Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಹೀಟ್ ಸ್ಟ್ರೋಕ್ ನಿಂದ ಬರುವವರಿಗೆ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಮೀಸಲಿಡಲಾಗಿದೆ : ದಿನೇಶ್ ಗುಂಡೂರಾವ್

27/04/2026 11:07 AM

BREAKING : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರಿ ಭದ್ರತಾ ಲೋಪ : RCB-GT ಪಂದ್ಯ ವೇಳೆ, 240 ಸಿಸಿಟಿವಿ ಕೇಬಲ್‌ ಕಟ್‌!

27/04/2026 10:40 AM

ಹರಿಹರ ಪಂಚಮಸಾಲಿ ಟ್ರಸ್ಟ್ ನಲ್ಲಿ ಭಾರಿ ಗೋಲ್ಮಾಲ್ : ನಕಲಿ ಸಹಿ ಮಾಡಿ ಸರ್ಕಾರದಿಂದ 10 ಕೋಟಿ ಅನುದಾನ ಪಡೆದ ಆರೋಪ!

27/04/2026 10:33 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರಿ ಭದ್ರತಾ ಲೋಪ : RCB-GT ಪಂದ್ಯ ವೇಳೆ, 240 ಸಿಸಿಟಿವಿ ಕೇಬಲ್‌ ಕಟ್‌!
KARNATAKA

BREAKING : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರಿ ಭದ್ರತಾ ಲೋಪ : RCB-GT ಪಂದ್ಯ ವೇಳೆ, 240 ಸಿಸಿಟಿವಿ ಕೇಬಲ್‌ ಕಟ್‌!

By kannadanewsnow0527/04/2026 10:40 AM

ಬೆಂಗಳೂರು : ಮೊನ್ನೆ ಬೆಂಗಳೂರಲ್ಲಿ ನಗರದ ಪ್ರತಿಷ್ಠಿತ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾರೀ ವಿಧ್ವಂಸಕ ಕೃತ್ಯ ಎಸಗಿರುವ ಆತಂಕಕಾರಿ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಐಪಿಎಲ್ ಪಂದ್ಯ ನಡೆಯುವ ದಿನದಂದೇ ಕ್ರೀಡಾಂಗಣದ ಪ್ರಮುಖ ಭದ್ರತಾ ವ್ಯವಸ್ಥೆಯಾದ ಸಿಸಿಟಿವಿ ಕ್ಯಾಮೆರಾಗಳ ಕೇಬಲ್‌ಗಳನ್ನು ಕತ್ತರಿಸಿ, ಇಡೀ ಭದ್ರತಾ ಜಾಲವನ್ನೇ ಅಸ್ತವ್ಯಸ್ತಗೊಳಿಸಲು ಯತ್ನಿಸಲಾಗಿದೆ.

ಹೌದು ಏಪ್ರಿಲ್ 24 ರಂದು ಕ್ರೀಡಾಂಗಣದಲ್ಲಿ ರಾಯಲ್‌ ಚಾಲೆಂಜರ್ಸ್‌ (RCB) ಮತ್ತು ಗುಜರಾತ್‌ ಟೈಟಾನ್ಸ್‌ (GT)ತಂಡಗಳ ಮಧ್ಯೆ ಐಪಿಎಲ್ ಪಂದ್ಯ ಆಯೋಜನೆಯಾಗಿತ್ತು. ಪಂದ್ಯ ನಡೆಯುವ ದಿನದಂದು ಬೆಳಿಗ್ಗೆ ಕ್ರೀಡಾಂಗಣದ ತಾಂತ್ರಿಕ ತಂಡವು ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಬರೋಬ್ಬರಿ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು ಆಫ್‌ಲೈನ್ ಆಗಿರುವುದು ಪತ್ತೆಯಾಗಿದೆ.

