್ಷದ ಮಗು ದಾರುಣ ಸಾವು!

BIG NEWS : ಭಾರತದ ಆರ್ಥಿಕತೆ ವಿನಾಶದ ಹಾದಿಯಲ್ಲಿಲ್ಲ, ವೇಗದ ಆರ್ಥಿಕತೆ ಆಗುತ್ತಿದೆ : ನಿರ್ಮಲಾ ಸೀತಾರಾಮನ್

​’ಶತ್ರುಗಳಿಗೆ ಶರಣಾಗತಿಯಷ್ಟೇ ದಾರಿ ಇತ್ತು’: ಯುಎಸ್ ಯುದ್ಧಕ್ಕೆ ಶಾಶ್ವತ ವಿರಾಮ ಘೋಷಿಸುತ್ತಿದ್ದಂತೆ ವಿಜಯೋತ್ಸವ ಆಚರಿಸಿದ ಇರಾನ್!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ಭಾರತದ ಆರ್ಥಿಕತೆ ವಿನಾಶದ ಹಾದಿಯಲ್ಲಿಲ್ಲ, ವೇಗದ ಆರ್ಥಿಕತೆ ಆಗುತ್ತಿದೆ : ನಿರ್ಮಲಾ ಸೀತಾರಾಮನ್
KARNATAKA

BIG NEWS : ಭಾರತದ ಆರ್ಥಿಕತೆ ವಿನಾಶದ ಹಾದಿಯಲ್ಲಿಲ್ಲ, ವೇಗದ ಆರ್ಥಿಕತೆ ಆಗುತ್ತಿದೆ : ನಿರ್ಮಲಾ ಸೀತಾರಾಮನ್

By ಸುರೇಶ್‌

ಬೆಂಗಳೂರು: ಭಾರತದ ಆರ್ಥಿಕತೆಯು ಯಾವುದೇ ಕಾರಣಕ್ಕೂ ವಿನಾಶದ ಹಾದಿಯಲ್ಲಿ ಸಾಗುತ್ತಿಲ್ಲ. ದೇಶದ ಜಿಡಿಪಿ (ಒಟ್ಟು ದೇಶಿ ಉತ್ಪನ್ನ) ಬೆಳವಣಿಗೆಯು ಅತ್ಯಂತ ಉತ್ತಮವಾಗಿದ್ದು, ಜಗತ್ತಿನಲ್ಲೇ ಅತ್ಯಂತ ವೇಗದ ಆರ್ಥಿಕ ಬೆಳವಣಿಗೆಯನ್ನು ಭಾರತ ಸಾಧಿಸುತ್ತಿದೆ ಎಂದು ಕೇಂದ್ರ ವಿತ್ತೀಯ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸ್ಪಷ್ಟಪಡಿಸಿದ್ದಾರೆ. ಬೆಂಗಳೂರಿನ ಜಯನಗರದಲ್ಲಿ ಆಯೋಜಿಸಲಾಗಿದ್ದ ‘ವಿಕಸಿತ ಭಾರತ್ ಸಂಕಲ್ಪ ಸಮಾವೇಶ’ದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆರ್ಥಿಕ ನೀತಿಗಳ ಟೀಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಸಚಿವರು, ರಾಹುಲ್ ಗಾಂಧಿ ಅವರು ಭಾರತದ ಆರ್ಥಿಕತೆಯ ಬಗ್ಗೆ ಜಾಗತಿಕ ಮಟ್ಟದಲ್ಲಿ ನಿರಂತರವಾಗಿ ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ. ಈ ಮೂಲಕ ಅವರು ಕೇವಲ ಸರ್ಕಾರವನ್ನು ಮಾತ್ರವಲ್ಲದೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ದೇಶದ ಜನತೆಯನ್ನು ಹೀಗಳೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ವಿರೋಧ ಪಕ್ಷದ ನಾಯಕರು ದೇಶದಲ್ಲಿ ಸದಾ ನಕಾರಾತ್ಮಕ ವಾತಾವರಣ ಸೃಷ್ಟಿಸಲು ಯತ್ನಿಸುತ್ತಿದ್ದಾರೆ ಎಂದು ಅವರು ದೂರಿದರು.

