ಗುರುದಾಸ್ಪುರ (ಪಂಜಾಬ್) : ಪಂಜಾಬ್ನ ಗುರುದಾಸ್ಪುರ ಸೆಕ್ಟರ್ನಲ್ಲಿ ಭಾರತವನ್ನು ಪ್ರವೇಶಿಸಿದ ಪಾಕಿಸ್ತಾನದ ಡ್ರೋನ್ ಅನ್ನು ಗಡಿ ಭದ್ರತಾ ಪಡೆ (ಬಿಎಸ್ಎಫ್) ಗಳು ಇಂದು ಮುಂಜಾನೆ ಹೊಡೆದುರುಳಿಸಿವೆ ಎಂದು ವರದಿಯಾಗಿದೆ.
ಗಸ್ತು ಕರ್ತವ್ಯದಲ್ಲಿದ್ದ ಬಿಎಸ್ಎಫ್ ಪಡೆಗಳು ಮುಂಜಾನೆ 4.35 ಕ್ಕೆ ಡ್ರೋನ್ ಅನ್ನು ಗುರುತಿಸಿದ್ದು, ತಕ್ಷಣವೇ ಅದರತ್ತ 17 ಸುತ್ತು ಗುಂಡು ಹಾರಿಸಿ ಹೊಡೆದುರುಳಿಸಿವೆ ಎಂದು ಹಿರಿಯ ಬಿಎಸ್ಎಫ್ ಅಧಿಕಾರಿ ತಿಳಿಸಿದ್ದಾರೆ.
BSF troops shot down a drone that entered India from Pakistan’s side along International Border at 4.35 am in Gurdaspur sector, Punjab. A massive search operation is launched in the entire area: Senior BSF official
— ANI (@ANI) October 14, 2022
ಡ್ರೋನ್ನಲ್ಲಿ ಪಾಕಿಸ್ತಾನದಿಂದ ಸರಕು ಸಾಗಣೆಯಾಗುತ್ತಿರುವ ಶಂಕೆ ವ್ಯಕ್ತವಾಗಿದೆ. ಈ ಪ್ರದೇಶದಲ್ಲಿ ಡ್ರೋನ್ ಯಾವುದೇ ಸರಕುಗಳನ್ನು ಬೀಳಿಸಿದೆಯೇ ಎಂದು ನಿರ್ಧರಿಸಲು ಪ್ರದೇಶದಲ್ಲಿ ಬೃಹತ್ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಬಿಎಸ್ಎಫ್ ಡಿಐಜಿ ನೇತೃತ್ವದಲ್ಲಿ ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
BIG NEWS: ʻ5Gಯನ್ನು ನಾವು ಆಮದು ಮಾಡಿಕೊಂಡಿಲ್ಲ, ಇದು ನಮ್ಮ ದೇಶದ ಉತ್ಪನ್ನʼ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್
BREAKING NEWS: ಛತ್ತೀಸ್ಗಢದ ಅಂಬಿಕಾಪುರದಲ್ಲಿ ಭೂಕಂಪ: 4.8 ತೀವ್ರತೆ ದಾಖಲು | earthquake in Chhattisgarh