Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG BREAKING: ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ 3ನೇ ಹಂತದ ‘SIR’ ಜಾರಿ: ಚುನಾವಣಾ ಆಯೋಗದ ಮಹತ್ವದ ನಿರ್ಧಾರ | ECI SIR

BREAKING: ಭಾರತದ ಉಳಿದ ಭಾಗಗಳಿಗೆ 3ನೇ ಹಂತದ ‘SIR’ಗೆ ಚಾಲನೆ ನೀಡಿದ ಚುನಾವಣಾ ಆಯೋಗ

ವಿಧಾನಸೌಧದಲ್ಲಿ ನೂತನ ಶಾಸಕರಾಗಿ ಉಮೇಶ್ ಮೇಟಿ, ಸಮರ್ಥ ಶಾಮನೂರು ಪ್ರಮಾಣವಚನ ಸ್ವೀಕಾರ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS: ‘ಸಿಎಂ ಬದಲಾವಣೆ ಹೇಳಿಕೆ’ಗಳಿಗೆ ಬ್ರೇಕ್ ಹಾಕಿ: ‘ಎಐಸಿಸಿ ಅಧ್ಯಕ್ಷ ಖರ್ಗೆ’ಗೆ ‘ಕಾಂಗ್ರೆಸ್ ಮುಖಂಡ’ರು ಪತ್ರ
KARNATAKA

BIG NEWS: ‘ಸಿಎಂ ಬದಲಾವಣೆ ಹೇಳಿಕೆ’ಗಳಿಗೆ ಬ್ರೇಕ್ ಹಾಕಿ: ‘ಎಐಸಿಸಿ ಅಧ್ಯಕ್ಷ ಖರ್ಗೆ’ಗೆ ‘ಕಾಂಗ್ರೆಸ್ ಮುಖಂಡ’ರು ಪತ್ರ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಪಕ್ಷದ ನಿಯಮ ಉಲ್ಲಂಘಿಸಿ ಸಚಿವರು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿತನದ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದು, ಇಂಥ ಚರ್ಚೆಗೆ ತಡೆ ಹಾಕುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶಾಸಕರಾದಂತ ಮಂಜುನಾಥ್ ಬಂಡಾರಿ ಹಾಗೂ ದಿನೇಶ್ ಗೂಳಿಗೌಡ ಪತ್ರ ಬರೆದು ಮನವಿ ಮಾಡಿದ್ದಾರೆ.

ಈ ಕುರಿತಂತೆ ಎಐಸಿಸಿ ಅಧ್ಯಕ್ಷರಿಗೆ ಪತ್ರ ಬರೆದಿರುವಂತ ಅವರು, ಕಾಂಗ್ರೆಸ್‌ ಪಕ್ಷವು ರಾಜ್ಯದ ಕಳೆದ 34 ವರ್ಷಗಳ ಇತಿಹಾಸದಲ್ಲಿಯೇ ಅತಿ ಹೆಚ್ಚು ಮತಗಳನ್ನು ಗಳಿಸಿ, 2023ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ದಾಖಲೆ ಬರೆದಿತ್ತು. ಶೇ. 42.88 ರಷ್ಟು ಮತ ಗಳಿಸಿ, 135 ಸ್ಥಾನಗಳನ್ನು ಗಳಿಸಿ, ಸರ್ಕಾರ ರಚಿಸಿದೆ. 1989 ರ ನಂತರ ಕರ್ನಾಟಕದಲ್ಲಿ ಯಾವುದೇ ಪಕ್ಷಕ್ಕೆ ಲಭಿಸದ ಅತಿ ದೊಡ್ಡ ಗೆಲುವು ಕಾಂಗ್ರೆಸ್‌ಗೆ ಲಭಿಸಿತ್ತು. ಮಾತ್ರವಲ್ಲ, ಸರ್ಕಾರ ಚುಕ್ಕಾಣಿ ಹಿಡಿದ ಆರೇ ತಿಂಗಳಲ್ಲಿ ಕೊಟ್ಟ 5 ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ಮಾಡುವ ಮೂಲಕ ದೇಶದಲ್ಲೇ ವಿಶಿಷ್ಟ ಹಾಗೂ ಗಮನ ಸೆಳೆಯುವ ಸಾಧನೆ ಮಾಡಿದೆ ಎಂದಿದ್ದಾರೆ.

ಕಾಂಗ್ರೆಸ್‌ ಸರ್ಕಾರ ಜಾರಿಗೆ ತಂದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಮುಂತಾದ ಗ್ಯಾರಂಟಿ ಯೋಜನೆಗಳು ಬಡ ಜನರಿಗೆ ಆಶ್ರಯವಾಗಿವೆ. ಮಹಿಳಾ ಸಬಲೀಕರಣಕ್ಕೆ ವಿಶಿಷ್ಟ ಅರ್ಥ ನೀಡಿವೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳಿವೆ. ಗ್ಯಾರಂಟಿ ಯೋಜನೆಗಳು ಜನಜನಿತವಾಗಿವೆ. ಇವಕ್ಕೆಲ್ಲ ಕಾರಣ ಮುಖ್ಯಮಂತ್ರಿ ಅವರಾದ ಸಿದ್ದರಾಮಯ್ಯ ಅವರು ಹಾಗೂ ಉಪ ಮುಖ್ಯಮಂತ್ರಿಯವರಾದ ಡಿ.ಕೆ.ಶಿವಕುಮಾರ್‌ ಅವರ ಜನಪರ ಕಾಳಜಿ ಎಂಬುದರಲ್ಲಿ ಎರಡು ಮಾತಿಲ್ಲ ಎಂದು ತಿಳಿಸಿದ್ದಾರೆ.

