ನವದೆಹಲಿ: ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ( Chamarajpete Edga Maidana ) ಗಣೇಶೋತ್ಸವ ಆಚರಣೆಗೆ ( Ganesh Festival ) ಹೈಕೋರ್ಟ್ ನೀಡಿದಂತ ಆದೇಶವನ್ನು ಪ್ರಶ್ನಿಸಿ, ವಕ್ಫೋ ಬೋರ್ಡ್ ಸುಪ್ರೀಂ ಕೋರ್ಟ್ ಗೆ ( Supreme Court ) ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯ ವಿಚಾರಣೆಯನ್ನು ತ್ರಿಸದಸ್ಯ ನ್ಯಾಯಪೀಠದಲ್ಲಿ ವಿಚಾರಣೆ ನಡೆಸಿತು. ವಾದ-ಪ್ರತಿವಾದ ಆಲಿಸಿದಂತ ಸುಪ್ರೀಂ ಕೋರ್ಟ್ ನ್ಯಾಯಪೀಠವು ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿದೆ.
ಇಂದು ಸುಪ್ರೀಂ ಕೋರ್ಟ್ ನ ದ್ವಿಸದಸ್ಯ ನ್ಯಾಯಪೀಠದಲ್ಲಿ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ನೀಡಿದಂತ ಹೈಕೋರ್ಟ್ ಅನುಮತಿಯನ್ನು ಪ್ರಶ್ನಿಸಿದಂತ ಅರ್ಜಿಯ ವಿಚಾರಣೆ ನಡೆಸಲಾಯಿತು. ಈ ಬಳಿಕ ಮಧ್ಯಂತರ ಆದೇಶ ನೀಡೋದಕ್ಕೆ ನಿರಾಕರಿಸಿದಂತ ನ್ಯಾಯಪೀಠವು, ಸಿಐಜೆ ನೇತೃತ್ವದ ಪೀಠಕ್ಕೆ ವರ್ಗಾವಣೆ ಮಾಡಿತ್ತು.
BIGG NEWS : ಸಿಧು ಮೂಸ್ವಾಲಾ ಕೊಲೆ ಪ್ರಕರಣದ ಪ್ರಮುಖ ಆರೋಪಿ ‘ಅಜರ್ಬೈಜಾನ್ನಲ್ಲಿ ಪತ್ತೆ’ : ಪಂಜಾಬ್ ಡಿಜಿಪಿ
ಸುಪ್ರೀಂ ಕೋರ್ಟ್ ನ ಸಿಐಜೆ ನೇತೃತ್ವದ ನ್ಯಾಯಪೀಠಕ್ಕೆ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆ ಅರ್ಜಿ ವರ್ಗಾವಣೆಗೊಂಡ ನಂತ್ರ, ಒಂದೇ ಗಂಟೆಯಲ್ಲಿ ಮುಖ್ಯ ನ್ಯಾಯಮೂರ್ತಿಗಳು ತ್ರಿಸದಸ್ಯ ಪೀಠವನ್ನುರಚನೆ ಮಾಡಿದರು.
ನ್ಯಾಯಮೂರ್ತಿಗಳಾದಂತ ಇಂದಿರಾ ಬ್ಯಾನರ್ಜಿ, ಎಎಸ್ ಓಕಾ ಹಾಗೂ ಎಂ.ಎಂ ಸುಂದರೇಶ್ ಅವರ ತ್ರಿಸದಸ್ಯ ಪೀಠದ ಮುಂದೆ ಅರ್ಜಿಯ ವಿಚಾರಣೆ ಆರಂಭಗೊಂಡಿತು. ಸುಪ್ರೀಂ ಕೋರ್ಟ್ ನಂ.5ರಲ್ಲಿ ವಿಚಾರಣೆ ಆರಂಭಗೊಳ್ಳುತ್ತಿದ್ದಂತೇ, ವಕ್ಬೋ ಬೋರ್ಡ್ ಪರವಾಗಿ ಕಪಿಲ್ ಸಿಬಲ್ ವಾದ ಮಂಡಿಸಿದರು. ಈದ್ಗಾ ಮೈದಾನವು ವಕ್ಫ್ ಬೋರ್ಡ್ ಆಸ್ತಿ ಎಂಬುದಾಗಿ ವಾದಿಸಿದರು.
ಪ್ರತಿವಾದವನ್ನು ಸರ್ಕಾರದ ಪರವಾಗಿ ಮಂಡಿಸಿದಂತ ಮುಕುಲ್ ರೋಹಟಗಿಯವರು 1987ರಿಂದಲೂ ಈದ್ಗಾ ಮೈದಾನವನ್ನು ಪಹಣಿಯಲ್ಲಿ ಸರ್ಕಾರಿ ಆಸ್ತಿ ಎಂದು ಉಲ್ಲೇಖಿಸಲಾಗಿದೆ. ಕಂದಾಯ, ಬಿಬಿಎಂಪಿ ದಾಖಲೆಗಳಲ್ಲಿ ಆಟದ ಮೈದಾನವೆಂದು ಉಲ್ಲೇಖಿಸಲಾಗಿದೆ. ಮೈದಾನ ಸರ್ಕಾರಿ ಭೂಮಿ ಎಂದು ಗುರುತಿಸಲಾಗಿದೆ. ಬಿಬಿಎಂಪಿ ಗಣೇಶೋತ್ಸವಕ್ಕೆ ಅವಕಾಶ ಕೊಟ್ಟಿರೋದಲ್ಲ. ರಾಜ್ಯ ಸರ್ಕಾರದಿಂದ ಅನುಮತಿ ನೀಡಲಾಗಿದೆ. ಈದ್ಗಾ ಮೈದಾನ ಮುಚ್ಚಿಲ್ಲ. ಅಲ್ಲಿ ಪ್ರಾರ್ಥನೆಗೂ ಅವಕಾಶ ನೀಡಲಾಗುತ್ತಿದೆ ಎಂದು ವಾದ ಮಂಡಿಸಿದರು.
ಈ ಬಳಿಕ ಸುಪ್ರೀಂ ಕೋರ್ಟ್ ನ್ಯಾಯಪೀಠವು, ಚಾಮರಾಜಪೇಟೆಯ ಈದ್ಗಾ ಮೈದಾನಕ್ಕೆ ಯಾರೂ ಮಾಲೀಕರು ಇಲ್ಲದಿದ್ದರೇ ರಾಜ್ಯ ಸರ್ಕಾರವೇ ಮಾಲೀಕ ಎಂದು ಅಭಿಪ್ರಾಯ ಪಟ್ಟಿತು. ಈದ್ಗಾ ಮತ್ತು ಸಮಾಧಿಯನ್ನು ಮಧ್ಯಂತರದಲ್ಲಿ ಬಳಸಲಾಗುತ್ತದೆ. ಬಿಬಿಎಂಪಿ ಪರವಾಗಿಯೂ ಮಾಲೀಕತ್ವ ಇಲ್ಲ. ಮುಸ್ಲೀಂ ಪರವಾಗಿಯೂ ಮಾಲೀಕತ್ವ ಇಲ್ಲವೆಂದು ಅಭಿಪ್ರಾಯ ಪಟ್ಟು, ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತು. ಹೀಗಾಗೀ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ಆಚರಣೆಗೆ ಅವಕಾಶ ಇಲ್ಲದಂತೆ ಆಗಿದೆ.