2026-27ನೇ ಸಾಲಿನ ಮುಂಗಾರು ಹಂಗಾಮಿನ ಕರ್ನಾಟಕ ರೈತ ಸುರಕ್ಷಾ– ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯಡಿ ಜಿಲ್ಲೆಯ ರೈತರು ತಮ್ಮ ಬೆಳೆಗಳ ವಿಮಾ ರಕ್ಷಣೆಗಾಗಿ ನೋಂದಾಯಿಸಿಕೊಳ್ಳಬೇಕು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರಾದ ಜಿ.ಡಿ ಕೃಷ್ಣಮೂರ್ತಿ ಅವರು ತಿಳಿಸಿದ್ದಾರೆ.
ಸರ್ಕಾರದ ಅಧಿಸೂಚನೆಯಂತೆ 2026-27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ – ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆಯನ್ನು ಕೊಪ್ಪಳ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯಡಿ ಜಿಲ್ಲೆಯ ರೈತರು ತಮ್ಮ ಬೆಳೆಗಳಿಗೆ ವಿಮಾ ರಕ್ಷಣೆಯನ್ನು ಪಡೆಯಲು ನಿಗದಿತ ಕೊನೆಯ ದಿನಾಂಕದೊಳಗೆ ನೋಂದಾಯಿಸಿಕೊಳ್ಳಬೇಕಾಗಿದ್ದು, ಜಿಲ್ಲೆಯ ಹೆಚ್ಚಿನ ಸಂಖ್ಯೆಯ ರೈತರಿಗೆ ಯೋಜನೆಯ ಮಾಹಿತಿ ತಲುಪಿಸುವ ಉದ್ದೇಶದಿಂದ, ಕೊಪ್ಪಳ ಜಿಲ್ಲೆಗೆ ಸಂಬAಧಿಸಿದAತೆ ಬೆಳೆವಾರು ನೋಂದಣಿ ಕೊನೆಯ ದಿನಾಂಕ, ರೈತರು ತುಂಬುವ ವಂತಿಕೆ, ಪ್ರತಿ ಹೆಕ್ಟರ್ಗೆ ವಿಮಾ ಮೊತ್ತ ಹಾಗೂ ಯೋಜನೆಯ ಇತರ ಮುಖ್ಯ ಮಾಹಿತಿಯೊಂದಿಗೆ ಈ ಪ್ರಕಟಣೆಯನ್ನು ಹೊರಡಿಸಲಾಗಿದೆ.
ನೀರಾವರಿ ಭತ್ತಕ್ಕೆ 1,08,600 (ರೂ./ಹೆಕ್ಟರ್) ವಿಮಾ ಮೊತ್ತ ಆಗಿದ್ದು, ರೈತರು ಶೇ. 2ರ ವಂತಿಕೆಯೊಂದಿಗೆ ಜುಲೈ 31 ನೋಂದಣಿ ಮಾಡಿಕೊಳ್ಳಬೇಕು. ಅದೇ ರೀತಿ ಮಳೆ ಆಶ್ರಿತ ಭತ್ತಕ್ಕೆ 75,600 (ರೂ./ಹೆಕ್ಟರ್) ವಿಮಾ ಮೊತ್ತ, ನೀರಾವರಿ ಮುಸುಕಿನಜೋಳಕ್ಕೆ 76,200 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ಮುಸುಕಿನಜೋಳಕ್ಕೆ 67,500 (ರೂ./ಹೆಕ್ಟರ್) ವಿಮಾ ಮೊತ್ತ, ನೀರಾವತಿ ಜೋಳಕ್ಕೆ 52,600 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ಜೋಳಕ್ಕೆ 44,400 (ರೂ./ಹೆಕ್ಟರ್) ವಿಮಾ ಮೊತ್ತ, ನೀರಾವರಿ ಸಜ್ಜೆಗೆ 43,300 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ಸಜ್ಜೆಗೆ 34,800 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ನವಣೆಗೆ 32,200 (ರೂ./ಹೆಕ್ಟರ್) ವಿಮಾ ಮೊತ್ತ, ನೀರಾವರಿ ತೊಗರಿಗೆ 60,300 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ತೊಗರಿಗೆ 57,600 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ಹುರುಳಿಗೆ 23,500 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ಅಲಸಂದೆಗೆ 35,000 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ಎಳ್ಳು ಬೆಳೆಗೆ 31,900 (ರೂ./ಹೆಕ್ಟರ್) ವಿಮಾ ಮೊತ್ತ, ನೀರಾವರಿ ನೆಲಗಡಲೆ (ಶೇಂಗಾ)ಗೆ 77,800 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ನೆಲಗಡಲೆ (ಶೇಂಗಾ)ಗೆ 65,400 (ರೂ./ಹೆಕ್ಟರ್) ವಿಮಾ ಮೊತ್ತ, ನೀರಾವರಿ ಸೂರ್ಯಕಾಂತಿಗೆ 57,900 (ರೂ./ಹೆಕ್ಟರ್) ವಿಮಾ ಮೊತ್ತ, ಮಳೆ ಆಶ್ರಿತ ಸೂರ್ಯಕಾಂತಿಗೆ 48,200 (ರೂ./ಹೆಕ್ಟರ್) ವಿಮಾ ಮೊತ್ತ ಆಗಿದ್ದು, ರೈತರು ಆಯಾ ಬೆಳೆಗಳ ವಿಮಾ ಮೊತ್ತಕ್ಕೆ ಶೇ. 2ರ ವಂತಿಕೆಯೊಂದಿಗೆ ಜುಲೈ 31 ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು.
