Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಇಂದು ಪ್ರಧಾನಿ ಮೋದಿಯಿಂದ 23ನೇ ಕಂತಿನ `PM ಕಿಸಾನ್ ಹಣ’ ಬಿಡುಗಡೆ; ಕರ್ನಾಟಕದ 41.54 ಲಕ್ಷ ರೈತರಿಗೆ ಲಭಿಸಲಿದೆ ನೆರವು.!

ಲಂಡನ್‌ನಲ್ಲಿ ಭೀಕರ ರೈಲು ದುರಂತ: ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ; ಚಾಲಕ ಸಾವು, 80ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ!

BREAKING : ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ಇಬ್ಬರು ಶಿಕ್ಷಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ FIR ದಾಖಲು

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಲಂಡನ್‌ನಲ್ಲಿ ಭೀಕರ ರೈಲು ದುರಂತ: ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ; ಚಾಲಕ ಸಾವು, 80ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ!
INDIA

ಲಂಡನ್‌ನಲ್ಲಿ ಭೀಕರ ರೈಲು ದುರಂತ: ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ; ಚಾಲಕ ಸಾವು, 80ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ!

By ಗೋಪಾಲ್‌ ಎನ್‌

ಲಂಡನ್: ಬ್ರಿಟನ್ ರಾಜಧಾನಿ ಲಂಡನ್‌ನ ಉತ್ತರ ಭಾಗದಲ್ಲಿ ಎರಡು ಪ್ರಯಾಣಿಕರ ರೈಲುಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಓರ್ವ ರೈಲು ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸುಮಾರು 90 ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ವರದಿಯಾಗಿದೆ.

ದೆ. ಲಂಡನ್‌ನ ಸೇಂಟ್ ಪ್ಯಾನ್‌ಕ್ರಾಸ್ ನಿಲ್ದಾಣದ ಕಡೆಗೆ ತೆರಳುತ್ತಿದ್ದ ‘ಈಸ್ಟ್ ಮಿಡ್‌ಲ್ಯಾಂಡ್ಸ್ ರೈಲ್ವೇ’ ಸಂಸ್ಥೆಗೆ ಸೇರಿದ ಎರಡು ರೈಲುಗಳು ಒಂದಕ್ಕೊಂದು ಡಿಕ್ಕಿ ಹೊಡೆದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳಲ್ಲಿ ಒಂದು ರೈಲಿನ ಮುಂಭಾಗವು ಮತ್ತೊಂದು ರೈಲಿನ ಹಿಂಭಾಗಕ್ಕೆ ಅತ್ಯಂತ ವೇಗವಾಗಿ ಸಿಲುಕಿರುವುದು ಕಂಡುಬಂದಿದೆ.

 ರೈಲ್ವೇ ಕಾರ್ಮಿಕರ ಸಂಘಟನೆಯಾದ ಆರ್‌ಎಂಟಿ (RMT) ನೀಡಿರುವ ಮಾಹಿತಿಯ ಪ್ರಕಾರ, ಅಪಘಾತದ ತೀವ್ರತೆಗೆ ಒಂದು ರೈಲಿನ ಚಾಲಕ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತುರ್ತು ಚಿಕಿತ್ಸಾ ಸಿಬ್ಬಂದಿಯ ವರದಿಯ ಪ್ರಕಾರ, ಅಪಘಾತದಲ್ಲಿ ಒಟ್ಟು 11 ಜನರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, 22 ಜನರಿಗೆ ದೊಡ್ಡ ಪ್ರಮಾಣದ ಮೂಳೆ ಮುರಿತ ಹಾಗೂ ತೀವ್ರ ಗಾಯಗಳಾಗಿವೆ. ಇನ್ನುಳಿದ 56 ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಪಘಾತದ ಸಮಯದಲ್ಲಿ ರೈಲಿನಲ್ಲಿದ್ದ ವೈದ್ಯರೊಬ್ಬರು ತಮಗಾದ ಭೀಕರ ಅನುಭವವನ್ನು ಹಂಚಿಕೊಂಡಿದ್ದು, “ಯಾವುದೇ ಮುನ್ಸೂಚನೆ ಇಲ್ಲದೆ ಇದ್ದಕ್ಕಿದ್ದಂತೆ ದೊಡ್ಡ ಸದ್ದು ಕೇಳಿಸಿತು. ತಕ್ಷಣವೇ ನಾನು ಮುಂದಿನ ಸೀಟಿಗೆ ಹೋಗಿ ಬಿದ್ದೆ. ಕಣ್ಣು ಬಿಡುವಷ್ಟರಲ್ಲಿ ಬೋಗಿಯೊಳಗೆ ಹೊಗೆ ತುಂಬಿಕೊಂಡಿತ್ತು. ಜನರು ರಕ್ತಸಿಕ್ತವಾಗಿ ಬಿದ್ದಿದ್ದರು, ಬೋಗಿಯುದ್ದಕ್ಕೂ ಕಿರುಚಾಟ, ಆಕ್ರಂದನ ಮುಗಿಲು ಮುಟ್ಟಿತ್ತು” ಎಂದು ತಿಳಿಸಿದ್ದಾರೆ.

ಘಟನೆ ತಿಳಿಯುತ್ತಿದ್ದಂತೆ ಬ್ರಿಟಿಷ್ ಸಾರಿಗೆ ಪೊಲೀಸ್, ಅಗ್ನಿಶಾಮಕ ದಳ ಹಾಗೂ ವೈದ್ಯಕೀಯ ತಂಡಗಳು ಸ್ಥಳಕ್ಕೆ ಧಾವಿಸಿವೆ. ಗಾಯಾಳುಗಳನ್ನು ರಕ್ಷಿಸಲು 20 ಕ್ಕೂ ಹೆಚ್ಚು ಆಂಬುಲೆನ್ಸ್‌ಗಳು ಹಾಗೂ ಗಾಳಿಯಲ್ಲೇ ತುರ್ತು ಚಿಕಿತ್ಸೆ ನೀಡುವ 6 ‘ಏರ್ ಆಂಬುಲೆನ್ಸ್’ (ಹೆಲಿಕಾಪ್ಟರ್) ಗಳನ್ನು ಬಳಸಲಾಗಿದೆ.

ಬ್ರಿಟನ್ ಪ್ರಧಾನಿ ಕೀರ್ ಸ್ಟಾರ್ಮರ್ ಅವರು ಘಟನೆಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮೃತ ಚಾಲಕನ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ. ಒಂದೇ ಹಳಿಯಲ್ಲಿ ಎರಡು ರೈಲುಗಳು ಹೇಗೆ ಬಂದವು ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದ್ದು, ಸದ್ಯ ಈ ಮಾರ್ಗದ ಎಲ್ಲಾ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

London: Driver killed and several were injured after two trains collide
Share. Facebook Twitter LinkedIn WhatsApp Email

Related Posts

BIG NEWS : ನಾಳೆ ದೇಶಾದ್ಯಂತ `NEET-UG’ ಮರು ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ | NEET UG re-exam

3 Mins Read

BREAKING : ಖಾನ್ ಸರ್‌ಗೆ ಬಿಗ್ ರಿಲೀಫ್: ಬಂಧನದಿಂದ ರಕ್ಷಣೆ ವಿಸ್ತರಿಸಿದ ಬಿಹಾರ ನ್ಯಾಯಾಲಯ!

1 Min Read

ಪಾದಚಾರಿ ಮಾರ್ಗದಲ್ಲಿ ನಡೆಯುವುದು ನಾಗರಿಕರ ಮೂಲಭೂತ ಹಕ್ಕು; ವಾಹನ ಸಂಚಾರಕ್ಕಿಂತ ಇದಕ್ಕೇ ಮೊದಲ ಆದ್ಯತೆ ಎಂದ ಸುಪ್ರೀಂ ಕೋರ್ಟ್

2 Mins Read
Recent News

ಇಂದು ಪ್ರಧಾನಿ ಮೋದಿಯಿಂದ 23ನೇ ಕಂತಿನ `PM ಕಿಸಾನ್ ಹಣ’ ಬಿಡುಗಡೆ; ಕರ್ನಾಟಕದ 41.54 ಲಕ್ಷ ರೈತರಿಗೆ ಲಭಿಸಲಿದೆ ನೆರವು.!

ಲಂಡನ್‌ನಲ್ಲಿ ಭೀಕರ ರೈಲು ದುರಂತ: ಎರಡು ರೈಲುಗಳ ನಡುವೆ ಮುಖಾಮುಖಿ ಡಿಕ್ಕಿ; ಚಾಲಕ ಸಾವು, 80ಕ್ಕೂ ಹೆಚ್ಚು ಪ್ರಯಾಣಿಕರಿಗೆ ಗಾಯ!

BREAKING : ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ಇಬ್ಬರು ಶಿಕ್ಷಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ FIR ದಾಖಲು

BIG NEWS : ನಾಳೆ ದೇಶಾದ್ಯಂತ `NEET-UG’ ಮರು ಪರೀಕ್ಷೆ : ಅಭ್ಯರ್ಥಿಗಳಿಗೆ ಈ ನಿಯಮಗಳ ಪಾಲನೆ ಕಡ್ಡಾಯ | NEET UG re-exam

State News
KARNATAKA

ಇಂದು ಪ್ರಧಾನಿ ಮೋದಿಯಿಂದ 23ನೇ ಕಂತಿನ `PM ಕಿಸಾನ್ ಹಣ’ ಬಿಡುಗಡೆ; ಕರ್ನಾಟಕದ 41.54 ಲಕ್ಷ ರೈತರಿಗೆ ಲಭಿಸಲಿದೆ ನೆರವು.!

By kannadanewsnow57 KARNATAKA 1 Min Read

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) ಯೋಜನೆಯ 23ನೇ ಕಂತಿನ ಆರ್ಥಿಕ ನೆರವನ್ನು…

BREAKING : ಮೂವರು ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ; ಇಬ್ಬರು ಶಿಕ್ಷಕರ ವಿರುದ್ಧ ಪೋಕ್ಸೋ ಕಾಯ್ದೆಯಡಿ FIR ದಾಖಲು

BIG ALERT: ಮನೆ ಮಾಲೀಕರು ಡೆಪಾಸಿಟ್ ಹಣ ತಡೆಹಿಡಿದರೆ ತಕ್ಷಣ ಈ ಕ್ರಮ ಕೈಗೊಳ್ಳಿ!

BIG NEWS : ಅನರ್ಹ ಫಲಾನುಭವಿಗಳಿಗೆ ಶಾಕ್ : ಪಕ್ಕಾ ದಾಖಲೆ ಕೊಟ್ಟರಷ್ಟೇ ಸಿಗುತ್ತೆ `ಗೃಹಲಕ್ಷ್ಮಿ,ಗೃಹಜ್ಯೋತಿ’.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.