ಜಾಗತಿಕವಾಗಿ ಎದುರಾಗಿರುವ ಸವಾಲುಗಳನ್ನು ಉಲ್ಲೇಖಿಸಿದ ನಿರ್ಮಲಾ ಸೀತಾರಾಮನ್, ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಸನ್ನಿವೇಶದಿಂದಾಗಿ ಜಾಗತಿಕ ವ್ಯಾಪಾರಕ್ಕೆ ಭಾರಿ ಹೊಡೆತ ಬಿದ್ದಿದೆ. ಹಾರ್ಮೂಜ್ ಜಲಸಂಧಿಯಲ್ಲಿ ಹಡಗುಗಳ ಸಂಚಾರಕ್ಕೆ ತೀವ್ರ ಭೀತಿ ಎದುರಾಗಿದೆ. ಹಡಗುಗಳಿಗೆ ವಿಮೆ ಇದ್ದರೂ ಯುದ್ಧದ ಸಮಯದಲ್ಲಿ ಅವು ಪ್ರಯೋಜನಕ್ಕೆ ಬರುತ್ತಿಲ್ಲ. ಕೇವಲ ಹೆಚ್ಚಿನ ಹಣ ಪಾವತಿಸುವ ದೇಶಗಳಿಗೆ ಮಾತ್ರ ತೈಲ ಸಾಗಾಣಿಕೆ ಮಾಡಲಾಗುತ್ತಿದೆ. ಇಂತಹ ಕಠಿಣ ಜಾಗತಿಕ ಸವಾಲುಗಳ ಮಧ್ಯೆಯೂ ಭಾರತದಲ್ಲಿ ಆರ್ಥಿಕ ಬೆಳವಣಿಗೆ ಕುಂಠಿತಗೊಂಡಿಲ್ಲ ಎಂದು ಅವರು ವಿವರಿಸಿದರು.

ದೇಶದಲ್ಲಿ ತೈಲ ಮತ್ತು ಇಂಧನ ಬಿಕ್ಕಟ್ಟು ಎದುರಾಗದಂತೆ ಸರ್ಕಾರ ಯಶಸ್ವಿ ಕ್ರಮಗಳನ್ನು ಕೈಗೊಂಡಿದೆ. ಜಾಗತಿಕ ಮಟ್ಟದಲ್ಲಿ ಹಡಗುಗಳ ಸಂಚಾರಕ್ಕೆ ರಕ್ಷಣೆ ಇಲ್ಲದಿದ್ದರೂ, ಭಾರತದಲ್ಲಿ ಎಲ್​ಪಿಜಿ (ಅಡುಗೆ ಅನಿಲ) ಕೊರತೆಯಾಗದಂತೆ ಕೇಂದ್ರ ಸರ್ಕಾರ ಸಮರ್ಥವಾಗಿ ನಿಭಾಯಿಸಿದೆ. ಆದರೆ, ಇವೆಲ್ಲವೂ ರಾಹುಲ್ ಗಾಂಧಿಯವರಿಗೆ ಅರ್ಥವಾಗುತ್ತಿಲ್ಲ. ಕಾಂಗ್ರೆಸ್ ಪಕ್ಷದ ನಾಯಕರು ಭಾರತವನ್ನು ಆರ್ಥಿಕವಾಗಿ ದುರ್ಬಲ ಮಾಡಲು ಹೊರಟಿದ್ದು, ದೇಶಕ್ಕೆ ಕಷ್ಟಕಾಲ ಬಂದಿದೆಯೇನೋ ಎಂಬಂತಹ ಸುಳ್ಳು ಆತಂಕವನ್ನು ಸಾರ್ವಜನಿಕರಲ್ಲಿ ಮೂಡಿಸುತ್ತಿದ್ದಾರೆ ಎಂದು ಸಚಿವರು ಕಿಡಿಕಾರಿದರು.

