ಬೆಂಗಳೂರು: ದಲಿತ ಸಮುದಾಯಗಳ ದಶಕಗಳ ಕಾಲದ ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಇಂದು ವಿಧಾನಸೌಧದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ, ಪರಿಶಿಷ್ಟ ಜಾತಿ ಒಳ ಮೀಸಲಾತಿ ಹಂಚಿಕೆಯ ಪ್ರಮಾಣವನ್ನು ಅಂತಿಮಗೊಳಿಸಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.
ಮೀಸಲಾತಿ ಹಂಚಿಕೆಯ ವಿವರ:
ಸಂಪುಟ ಸಭೆಯ ನಿರ್ಧಾರದಂತೆ ಒಟ್ಟು ಶೇ. 17 ರಷ್ಟು ಎಸ್‌ಸಿ ಮೀಸಲಾತಿಯನ್ನು ಈ ಕೆಳಗಿನಂತೆ ಹಂಚಿಕೆ ಮಾಡಲಾಗಿದೆ:
-
ದಲಿತ ಎಡಗೈ ಸಮುದಾಯ: ಶೇ. 5.25 ರಷ್ಟು ಮೀಸಲಾತಿ.
-
ದಲಿತ ಬಲಗೈ ಸಮುದಾಯ: ಶೇ. 5.25 ರಷ್ಟು ಮೀಸಲಾತಿ.
-
ಇತರ ಉಪಜಾತಿಗಳು (ಎಸ್‌ಸಿ ಅಸ್ಪೃಶ್ಯ ಹಾಗೂ ಇತರರು): ಶೇ. 4.5 ರಷ್ಟು ಮೀಸಲಾತಿ.
ಸಂಪುಟ ಸಭೆಯ ಮುಖ್ಯಾಂಶಗಳು:
ಇಂದು ವಿಧಾನಸೌಧದಲ್ಲಿ ನಡೆದ ಈ ವಿಶೇಷ ಸಭೆಯಲ್ಲಿ ಒಳ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ಸುದೀರ್ಘ ಚರ್ಚೆ ನಡೆಸಲಾಯಿತು. ಸುಪ್ರೀಂ ಕೋರ್ಟ್‌ನ ಇತ್ತೀಚಿನ ತೀರ್ಪಿನ ಹಿನ್ನೆಲೆಯಲ್ಲಿ, ರಾಜ್ಯದಲ್ಲಿ ಒಳ ಮೀಸಲಾತಿ ಜಾರಿಗೊಳಿಸಲು ಇದ್ದ ಅಡೆತಡೆಗಳು ನಿವಾರಣೆಯಾದ ಬೆನ್ನಲ್ಲೇ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಈ ನಿರ್ಧಾರದ ಮೂಲಕ ಸಾಮಾಜಿಕ ನ್ಯಾಯದ ಹಾದಿಯಲ್ಲಿ ಕಾಂಗ್ರೆಸ್ ಸರ್ಕಾರ ದೊಡ್ಡ ಹೆಜ್ಜೆ ಇರಿಸಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಮೀಸಲಾತಿ ಸೌಲಭ್ಯದಿಂದ ವಂಚಿತವಾಗಿದ್ದ ಅತಿ ಹಿಂದುಳಿದ ದಲಿತ ಸಮುದಾಯಗಳಿಗೆ ಈ ಹಂಚಿಕೆಯಿಂದ ಹೆಚ್ಚಿನ ಅನುಕೂಲವಾಗಲಿದೆ ಎನ್ನಲಾಗುತ್ತಿದೆ.
ಈ ಐತಿಹಾಸಿಕ ನಿರ್ಧಾರವು ರಾಜ್ಯ ರಾಜಕಾರಣದಲ್ಲಿ ಭಾರಿ ಬದಲಾವಣೆಗೆ ಕಾರಣವಾಗುವ ಸಾಧ್ಯತೆಯಿದ್ದು, ದಲಿತ ಸಂಘಟನೆಗಳು ಸರ್ಕಾರದ ಈ ನಡೆಯನ್ನು ಸ್ವಾಗತವೆಯೋ ಅಥವಾ ವಿರೋಧಿಸುತ್ತವೆಯೋ ಎಂಬುದನ್ನು ಕಾದು ನೋಡಬೇಕಿದೆ.
ಮಲೆನಾಡು ರೈತರ ತಾಳ್ಮೆ ಪರೀಕ್ಷಿಸಬೇಡಿ; ಅರಣ್ಯ ಇಲಾಖೆಗೆ ರೈತ ಹೋರಾಟ ವೇದಿಕೆ ತೀ.ನಾ ಶ್ರೀನಿವಾಸ್ ಎಚ್ಚರಿಕೆ
SHOCKING: ರಾಜ್ಯದಲ್ಲಿ ಘೋರ ದುರಂತ: ಜೋಕಾಲಿ ಕುತ್ತಿಗೆಗೆ ಬಿಗಿದು 9 ವರ್ಷದ ಬಾಲಕಿ ಸಾವು








