ಕಲಬುರ್ಗಿ: ಪಿಎಸ್ಐ ನೇಮಕಾತಿ ಅಕ್ರಮ ( PSI Recruitment Scam ) ಸಂಬಂಧ ಸಿಐಡಿ ಅಧಿಕಾರಿಗಳ ( CID Officer ) ಬೇಟೆ ಮುಂದುವರೆದಿದೆ. ಇಂದು ಮತ್ತೋರ್ವ ಆರೋಪಿಯನ್ನು ಬಂಧಿಸಲಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ ಮತ್ತಷ್ಟು ಹೆಚ್ಚಾದಂತೆ ಆಗಿದೆ.
ಕಲಬುರ್ಗಿ ಜಿಲ್ಲೆಯ ಅಳಂದ ತಾಲೂಕಿನ ಹಿರೋಳಿ ಗ್ರಾಮದಲ್ಲಿ ಪಿಎಸ್ಐ ನೇಮಕಾತಿ ಅಕ್ರಮ ಸಂಬಂಧ ಆರೋಪಿ ರಚನಾ ಎಂಬಾಕೆಯನ್ನು ಬಂಧಿಸಲಾಗಿದೆ. ಬಂಧಿತ ಆರೋಪಿ ರಚನಾ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಮಹಿಳಾ ಕೋಟಾದಲ್ಲಿ ಮೊದಲ Rank ಪಡೆದಿದ್ದರು.
BIG NEWS: ಅ.7 ರಿಂದ ಪ್ರೊ ಕಬಡ್ಡಿ ಲೀಗ್ನ 9ನೇ ಸೀಸನ್ ಆರಂಭ!| Pro Kabaddi Leag
ಪಿಎಸ್ಐ ನೇಮಕಾತಿ ಅಕ್ರಮ ಹೊರ ಬರುತ್ತಿದ್ದಂತೆ ರಚನಾ ಬೆಂಗಳೂರಿನ ಪ್ರೀಢಂ ಪಾರ್ಕ್ ನಲ್ಲಿ ನಡೆದಂತ ಪ್ರತಿಭಟನೆಯಲ್ಲಿಯೂ ಮುಂಚೂಣಿಯಲ್ಲಿ ನಿಂತು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ರಚನಾ ವಿರುದ್ಧ ಹೈಗ್ರೌಂಡ್ ಠಾಣೆಯಲ್ಲಿ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಳಿಕ ಆರೋಪಿ ರಚನಾ ನಾಪತ್ತೆಯಾಗಿ ಮಹಾರಾಷ್ಟ್ರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ತಲೆ ಮರೆಸಿಕೊಂಡಿದ್ದರು.
BIG NEWS: ಅ.7 ರಿಂದ ಪ್ರೊ ಕಬಡ್ಡಿ ಲೀಗ್ನ 9ನೇ ಸೀಸನ್ ಆರಂಭ!| Pro Kabaddi Leag
ರಚನಾ ಪತ್ತೆಯಾಗಿ ಬಲೆ ಬೀಸಿದ್ದಂತ ಸಿಐಡಿ ಅಧಿಕಾರಿಗಳು ಇದೀಗ ಕಲಬುರ್ಗಿಯ ಅಳಂದದ ಹಿರೋಳಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ಕಲಬುರ್ಗಿಯ 5ನೇ ಜೆಎಂಎಫ್ ಸಿ ಕೋರ್ಟ್ ಮುಂದೆ ಹಾಜರುಪಡಿಸಲಾಗಿದೆ. ಇಂದು ರಾತ್ರಿ ಬೆಂಗಳೂರಿಗೆ ಸಿಐಡಿ ಪೊಲೀಸರು ಆರೋಪಿ ರಚನಾ ಕರೆತರೋ ಸಾಧ್ಯತೆ ಇದೆ.
ಅಂದಹಾಗೇ ಪಿಎಸ್ಐ ನೇಮಕಾತಿ ಅಕ್ರಮದಲ್ಲಿ ಬಂಧನಕ್ಕೊಳಗಾಗಿರುವಂತ ಆರೋಪಿ ರಚನಾ ಮೂಲತಹ ವಿಜಯಪುರ ಜಿಲ್ಲೆಯ ಬಸವನಬಾಗೇವಾಡಿ ನಿವಾಸಿಯಾಗಿದ್ದಾರೆ.
BIGG NEWS : ‘Meesho’ ಉದ್ಯೋಗಿಗಳಿಗೆ ಬಿಗ್ ಶಾಕ್ ; ‘ದಿನಸಿ ವ್ಯಾಪಾರ’ ಸ್ಥಗಿತ, 300 ಮಂದಿ ಕೆಲಸದಿಂದ ವಜಾ