Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಕ್ರಿಮಿನಲ್ ಪ್ರಕರಣದಿಂದ ನೌಕರರು ಖುಲಾಸೆಯಾದರೂ ಬಾಕಿ ವೇತನದ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

BREAKING : ಜಿ.ಪರಮೇಶ್ವರ್ ಗೆ ‘KPCC’ ಅಧ್ಯಕ್ಷ ಸ್ಥಾನ, ಸ್ಪೀಕರ್ ಸ್ಥಾನದ ಆಫರ್ ನೀಡಿದ ಹೈಕಮಾಂಡ್!

ALERT : ಸಾರ್ವಜನಿಕರೇ ಎಚ್ಚರ :ಔಷಧಿ ಬಳಸುವಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING: ಎಡಗೈ 5.25, ಬಲಗೈ 5.25, ಇತರರಿಗೆ ಶೇ.4.5ರಷ್ಟು ಒಳ ಮೀಸಲಾತಿ ಕಲ್ಪಿಸಲು ನಿರ್ಧಾರ: ಸಿಎಂ ಸಿದ್ಧರಾಮಯ್ಯ ಘೋಷಣೆ
KARNATAKA

BREAKING: ಎಡಗೈ 5.25, ಬಲಗೈ 5.25, ಇತರರಿಗೆ ಶೇ.4.5ರಷ್ಟು ಒಳ ಮೀಸಲಾತಿ ಕಲ್ಪಿಸಲು ನಿರ್ಧಾರ: ಸಿಎಂ ಸಿದ್ಧರಾಮಯ್ಯ ಘೋಷಣೆ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ರಾಜ್ಯದಲ್ಲಿ ದಶಕಗಳಿಂದ ಚರ್ಚೆಯಲ್ಲಿದ್ದ ಮತ್ತು ರಾಜಕೀಯವಾಗಿ ಕಗ್ಗಂಟಾಗಿದ್ದ ಪರಿಶಿಷ್ಟ ಜಾತಿ (SC) ಒಳಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಐತಿಹಾಸಿಕ ನಿರ್ಧಾರ ಕೈಗೊಂಡಿದೆ. ಇಂದು ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳಮೀಸಲಾತಿ ಹಂಚಿಕೆಯ **’ತ್ರಿ-ಸೂತ್ರ’**ವನ್ನು ಅಂತಿಮಗೊಳಿಸುವ ಮೂಲಕ ವಿವಾದಕ್ಕೆ ತೆರೆ ಎಳೆಯಲಾಗಿದೆ. ಎಡಗೈ ಸಮುದಾಯದವರಿಗೆ 5.25, ಬಲಗೈ ಸಮುದಾಯದವರಿಗೆ 5.25 ಹಾಗೂ ಇತರೆ ಸಮುದಾಯದವರಿಗೆ 4.5ರಷ್ಟು ಮೀಸಲಾತಿ ಕಲ್ಪಿಸುವಂತ ನಿರ್ಧಾರವನ್ನು ಸಿಎಂ ಸಿದ್ಧರಾಮಯ್ಯ ಘೋಷಿಸಿದ್ದಾರೆ.

ಇಂದು ವಿಶೇಷ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಸಚಿವ ಹೆಚ್.ಕೆ ಪಾಟೀಲ್ ಅವರು, ರಾಷ್ಟ್ರದಲ್ಲೇ ಅತೀ ಮಹತ್ವದ್ದಾಗುವಂತ ನಿರ್ಣಯವನ್ನು ಸಿಎಂ ಸಿದ್ಧರಾಮಯ್ಯ ನೇತೃತ್ವದಲ್ಲಿ ನಡೆದಂತ ವಿಶೇಷ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಗಿದೆ. ಈ ವಿಷಯವು ಸಾಕಷ್ಟು ಚರ್ಚೆಗೆ ಒಳಗಾಗಿತ್ತು. ಎಲ್ಲಾ ಸಮುದಾಯಗಳನ್ನು ಮನವೊಲಿಸಿ, ಒಪ್ಪಿಸಿ, ವಿಧಾನಸಭೆ, ಪರಿಷತ್ತಿನಲ್ಲಿಯೂ ಇದಕ್ಕೆ ಸಂಬಂಧಿಸಿದಂತ ಕಾನೂನು ಮಾಡುವಾಗ ಸದನವನ್ನೇ ವಿಶ್ವಾಸಕ್ಕೆ ತೆಗೆದುಕೊಂಡು ಸರ್ವಾನುಮತದಲ್ಲಿ ಆಗುವಂತೆ ಸಿಎಂ ಸಿದ್ಧರಾಮಯ್ಯ ಮಾಡಿದ್ದಾರೆ ಎಂದರು.

ಒಳ ಮೀಸಲಾತಿ ಸಂಬಂಧ ರೋಷ್ಟರ್ ನಲ್ಲಿ ಏನು ವ್ಯತ್ಯಾಸವಾಗಿತ್ತು ಅದನ್ನು ಸಿಎಂ ಸಿದ್ಧರಾಮಯ್ಯ ಸರಿ ಪಡಿಸಿ ಮಹತ್ವದ ನಿರ್ಧಾರ ಕೈಗೊಳ್ಳಲು ಯಶಸ್ವಿಯಾಗಿದ್ದಾರೆ ಎಂದರು.

ಈ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಸಿಎಂ ಸಿದ್ಧರಾಮಯ್ಯ ಅವರು, ಒಳ ಮೀಸಲಾತಿ ಸಂಬಂಧ ಬಹಳಷ್ಟು ಹೋರಾಟಗಳು ನಡೆದಿದ್ದಾವೆ. ಪಕ್ಷದ ವತಿಯಿಂದಲೂ ಚಿತ್ರದುರ್ಗದಲ್ಲಿ ಒಂದು ಸಮಾವೇಶ ಏರ್ಪಾಡು ಮಾಡಲಾಗಿತ್ತು. ಡಾ.ಪರಮೇಶ್ವರ್ ನೇತೃತ್ವದಲ್ಲಿ ಆ ಸಮಾವೇಶ ನಡೆಯಿತು. ಅಲ್ಲಿ ಒಳ ಮೀಸಲಾತಿ ಮಾಡಲು ಎಲ್ಲಾ ಗುಂಪುಗಳು ಕೂಡ, ಎಸ್ಸಿಯಲ್ಲಿ 101 ಜಾತಿಗಳು ಬರುತ್ತವೆ. 59 ಅಲೆಮಾರಿ ಜಾತಿಗಳು ಭಾಗವಹಿಸಿದ್ದವು. ಅಲ್ಲಿ ಒಳ ಮೀಸಲಾತಿ ಮಾಡಲು ಸರ್ವಾನುಮತದಿಂದ ಒಪ್ಪಿಗೆ ಸೂಚಿಸಲಾಯಿತು ಎಂದರು.

ಚುನಾವಣೆ ಸಂದರ್ಭದಲ್ಲಿ, ಪೂರ್ವದಲ್ಲಿ ಡಾ.ಜಿ ಪರಮೇಶ್ವರ್ ಅಧ್ಯಕ್ಷತೆಯಲ್ಲಿ ಪ್ರಣಾಣಿಕೆ ಸಮಿತಿ ರಚನೆಯಾಗಿತ್ತು. ಆ ಪ್ರಣಾಣಿಕೆ ಸಮಿತಿಯೂ ಸರ್ಕಾರ ನೀಡಲಿದೆ ಎಂದು ತಿಳಿಸಿತ್ತು. 1-08-2024ರಂದು ಸುಪ್ರೀಂ ಕೋರ್ಟ್ ಒಂದು ತೀರ್ಮಾನ ನೀಡಿದೆ. ಒಳ ಮೀಸಲಾತಿ ಮಾಡಬಹುದು ಎಂಬುದಾಗಿ ತೀರ್ಪು ನೀಡಿದೆ. ಅದು 7 ಜಡ್ಜ್ ಪೀಠವು ನೀಡಿದಂತ ತೀರ್ಪು ಆಗಿತ್ತು. ಒಳ ಮೀಸಲಾತಿ ಮಾಡಲು ಸಂವಿಧಾನದ ವಿರೋಧವಿಲ್ಲ ಎಂದು ನ್ಯಾಯಪೀಠವು ಹೇಳಿತ್ತು. ಆ ತೀರ್ಪಿನ ನಂತ್ರ ನಾವು ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಲಾಗಿತ್ತು. ಅವರು ವರದಿಯನ್ನು ನೀಡಿದ್ದಾರೆ. ಆ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಇರಿಸಿ, ಸರ್ವಾನುಮತದ ತೀರ್ಮಾನ ಕೈಗೊಳ್ಳಲಾಗಿದೆ ಎಂದರು.

ನಾಗಮೋಹನ್ ದಾಸ್ ನೀಡಿದಂತ ವರದಿಯಲ್ಲಿ ಎ, ಬಿ, ಸಿ, ಡಿ ಎಂಬುದಾಗಿ ವರ್ಗ ಮಾಡಿ ಮೀಸಲಾತಿ ನೀಡಲಾಗಿತ್ತು. ಎಡಗೈ 6, ಬಲಗೈ 6,  ಇತರರಿಗೆ 5ರಷ್ಟು ಮೀಸಲಾತಿ ನೀಡಲು ತೀರ್ಮಾನಿಸಲಾಗಿತ್ತು. ರಾಜ್ಯಪಾಲರು ಕಾನೂನು ಮಾಡಿದ್ದರು. ಅದಕ್ಕೆ ಸಹಿ ಕೂಡ ಹಾಕಲಾಗಿತ್ತು. ಆದರೇ ರೋಷ್ಟರ್ ಪಾಯಿಂಟ್ ನಲ್ಲಿ ಸಮಸ್ಯೆ ಆಗಿತ್ತು. ಅಲೆಮಾರಿಯವರು ಕೋರ್ಟ್ ಗೆ ಹೋದರು. ಮೀಸಲಾತಿ 50% ಗಿಂತ ಜಾಸ್ತಿಯಾಗಬಾರದು ಎಂಬುದಾಗಿ ತಿಳಿಸಿತು ಎಂದರು.

ಇದೆಲ್ಲದರ ನಡುವೆ ರೋಸ್ಟರ್ ಪಾಯಿಂಟ್ ಸರಿಯಿಲ್ಲ ಎಂಬುದಾಗಿ ಸಮುದಾಯಗಳಿಂದ ಪ್ರತಿಭಟನೆ ಮುಂದುವರೆಯುತ್ತಲೇ ಇತ್ತು. ಮಾರ್ಚ್.27ರಂದು ವಿಶೇಷ ಸಚಿವ ಸಂಪುಟ ಸಭೆ ಮಾಡಬೇಕು ಎಂದು ತೀರ್ಮಾನಿಸಲಾಗಿತ್ತು. ಆದರೇ ಚುನಾವಣಾ ನೀತಿ ಸಂಹಿತೆಯ ಕಾರಣ ವಿಶೇಷ ಸಚಿವ ಸಂಪುಟ ಸಭೆಯನ್ನು ಮಾಡಲಾಗಲಿಲ್ಲ. ಏಪ್ರಿಲ್.24ರ ಇಂದಿಗೆ ವಿಶೇಷ ಸಚಿವ ಸಂಪುಟ ನಿಗದಿ ಮಾಡಲಾಗಿತ್ತು. ಇಂದಿನ ಸಂಪುಟ ಸಭೆಯಲ್ಲಿ ಅಂತಿಮಗೊಳಿಸಲೇ ಬೇಕು ಎಂಬುದಾಗಿ ಕಳೆದ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿತ್ತು. ಅಂದಿನ ಸಂಪುಟ ಸಭೆಯಲ್ಲಿ ಚರ್ಚಿಸಿದಾಗ ಚೀಫ್ ಸೆಕ್ರೆಟರಿ ನೇತೃತ್ವದಲ್ಲಿ ಟೆಕ್ನಿಕಲ್ ಕಮಿಟಿ ರಚಿಸುವ ಸಲಹೆ ಮಾಡಲಾಗಿತ್ತು. ಅವರು ಇಂದು ತಮ್ಮ ವರದಿಯನ್ನು ನೀಡಿದ್ದಾರೆ ಎಂದರು.

ಈ ಎಲ್ಲ ಕಾರಣದಿಂದಾಗಿ ಎಡಗೈ ಸಮುದಾಯಕ್ಕೆ 5.3, ಬಲಗೈ ಸಮುದಾಯಕ್ಕೆ 5.3, ಇತರಿಗೆ 4.4 ರೋಷ್ಟರ್ ನಂತೆ ಮೀಸಲಾತಿ ನಿಗದಿ ಪಡಿಸಲು ವರದಿ ನೀಡಲಾಗಿದೆ. ನಾವು ಅಂತಿಮವಾಗಿ ವಿಶೇಷ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿರೋದು ಎಡಗೈ ಸಮುದಾಯಕ್ಕೆ 5.25, ಬಲಗೈ ಸಮುದಾಯಕ್ಕೆ 5.25, ಇತರೆ ಸಮುದಾಯಕ್ಕೆ 4.5 ಮೀಸಲಾತಿ ಕಲ್ಪಿಸಲು ನಿರ್ಧರಿಸಲಾಗಿದೆ ಎಂಬುದಾಗಿ ಘೋಷಿಸಿದರು.

ವರದಿ; ವಸಂತ ಬಿ ಈಶ್ವರಗೆರೆ, ಸಂಪಾದಕರು..

BIG BREAKING: ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರ: ಒಳ ಮೀಸಲಾತಿ ಹಂಚಿಕೆ ಪ್ರಮಾಣ ಅಧಿಕೃತ – ಯಾರಿಗೆ ಎಷ್ಟು? ಇಲ್ಲಿದೆ ಮಾಹಿತಿ

SHOCKING: ರಾಜ್ಯದಲ್ಲಿ ಘೋರ ದುರಂತ: ಜೋಕಾಲಿ ಕುತ್ತಿಗೆಗೆ ಬಿಗಿದು 9 ವರ್ಷದ ಬಾಲಕಿ ಸಾವು

Share. Facebook Twitter LinkedIn WhatsApp Email

Related Posts

BREAKING : ಜಿ.ಪರಮೇಶ್ವರ್ ಗೆ ‘KPCC’ ಅಧ್ಯಕ್ಷ ಸ್ಥಾನ, ಸ್ಪೀಕರ್ ಸ್ಥಾನದ ಆಫರ್ ನೀಡಿದ ಹೈಕಮಾಂಡ್!

2 Mins Read

ALERT : ಸಾರ್ವಜನಿಕರೇ ಎಚ್ಚರ :ಔಷಧಿ ಬಳಸುವಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ!

2 Mins Read

IPL Final | ಚಾಂಪಿಯನ್‌, ರನ್ನರ್‌ಅಪ್‌ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು? : ಇಲ್ಲಿದೆ ಸಂಪೂರ್ಣ ಮಾಹಿತಿ!

2 Mins Read
Recent News

BIG NEWS : ಕ್ರಿಮಿನಲ್ ಪ್ರಕರಣದಿಂದ ನೌಕರರು ಖುಲಾಸೆಯಾದರೂ ಬಾಕಿ ವೇತನದ ಹಕ್ಕಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

BREAKING : ಜಿ.ಪರಮೇಶ್ವರ್ ಗೆ ‘KPCC’ ಅಧ್ಯಕ್ಷ ಸ್ಥಾನ, ಸ್ಪೀಕರ್ ಸ್ಥಾನದ ಆಫರ್ ನೀಡಿದ ಹೈಕಮಾಂಡ್!

ALERT : ಸಾರ್ವಜನಿಕರೇ ಎಚ್ಚರ :ಔಷಧಿ ಬಳಸುವಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ!

ವಿಶ್ವದ ನಂ. 1 ಸ್ಥಾನಕ್ಕೇರಿದ ಭಾರತದ ಹೆಮ್ಮೆಯ ‘ಮಸಾಲ ಚಾಯ್’!

State News
KARNATAKA

BREAKING : ಜಿ.ಪರಮೇಶ್ವರ್ ಗೆ ‘KPCC’ ಅಧ್ಯಕ್ಷ ಸ್ಥಾನ, ಸ್ಪೀಕರ್ ಸ್ಥಾನದ ಆಫರ್ ನೀಡಿದ ಹೈಕಮಾಂಡ್!

By ಸುರೇಶ್‌ KARNATAKA 2 Mins Read

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಉಪಮುಖ್ಯಮಂತ್ರಿ (ಡಿಸಿಎಂ) ಹೆಚ್ಚುವರಿ ಹುದ್ದೆಗಳ ಸೃಷ್ಟಿ ಮತ್ತು ಹಂಚಿಕೆಯ ಕಗ್ಗಂಟು ದಿನದಿಂದ ದಿನಕ್ಕೆ ಜಟಿಲಗೊಳ್ಳುತ್ತಿದ್ದು, ಇದೀಗ…

ALERT : ಸಾರ್ವಜನಿಕರೇ ಎಚ್ಚರ :ಔಷಧಿ ಬಳಸುವಾಗ ಈ 3 ತಪ್ಪುಗಳನ್ನು ಎಂದಿಗೂ ಮಾಡಬೇಡಿ!

IPL Final | ಚಾಂಪಿಯನ್‌, ರನ್ನರ್‌ಅಪ್‌ ತಂಡಕ್ಕೆ ಸಿಗುವ ಬಹುಮಾನದ ಮೊತ್ತ ಎಷ್ಟು? : ಇಲ್ಲಿದೆ ಸಂಪೂರ್ಣ ಮಾಹಿತಿ!

ರಾಜ್ಯದ ವಿದ್ಯಾರ್ಥಿಗಳೇ ಗಮನಿಸಿ :ಉಚಿತ/ರಿಯಾಯಿತಿ ‘KSRTC’ ಬಸ್ ಪಾಸ್ ವಿತರಣೆ ಆರಂಭ

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.