ಗ್ಯಾರಂಟಿ ಯೋಜನೆಗಳ ಯಶಸ್ಸಿನಿಂದ ಆತಂಕಿತವಾಗಿರುವ ಬಿಜೆಪಿ ಹಾಗೂ ಜೆಡಿಎಸ್‌ ಮೈತ್ರಿ ಪಕ್ಷಗಳು ಮುಡಾ ಹಗರಣ ಎಂಬ ಹುರುಳಿಲ್ಲದ ಸುಳ್ಳು ಆರೋಪ ಮಾಡಿ, ಸರ್ಕಾರವನ್ನು ಅಭದ್ರ ಮಾಡಲು ಹೊರಟಿವೆ. ಆದರೆ, ಕಾಂಗ್ರೆಸ್‌ ಸರ್ಕಾರದ ಭಾಗವಾಗಿರುವ ಸಚಿವರು ತಾನು ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡುವ ಮೂಲಕ ಸರ್ಕಾರಕ್ಕೆ ಹಾಗೂ ಪಕ್ಷಕ್ಕೆ ಮುಜುಗರ ಉಂಟು ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಶಿಸ್ತಿನ ಪಕ್ಷ. ಮುಖ್ಯಮಂತ್ರಿ ಮುಂತಾದ ಮಹತ್ವದ ಸ್ಥಾನಗಳು ಹೈಕಮಾಂಡ್‌ ಹಂತದಲ್ಲಿ ನಿರ್ಧಾರವಾಗುತ್ತವೆ. ಆಗಬೇಕು ಎಂಬುದು ಎಲ್ಲರಿಗೂ ತಿಳಿದ ವಿಚಾರವಾಗಿದೆ. ಹೀಗಿರುವಾಗ ಸಚಿವರ ಹಾಗೂ ಪಕ್ಷದ ಕೆಲ ಹಿರಿಯರ ಹೇಳಿಕೆಗಳಿಂದ ಮಾಧ್ಯಮಗಳಲ್ಲಿ ಈಗ ಮುಖ್ಯಮಂತ್ರಿ ಬದಲಾವಣೆಯ ವಿಷಯ ಚರ್ಚೆಯಾಗುತ್ತಿದೆ. ಸರ್ಕಾರದ ಭಾಗವಾಗಿರುವ ಸಚಿವರ ಲಗಾಮಿಲ್ಲದ ಹೇಳಿಕೆಗಳಿಂದ ಮುಂದೆ ಪಕ್ಷದ ಇಮೇಜ್‌ಗೆ ಡ್ಯಾಮೇಜ್‌ ಆಗುವ ಸಾಧ್ಯತೆ ಇದೆ. ಸರ್ಕಾರ ಅಭದ್ರವಾಗುವ ಸಾಧ್ಯತೆ ಇದೆ. ಹಾಗಾಗಿ ಇಂತಹ ಚರ್ಚೆಗಳಿಗೆ ತಕ್ಷಣ ತಡೆ ಹಾಕುವ ಅವಶ್ಯಕತೆ ಇದೆ ಎಂದು ತಿಳಿಸಿದ್ದಾರೆ.

ಸಚಿವರಾಗಿ ಅಧಿಕಾರ ವಹಿಸಿಕೊಂಡವರು ತಮ್ಮ ಇಲಾಖೆಗೆ ಕಳೆದ ಆಯವ್ಯಯದಲ್ಲಿ ನೀಡಿದ ಕೊಡುಗೆಗಳ ಜಾರಿಗೆ ಕ್ರಮ ವಹಿಸಲಿ. ಸಾರ್ವಜನಿಕರಿಗೆ, ರಾಜ್ಯದ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಮುಖ್ಯಮಂತ್ರಿಗಳು ಘೋಷಣೆ ಮಾಡಿದ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು. ಜನರ ಸಮಸ್ಯೆಗಳನ್ನು ಆಲಿಸಬೇಕು. ರಾಜ್ಯದ ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು. ಅದನ್ನು ಬಿಟ್ಟು ಮುಖ್ಯಮಂತ್ರಿ ಆಕಾಂಕ್ಷಿ ಎಂದು ಹೇಳಿಕೊಂಡು ಹೋಗುವುದು ತಪ್ಪು. ಅಂಥವರ ಮೇಲೆ ಶಿಸ್ತುಕ್ರಮದ ಎಚ್ಚರಿಕೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

