ಬೆಂಗಳೂರು : ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ದರ್ಶನ್ಗೆ ವೈದ್ಯಕೀಯ ಚಿಕಿತ್ಸೆಗಾಗಿ ಮಧ್ಯಂತರ ಜಾಮೀನು ನೀಡಲಾಗಿದೆ. ಜಾಮೀನು ಆರುವಾರಗಳ ಮಾತ್ರವೇ ಇರಲಿದ್ದು, ಈ ಆರು ವಾರಗಳಲ್ಲಿ ಚಿಕಿತ್ಸೆ ಮುಗಿಸಿ ಮರಳಿ ಜೈಲು ಸೇರಬೇಕಿದೆ. ಅಲ್ಲದೆ ನ್ಯಾಯಾಲಯ ವಿಧಿಸಿರುವ ಷರತ್ತಿನಂತೆ ಒಂದು ವಾರದ ಒಳಗಾಗಿ ಚಿಕಿತ್ಸೆಯ ಕುರಿತು ಪೂರ್ಣ ಮಾಹಿತಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ.
ಹಾಗಾಗಿ ನಿನ್ನೆ ಬಳ್ಳಾರಿಯಲ್ಲಿ ನಿಂದ ಬಿಡುಗಡೆಯಾದ ದರ್ಶನ್ ನೇರವಾಗಿ ಬೆಂಗಳೂರುಗೆ ಆಗಮಿಸಿ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ ವಿಶ್ರಾಂತಿ ಪಡೆದಿದ್ದಾರೆ. ಬಳಿಕ ಮಗ ವಿನೇಶ್ ಹುಟ್ಟುಹಬ್ಬದದಲ್ಲಿ ಭಾಗಿಯಾಗಿದ್ದಾರೆ. ಇಂದು ನಟ ದರ್ಶನ್ ಅವರು ಬೆನ್ನು ನೋವಿನ ಸಮಸ್ಯೆಯ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಬೇಕಿತ್ತು, ಆದರೆ ಎರಡು ದಿನಗಳ ಕಾಲ ಮುಂದೂಡಿದ್ದಾರೆ.
ಇದಕೆ ಕಾರಣವೂ ಇದೆ ಇಂದು ದರ್ಶನ್ ಪುತ್ರ ವಿನೀಶ್ ಹುಟ್ಟುಹಬ್ಬ. ಆದ ಕಾರಣ ಇಂದು ಮಗನ ಜೊತೆ, ಪತ್ನಿಯ ಜೊತೆಗೆ ಸಮಯ ಕಳೆಯಲಿದ್ದಾರೆ. ನಾಳೆ ದೀಪಾವಳಿ ಇದ್ದು, ಮನೆಯವರೊಟ್ಟಿಗೆ ದೀಪಾವಳಿ ಆಚರಣೆ ಮಾಡಲಿದ್ದಾರೆ. ಇಂದು ಬೆಳಿಗ್ಗೆಯಷ್ಟೆ ರಾಜರಾಜೇಶ್ವರಿನಗರದ ಮನೆಯಿಂದ ಎಲ್ಲ ಕಾರುಗಳನ್ನು ಸಹ ದರ್ಶನ್ ತಮ್ಮ ಪತ್ನಿಯ ಮನೆಗೆ ತರಿಸಿಕೊಂಡಿದ್ದು, ಎಲ್ಲದಕ್ಕೂ ಪೂಜೆ ಮಾಡಿ ಹಬ್ಬ ಆಚರಣೆ ಮಾಡಲಿದ್ದಾರೆ. ಆ ನಂತರವೇ ದರ್ಶನ್ ಆಸ್ಪತ್ರೆಗೆ ತೆರಳಲಿದ್ದಾರೆ.
ಅಮವಾಸ್ಯೆ ಇರುವ ಕಾರಣ ಅಮವಾಸ್ಯೆ ಕಳೆದುಕೊಂಡು ದರ್ಶನ್ ಆಸ್ಪತ್ರೆಗೆ ಹೋಗಲಿದ್ದಾರೆ. ಅಲ್ಲಿ ವೈದ್ಯರೊಟ್ಟಿಗೆ ಚರ್ಚೆ ಮಾಡಿ ಮುಂದಿನ ಚಿಕಿತ್ಸೆಗೆ ಒಳಗಾಗಲಿದ್ದಾರೆ. ಈಗ ಪತ್ನಿಯ ಮನೆಯಲ್ಲಿ ವೈದ್ಯರ ಸಲಹೆ ಮೇರೆಗೆ ಕೆಲವು ಔಷಧ ಹಾಗೂ ಬೆನ್ನಿಗೆ ಕೆಲವು ಪಟ್ಟಿಗಳನ್ನು ದರ್ಶನ್ ಧರಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ.