ವಾರಣಾಸಿ ಕಾಶಿ : ಕರ್ನಾಟಕ ಸರ್ಕಾರ ಕಾಶಿ ಯಾತ್ರೆಗೆ ಸಹಾಯಧನ ಘೋಷಣೆ ಮಾಡಿದ ನಂತರ ಯಾತ್ರಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ. ಯಾತ್ರಾರ್ಥಿಗಳಿಗೆ ಇನ್ನೂ ಹೆಚ್ಚಿನ ಅನುಕೂಲ ಕಲ್ಪಿಸುವ ಉದ್ದೇಶದಿಂದ ಕರ್ನಾಟಕ ಛತ್ರವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸಲು ಯೋಜನೆ ರೂಪಿಸಲಾಗುವುದು ಎಂದು ಮಾನ್ಯ ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವರಾದ ಶಶಿಕಲಾ ಆ ಜೊಲ್ಲೆ ಹೇಳಿದರು.
PM Svanidhi Scheme : ‘ಬೀದಿ ಬದಿ ವ್ಯಾಪಾರಿ’ಗಳಿಗೆ ಸಿಹಿಸುದ್ದಿ ನೀಡಿದ ಮೋದಿ ಸರ್ಕಾರ.!
ಇಂದು ಕಾಶಿ ಯಲ್ಲಿರುವ ಕರ್ನಾಟಕ ರಾಜ್ಯ ಛತ್ರಕ್ಕೆ ಭೇಟಿ ನೀಡಿ ಕಾಶಿ ಸಹಾಯಧನ ರಶೀದಿಗಳನ್ನು ಫಲಾನುಭವಿಗಳಿಗೆ ವಿತರಿಸಿ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದರು. ಕರ್ನಾಟಕ ರಾಜ್ಯ ಛತ್ರವನ್ನು 1928 ರಲ್ಲಿ ಮೈಸೂರಿನ ನಾಲ್ವಡಿ ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ಅವರು ಕಾಶಿ ರಾಜನಿಂದ ಜಾಗ ಖರೀದಿಸಿ ನಿರ್ಮಿಸಿದ್ದರು. 2 ನೆ ಕಟ್ಟಡವನ್ನು 2002 ರಲ್ಲಿ ಕಟ್ಟಿಸಲಾಗಿದೆ. ಗಂಗಾ ನದಿಯ ತೀರದಲ್ಲಿ ಇರುವ ಪ್ರಮುಖ ಹಾಗೂ ಮನಮೋಹಕ ಜಾಗ ಇದಾಗಿದೆ. ಈ ಜಾಗವನ್ನು ಅಭಿವೃದ್ಧಿಗೊಳಿಸಿದಲ್ಲಿ ರಾಜ್ಯದ ಯಾತ್ರಾರ್ಥಿಗಳಿಗೆ ಬಹಳಷ್ಟು ಅನುಕೂಲವಾಗುತ್ತದೆ. ಈಗಾಗಲೇ ಸಹಾಯಧನ ವಿತರಣೆ ಕಾರ್ಯ ಚುರುಕುಗೊಳಿಸಲು ಅಗತ್ಯ ಸಿಬ್ಬಂದಿ ಹಾಗೂ ಸಾಮಗ್ರಿಗಳನ್ನು ಕೊಂಡುಕೊಳ್ಳಲು ಅನುಮತಿ ನೀಡಲಾಗಿದೆ. ಈ ನೇಮಕ ಕಾರ್ಯವನ್ನು ಚುರುಕುಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಭಿವೃದ್ಧಿ ಗೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸೂಚನೆ
ಕಾಶಿ ಕರ್ನಾಟಕ ಛತ್ರದ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚನೆ ನೀಡಿದರು. ಹಳೆಯ ಛತ್ರ ಮೈಸೂರು ಮಹಾರಾಜರು ಕಟ್ಟಿಸಿದ್ದಾರೆ. ಅದರ ನೈಜ ಶೈಲಿಯನ್ನು ಉಳಿಸಿಕೊಂಡು ಅಭಿವೃದ್ಧಿ ಸಾಧ್ಯವೇ ಎನ್ನುವುದನ್ನ ಪರಿಶೀಲಿಸಬೇಕು. ಇದೆ ವೇಳೆ ಯಾತ್ರಾರ್ಥಿಗಳಿಗೆ ಹೆಚ್ಚಿನ ಸೌಲಭ್ಯಗಳನ್ನು ಅಳವಡಿಸುವುದನ್ನು ಗಮನದಲ್ಲಿ ಇಟ್ಟುಕೊಳ್ಳುವಂತೆ ಸೂಚಿಸಿದರು.
BIGG NEWS: ‘ಪತಂಜಲಿ’ಯ 5 ಉತ್ಪನ್ನಗಳ ಮೇಲಿನ ನಿಷೇಧವನ್ನು ಹಿಂಪಡೆದ ಉತ್ತರಾಖಂಡ ಸರ್ಕಾರ | Ramdev’s Patanjali
ಕಾಶಿ ಸಹಾಯಧನ ಯೋಜನೆಗೆ ಶ್ಲಾಘನೆ
ಧಾರ್ಮಿಕ ದತ್ತಿ ಇಲಾಖೆ ಪ್ರಾರಂಭಿಸಿರುವ ಕಾಶಿ ಸಹಾಯ ಧನ ಯೋಜನೆಯಿಂದ ಬಹಳಷ್ಟು ಅನುಕೂಲವಾಗಿದೆ. ಇಂತಹ ಜನಾನುಕೂಲ ಯೋಜನೆ ಪ್ರಾರಂಭಿಸಿ ಅನುಕೂಲ ಮಾಡಿ ಕೊಟ್ಟಿದ್ದರಿಂದ ನಾವೆಲ್ಲರೂ ಕಾಶಿಗೆ ಬರುವಂತಾಗಿದೆ. ಇದಕ್ಕೆ ಕರಣೀಭೂತರಾದ ನಿಮಗೆ ಧನ್ಯವಾದಗಳು ಇಂದು ಪ್ರವಾಸಿಗರು ಸಂತಸ ವ್ಯಕ್ತಪಡಿಸಿದರು.
ಕಾಶಿಯಲ್ಲಿರುವ ಜಂಗಮವಾಡಿ ಮಠಕ್ಕೆ ಭೇಟಿ ನೀಡಿ ಜಗದ್ಗುರುಗಳ ಆಶೀರ್ವಾದ ಪಡೆದ ಸಚಿವರು ಮಠದಲ್ಲಿದ್ದ ಕರ್ನಾಟಕ ದ ಯಾತ್ರಾರ್ಥಿಗಳೊಂದಿಗೆ ಚರ್ಚೆ ನಡೆಸಿದರು.
ಈ ಚಿಕ್ಕೋಡಿಯ ಸಂಸದರಾದ ಅಣ್ಣಾ ಸಾಹೇಬ್ ಜೊಲ್ಲೆ, ಕಾಶಿ ಕರ್ನಾಟಕ ಛತ್ರದ ವ್ಯವಸ್ಥಾಪಕರಾದ ಕೃಷ್ಣಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.