ಶಿವಮೊಗ್ಗ: ಕನ್ನಡ ಸೇನೆಯ ಜಿಲ್ಲಾಧ್ಯಕ್ಷರು, ಸಾಗರ ನಗರಸಭೆಯ ಮಾಜಿ ಸದಸ್ಯರು ಹಾಗೂ ಖ್ಯಾತ ಉದ್ಯಮಿಯಾದ ಟಿಪ್ ಟಾಪ್ ಬಷೀರ್ ಅವರ ಹುಟ್ಟಿದ ಹಬ್ಬದ ಪ್ರಯುಕ್ತ ಸಾಗರದ ಉಪವಿಭಾಗೀಯ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.
ಟಿಪ್ ಟಾಪ್ ಬಷೀರ್ ಅವರ ಜನ್ಮದಿನದ ಅಂಗವಾಗಿ ಅವರ ಅಭಿಮಾನಿ ಬಳಗದ ವತಿಯಿಂದ ಆಸ್ಪತ್ರೆಯ ಒಳ ರೋಗಿಗಳನ್ನು ಭೇಟಿ ಮಾಡಿ, ಆರೋಗ್ಯ ವಿಚಾರಿಸಿ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಜನ್ಮದಿನವನ್ನು ಆಚರಿಸಲಾಯಿತು.

ಈ ಮಾನವೀಯ ಕಾರ್ಯಕ್ರಮದ ಸಂದರ್ಭದಲ್ಲಿ ಪ್ರಮುಖರಾದ ಮೊಹಮ್ಮದ್ ಅಬ್ಬಾಸ್, ಇರ್ಫಾನ್, ಮನ್ಸೂರ್, ಜಮೀನ್ ಸಾಗರ್, ಅರ್ಬಾಜ್, ರಿಯಾನ್, ತೌಫಿಕ್, ಶಹಬಾಜ್ ಸೇರಿದಂತೆ ಟಿಪ್ ಟಾಪ್ ಬಷೀರ್ ಅವರ ಅಭಿಮಾನಿ ಬಳಗದ ಹಲವು ಮುಖಂಡರು ಹಾಗೂ ಇತರರು ಉಪಸ್ಥಿತರಿದ್ದರು.
ರಾಜ್ಯದಲ್ಲೊಂದು ಅಚ್ಚರಿಯ ಘಟನೆ; ಸಾಯುವ ಸ್ಥಿತಿಯಲ್ಲಿದ್ದ ಗರ್ಭಿಣಿ ಎಮ್ಮೆಯನ್ನು ಬದುಕಿಸಿದ ಪಶು ವೈದ್ಯ!








