ಚಿತ್ರದುರ್ಗ: ವಿದ್ಯುತ್ ನಿರ್ವಹಣಾ ಕಾರ್ಯದ ಹಿನ್ನಲೆಯಲ್ಲಿ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕು ( Hiriyur Taluk ) ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ನಾಳೆ ವಿದ್ಯುತ್ ವ್ಯತ್ಯಯ ( Power Cut) ಉಂಟಾಗಲಿದೆ.
ಈ ಬಗ್ಗೆ ಬೆಸ್ಕಾಂ ( BESCOM ) ನಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ 18-10-2022ರಂದು 66/11ಕೆವಿ ವಿದ್ಯುತ್ ಉಪ ಕೇಂದ್ರದ ನಿರ್ವಹಣಾ ಕಾರ್ಯ ನಡೆಯಲಿದೆ. ಈ ಹಿನ್ನಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಕೆಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದಿದೆ.
ನಾಳೆ ಈ ಪ್ರದೇಶಗಳಲ್ಲಿ ಪವರ್ ಕಟ್
ಬೆಸ್ಕಾಂ ನೀಡಿರುವಂತ ಮಾಹಿತಿಯಂತೆ ನಾಳೆ ಹಿರಿಯೂರು ನಗರ, ಗ್ರಾಮೀಣ ಕೈಗಾರಿಕಾ ಪ್ರದೇಶಗಳಾದಂತ ಅಕ್ಷಯ ಪುಡ್ ಪಾರ್ಕ್, ಹಬೀಬ್ ಸಾಲ್ವೆಂಟ್, ನಂದಶ್ರೀ, ರಾಜಶ್ರೀ ಪುಡ್, ಪಿ.ಜಿ.ಸಿಎಲ್, ವಿವಿ ಕ್ರಾಸ್, ಲಕ್ಕವನಳ್ಳಿಯಲ್ಲಿ ಪವರ್ ಕಟ್ ಆಗಲಿದೆ.
BIG NEWS: ನ.11ರಂದು 108 ಅಡಿಯ ಕೆಂಪೇಗೌಡ ಪ್ರತಿಮೆ ಲೋಕಾರ್ಪಣೆ – ಸಚಿವ ಅಶ್ವತ್ಥನಾರಾಯಣ ಘೋಷಣೆ
ಇದಲ್ಲದೇ ದೊಡ್ಡಘಟ್ಟ, ಸಿಗೇಹಟ್ಟಿ, ಕೂನಿಕೆರೆ, ಬಬ್ಬೂರು, ತೋಟಗಾರಿಕಾ ವಿವಿ, ಆದಿವಾಲ, ಆದಿವಾಲ ಪಾರಂ, ಪಟ್ರೆಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಾಳೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಬೆಸ್ಕಾಂ ಮನವಿ ಮಾಡಿದೆ.