ಕಳೆದ 12 ವರ್ಷಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ಕೇವಲ ಮೂಲಸೌಕರ್ಯ ಅಭಿವೃದ್ಧಿಯನ್ನಷ್ಟೇ ಮಾಡಿಲ್ಲ, ಬದಲಿಗೆ ದೇಶದ ಪ್ರತಿಯೊಬ್ಬ ನಾಗರಿಕನ ಕಲ್ಯಾಣಕ್ಕಾಗಿ ಶ್ರಮಿಸಿದೆ. ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್’ (ಎಲ್ಲರ ಜೊತೆ, ಎಲ್ಲರ ಅಭಿವೃದ್ಧಿ) ಎಂಬ ಮಂತ್ರದೊಂದಿಗೆ ಸರ್ಕಾರ ಮುನ್ನಡೆಯುತ್ತಿದ್ದು, ಇದರ ಫಲವಾಗಿ ದೇಶದ 25 ಕೋಟಿ ಜನರು ಬಡತನದ ರೇಖೆಯಿಂದ ಹೊರಬಂದಿದ್ದಾರೆ. ಇದು ಸರ್ಕಾರದ ಜನಪರ ನೀತಿಗಳಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಅವರು ಪ್ರತಿಪಾದಿಸಿದರು.

ಇದೇ ವೇಳೆ ಸರ್ಕಾರದ ವಿವಿಧ ಜನಕಲ್ಯಾಣ ಯೋಜನೆಗಳ ಸಾಧನೆಯನ್ನು ತೆರೆದಿಟ್ಟ ಸಚಿವರು, ದೇಶಾದ್ಯಂತ ಇದುವರೆಗೆ 12 ಕೋಟಿ ಕುಟುಂಬಗಳಿಗೆ ಶೌಚಾಲಯ ನಿರ್ಮಿಸಿಕೊಡಲಾಗಿದೆ. ‘ಜಲ ಜೀವನ್ ಮಿಷನ್’ ಅಡಿಯಲ್ಲಿ ಒಟ್ಟು 15 ಕೋಟಿ ಕುಟುಂಬಗಳಿಗೆ ನಲ್ಲಿ ನೀರು ಒದಗಿಸಲಾಗಿದೆ. ವಿಶೇಷವಾಗಿ ಕರ್ನಾಟಕದ ಚಿತ್ರದುರ್ಗ ಮತ್ತು ರಾಯಚೂರಿನಂತಹ ತೀವ್ರ ಒಣ ಹಾಗೂ ಬರಪೀಡಿತ ಪ್ರದೇಶಗಳ ಗ್ರಾಮೀಣ ಭಾಗಗಳಲ್ಲೂ ಇಂದು ನಲ್ಲಿಗಳ ಮೂಲಕ ನೀರು ಸರಬರಾಜು ಆಗುತ್ತಿದೆ. ಇದರೊಂದಿಗೆ ದೇಶದ 10 ಕೋಟಿ ಬಡ ಕುಟುಂಬಗಳಿಗೆ ಉಚಿತ ಎಲ್​ಪಿಜಿ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೆಮ್ಮೆಯಿಂದ ತಿಳಿಸಿದರು.

Share. Facebook Twitter LinkedIn WhatsApp Email

Related Posts

SHOCKING : ಕೋಲಾರದಲ್ಲಿ ಘೋರ ದುರಂತ : ನೀರಿನ ಸಂಪ್ ಗೆ ಬಿದ್ದು 3 ವರ್ಷದ ಮಗು ದಾರುಣ ಸಾವು!

2 Mins Read

BIG NEWS: ರಾಜ್ಯದ ಆರೋಗ್ಯ ಇಲಾಖೆಯ ‘NHM ಗುತ್ತಿಗೆ ನೌಕರ’ರನ್ನು ‘ಖಾಯಂ’ ಬಗ್ಗೆ ಸಚಿವ ಯು.ಟಿ ಖಾದರ್ ಹೇಳಿದ್ದೇನು ಗೊತ್ತಾ?