ಮಳೆ ಆಶ್ರಿತ ಹೆಸರು ಬೆಳೆಗೆ ಸಂಬಂಧಿಸಿದಂತೆ 39,700 (ರೂ./ಹೆಕ್ಟರ್) ವಿಮಾ ಮೊತ್ತಕ್ಕೆ ಶೇ. 2ರ ವಂತಿಕೆಯೊಂದಿಗೆ ಮತ್ತು ನೀರಾವರಿ ಹತ್ತಿಯ 86,400 (ರೂ./ಹೆಕ್ಟರ್) ವಿಮಾ ಮೊತ್ತಕ್ಕೆ ಶೇ. 5ರ ವಂತಿಕೆಯೊಂದಿಗೆ ಜುಲೈ 15 ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು. ಮಳೆ ಆಶ್ರಿತ ಹತ್ತಿಗೆ 59,700 (ರೂ./ಹೆಕ್ಟರ್) ವಿಮಾ ಮೊತ್ತ, ಟೊಮ್ಯಾಟೊಗೆ 1,69,800 (ರೂ./ಹೆಕ್ಟರ್) ವಿಮಾ ಮೊತ್ತ, ನೀರಾವರಿ ಈರುಳ್ಳಿಗೆ 93,900 (ರೂ./ಹೆಕ್ಟರ್) ವಿಮಾ ಮೊತ್ತ ಹಾಗೂ ಮಳೆ ಆಶ್ರಿತ ಈರುಳ್ಳಿಗೆ 85,600 (ರೂ./ಹೆಕ್ಟರ್) ವಿಮಾ ಮೊತ್ತ ಆಗಿದ್ದು, ಈ ಎಲ್ಲಾ ಬೆಳೆಗಳ ಮೊತ್ತಕ್ಕೆ ರೈತರು ಶೇ. 5ರ ವಂತಿಕೆಯೊಂದಿಗೆ ಜುಲೈ 31 ರೊಳಗಾಗಿ ನೋಂದಣಿ ಮಾಡಿಕೊಳ್ಳಬೇಕು.
ಯೋಜನೆಯ ಇತರ ಮುಖ್ಯ ಮಾಹಿತಿ
ಇಂಡೆಮ್ನಿಟಿ ಮಟ್ಟವು ನೀರಾವರಿ ಬೆಳೆಗಳಿಗೆ ಶೇ.90 ಹಾಗೂ ಮಳೆ ಆಶ್ರಿತ ಬೆಳೆಗಳಿಗೆ ಶೇ.80. ಬೆಳೆ ಸಾಲ ಪಡೆದ ಮತ್ತು ಪಡೆಯದ ಎಲ್ಲಾ ರೈತರು ಯೋಜನೆಯಲ್ಲಿ ಭಾಗವಹಿಸಬಹುದು. ರೈತರ ಫ್ರೂಟ್ಸ್ ಐಡಿ (ಎಫ್ಐಡಿ) ಕಡ್ಡಾಯ. ಬೆಳೆ ಸಾಲ ಪಡೆಯದ ರೈತರು ಸಮೀಪದ ಬ್ಯಾಂಕ್, ಸಾಮಾನ್ಯ ಸೇವಾ ಕೇಂದ್ರ (ಸಿಎಸ್ಸಿ), ಗ್ರಾಮ-ಒನ್ ಕೇಂದ್ರ ಮೂಲಕ ನೋಂದಾಯಿಸಿಕೊಳ್ಳಬಹುದು.
ಜಿಲ್ಲೆಯ ಅನುಷ್ಠಾನ ವಿಮಾ ಸಂಸ್ಥೆಯು ಇಫ್ಕೋ ಟೋಕಿಯೋ ಜನರಲ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್. ಟೋಲ್ ಫ್ರೀ ಸಂಖ್ಯೆ: 1800-103-5490 ಆಗಿದ್ದು, ಹೆಚ್ಚಿನ ಮಾಹಿತಿಗಾಗಿ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಕೊಪ್ಪಳ ಜಂಟಿ ಕೃಷಿ ನಿರ್ದೇಶಕರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ.