BREAKING: ಭಾರತದಲ್ಲಿ ಮೊದಲ ‘ಮಂಕಿಪಾಕ್ಸ್’ ಪ್ರಕರಣ ಪತ್ತೆ: ದೃಢಪಡಿಸಿದ ಕೇಂದ್ರ ಆರೋಗ್ಯ ಸಚಿವಾಲಯ | Monkeypox Case

ಬೆಂಗಳೂರು ಕನ್ನಡಿಗರಿಗೆ ಸೇರಿದ್ದು: ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದ ಪೋಸ್ಟ್, ಟಾಕ್ ವಾರ್ | Bengaluru belongs to Kannadigas

BIG NEWS : ನನಗೂ ‘ಸಿಎಂ’ ಆಗುವ ಆಸೆ ಇದೆ ಆದರೆ…?: ಸಚಿವ ಶರಣಬಸಪ್ಪ ದರ್ಶನಾಪುರ ಹೊಸ ಬಾಂಬ್!

Share. Facebook Twitter LinkedIn WhatsApp Email

Related Posts

ವಿಧಾನಸೌಧದಲ್ಲಿ ನೂತನ ಶಾಸಕರಾಗಿ ಉಮೇಶ್ ಮೇಟಿ, ಸಮರ್ಥ ಶಾಮನೂರು ಪ್ರಮಾಣವಚನ ಸ್ವೀಕಾರ

1 Min Read

BIG NEWS : ಬರಡು ಭೂಮಿಗೆ ಗಂಗೆ ಹರಿಸಿದ ‘ಗೃಹಲಕ್ಷ್ಮಿ’ : ಹೊಲದಲ್ಲಿ ಬೋರ್ವೆಲ್ ಕೊರೆಸಿ ಇತರರಿಗೆ ಮಾದರಿಯಾದ ಮಹಿಳೆ!

1 Min Read

ಒತ್ತುವರಿಯಾದ ನಿಮ್ಮ ಜಮೀನು ಕಾನೂನು ಪ್ರಕಾರ ಮರಳಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

2 Mins Read
Recent News

BIG BREAKING: ಕರ್ನಾಟಕ ಸೇರಿದಂತೆ 16 ರಾಜ್ಯಗಳಲ್ಲಿ 3ನೇ ಹಂತದ ‘SIR’ ಜಾರಿ: ಚುನಾವಣಾ ಆಯೋಗದ ಮಹತ್ವದ ನಿರ್ಧಾರ | ECI SIR

BREAKING: ಭಾರತದ ಉಳಿದ ಭಾಗಗಳಿಗೆ 3ನೇ ಹಂತದ ‘SIR’ಗೆ ಚಾಲನೆ ನೀಡಿದ ಚುನಾವಣಾ ಆಯೋಗ

ವಿಧಾನಸೌಧದಲ್ಲಿ ನೂತನ ಶಾಸಕರಾಗಿ ಉಮೇಶ್ ಮೇಟಿ, ಸಮರ್ಥ ಶಾಮನೂರು ಪ್ರಮಾಣವಚನ ಸ್ವೀಕಾರ

BIG NEWS : ಬರಡು ಭೂಮಿಗೆ ಗಂಗೆ ಹರಿಸಿದ ‘ಗೃಹಲಕ್ಷ್ಮಿ’ : ಹೊಲದಲ್ಲಿ ಬೋರ್ವೆಲ್ ಕೊರೆಸಿ ಇತರರಿಗೆ ಮಾದರಿಯಾದ ಮಹಿಳೆ!

State News
KARNATAKA

ವಿಧಾನಸೌಧದಲ್ಲಿ ನೂತನ ಶಾಸಕರಾಗಿ ಉಮೇಶ್ ಮೇಟಿ, ಸಮರ್ಥ ಶಾಮನೂರು ಪ್ರಮಾಣವಚನ ಸ್ವೀಕಾರ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಬೆಂಗಳೂರು: ಬಾಗಲಕೋಟೆ ಹಾಗೂ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾದ ಶಾಸಕರು ಇಂದು ಅಧಿಕೃತವಾಗಿ ಶಾಸಕರಾಗಿ ಪದಗ್ರಹಣ…

BIG NEWS : ಬರಡು ಭೂಮಿಗೆ ಗಂಗೆ ಹರಿಸಿದ ‘ಗೃಹಲಕ್ಷ್ಮಿ’ : ಹೊಲದಲ್ಲಿ ಬೋರ್ವೆಲ್ ಕೊರೆಸಿ ಇತರರಿಗೆ ಮಾದರಿಯಾದ ಮಹಿಳೆ!

ಒತ್ತುವರಿಯಾದ ನಿಮ್ಮ ಜಮೀನು ಕಾನೂನು ಪ್ರಕಾರ ಮರಳಿ ಪಡೆಯುವುದು ಹೇಗೆ? ಇಲ್ಲಿದೆ ಮಾಹಿತಿ

BREAKING : ಸಚಿವ ಸಂಪುಟ ಪುನಾರಚನೆ ಮಾಡ್ಬೇಕು, ಈ ಬಗ್ಗೆ ಹೈಕಮಾಂಡ್ ಜೊತೆ ಚರ್ಚಿಸುತ್ತೇನೆ : ಸುಳಿವು ನೀಡಿದ ಸಿಎಂ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.