2 Mins Read

BREAKING : ಬೆಂಗಳೂರಲ್ಲಿ ಸೆಲ್ಫಿ ವಿಡಿಯೋ ಮಾಡಿ, ಹೋಂ ಗಾರ್ಡ್ ಪತ್ನಿಯನ್ನು ಬರ್ಬರವಾಗಿ ಕೊಂದ ಪತಿ!

1 Min Read
Recent News

SHOCKING : ಕೋಲಾರದಲ್ಲಿ ಘೋರ ದುರಂತ : ನೀರಿನ ಸಂಪ್ ಗೆ ಬಿದ್ದು 3 ವರ್ಷದ ಮಗು ದಾರುಣ ಸಾವು!

BIG NEWS : ಭಾರತದ ಆರ್ಥಿಕತೆ ವಿನಾಶದ ಹಾದಿಯಲ್ಲಿಲ್ಲ, ವೇಗದ ಆರ್ಥಿಕತೆ ಆಗುತ್ತಿದೆ : ನಿರ್ಮಲಾ ಸೀತಾರಾಮನ್

​’ಶತ್ರುಗಳಿಗೆ ಶರಣಾಗತಿಯಷ್ಟೇ ದಾರಿ ಇತ್ತು’: ಯುಎಸ್ ಯುದ್ಧಕ್ಕೆ ಶಾಶ್ವತ ವಿರಾಮ ಘೋಷಿಸುತ್ತಿದ್ದಂತೆ ವಿಜಯೋತ್ಸವ ಆಚರಿಸಿದ ಇರಾನ್!

​ರಾಮಮಂದಿರ ದೇಣಿಗೆ ಅಕ್ರಮ ಆರೋಪ: ಎಸ್‌ಐಟಿ ತನಿಖೆಯ ನಿರ್ಧಾರವನ್ನು ಸ್ವಾಗತಿಸಿದ ನೃಪೇಂದ್ರ ಮಿಶ್ರಾ

State News
KARNATAKA

SHOCKING : ಕೋಲಾರದಲ್ಲಿ ಘೋರ ದುರಂತ : ನೀರಿನ ಸಂಪ್ ಗೆ ಬಿದ್ದು 3 ವರ್ಷದ ಮಗು ದಾರುಣ ಸಾವು!

By ಸುರೇಶ್‌ KARNATAKA 2 Mins Read

ಕೋಲಾರ: ಮನೆ ಬಳಿ ಆಟವಾಡುತ್ತಿದ್ದ ಮೂರು ವರ್ಷದ ಕಂದಮ್ಮನೊಬ್ಬ ಆಕಸ್ಮಿಕವಾಗಿ ನೀರಿನ ಸಂಪ್‌ಗೆ ಬಿದ್ದು ಜಲಸಮಾಧಿಯಾಗಿರುವ ಅತ್ಯಂತ ಕರುಣಾಜನಕ ಘಟನೆ…

BIG NEWS : ಭಾರತದ ಆರ್ಥಿಕತೆ ವಿನಾಶದ ಹಾದಿಯಲ್ಲಿಲ್ಲ, ವೇಗದ ಆರ್ಥಿಕತೆ ಆಗುತ್ತಿದೆ : ನಿರ್ಮಲಾ ಸೀತಾರಾಮನ್

BIG NEWS: ರಾಜ್ಯದ ಆರೋಗ್ಯ ಇಲಾಖೆಯ ‘NHM ಗುತ್ತಿಗೆ ನೌಕರ’ರನ್ನು ‘ಖಾಯಂ’ ಬಗ್ಗೆ ಸಚಿವ ಯು.ಟಿ ಖಾದರ್ ಹೇಳಿದ್ದೇನು ಗೊತ್ತಾ?

BREAKING : ಬೆಂಗಳೂರಲ್ಲಿ ಸೆಲ್ಫಿ ವಿಡಿಯೋ ಮಾಡಿ, ಹೋಂ ಗಾರ್ಡ್ ಪತ್ನಿಯನ್ನು ಬರ್ಬರವಾಗಿ ಕೊಂದ ಪತಿ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.