ಕ್ಯಾಮೆರಾಗಳು ಏಕಾಏಕಿ ಬಂದ್ ಆಗಿದ್ದರಿಂದ ತಾಂತ್ರಿಕ ತಂಡವು ತಕ್ಷಣವೇ ಕೂಲಂಕಷವಾಗಿ ತನಿಖೆ ನಡೆಸಿದೆ. ಈ ವೇಳೆ ಐವಿಎಸ್ ಡಿಜಿಟಲ್ ಸೊಲ್ಯೂಷನ್ಸ್ ಎಂಬ ಉಪ-ವಿತರಕ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದ ಮಂಜುನಾಥ್ ಇ. ಮತ್ತು ಅಬ್ದುಲ್ ಕಲಾಂ ಈ ವಿಧ್ವಂಸಕ ಕೃತ್ಯದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಈ ಇಬ್ಬರು ಆರೋಪಿಗಳು ಕ್ರೀಡಾಂಗಣವನ್ನು ಪ್ರವೇಶಿಸಲು ಅಗತ್ಯವಾದ ಮಾನ್ಯ ಪಾಸ್‌ಗಳನ್ನು ಹೊಂದಿರಲಿಲ್ಲ.

ಕ್ರೀಡಾಂಗಣವನ್ನು ಪ್ರವೇಶಿಸಿದ ಆರೋಪಿಗಳು, ಎನ್‌ವಿಆರ್ (NVR) ಮತ್ತು ಆಪ್ಟಿಕಲ್ ಫೈಬರ್ ಸಂಪರ್ಕಗಳನ್ನು ಉದ್ದೇಶಪೂರ್ವಕವಾಗಿ ತಪ್ಪು ತಪ್ಪಾಗಿ ನಿರ್ವಹಿಸಿ ಅವುಗಳನ್ನು ಕತ್ತರಿಸಿ ಹಾನಿಗೊಳಿಸಿದ್ದಾರೆ. ಇದರಿಂದಾಗಿ ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಂಡಿತ್ತು. ಆದರೂ ಇಬ್ಬರು ಬೆಳಿಗ್ಗೆ 11:30ರ ಸುಮಾರಿಗೆ ನಿಷ್ಕ್ರಿಯಗೊಂಡ ಹಳೆಯ ಕಾರ್ಡ್ ಬಳಸಿಕೊಂಡು ಕ್ರೀಡಾಂಗಣವನ್ನು ಅನಧಿಕೃತವಾಗಿ ಪ್ರವೇಶಿಸಿದ್ದರು.

ಆರೋಪಿಗಳು ಎಸಗಿದ ವಿಧ್ವಂಸಕ ಕೃತ್ಯದಿಂದಾಗಿ ಕ್ರೀಡಾಂಗಣದ ಅತ್ಯಂತ ಪ್ರಮುಖ ಭದ್ರತಾ ಪ್ರದೇಶಗಳಲ್ಲಿನ ಸಿಸಿಟಿವಿ ಕ್ಯಾಮೆರಾಗಳು ಸ್ಥಗಿತಗೊಂಡಿದ್ದವು.  ಅವುಗಳಲ್ಲಿ ಪ್ರಮುಖವಾಗಿ ಎಲ್ಲಾ ಪ್ರವೇಶ ದ್ವಾರಗಳು, ಕ್ರೀಡಾಂಗಣದ ಸುತ್ತಮುತ್ತಲಿನ ಕ್ಯಾಮೆರಾಗಳು, ಕಾರ್ಪೊರೇಟ್‌ ಸ್ಟ್ಯಾಂಡ್‌ ಕ್ಯಾಮೆರಾ ಬಂದ್‌ ಆಗಿತ್ತು. ಈ ಪ್ರಮುಖ ಸ್ಥಳಗಳ ಕ್ಯಾಮೆರಾಗಳು ಬಂದ್ ಆಗಿದ್ದರಿಂದ ಪಂದ್ಯದ ಸಂದರ್ಭದಲ್ಲಿ ಭದ್ರತಾ ಮೇಲ್ವಿಚಾರಣೆ ನಡೆಸಲು ಪೊಲೀಸರಿಗೆ ಅಗತ್ಯವಾದ ದತ್ತಾಂಶ ಅಥವಾ ಫೀಡ್‌ಗಳನ್ನು ಒದಗಿಸಲು ದೂರುದಾರರಿಗೆ ಸಾಧ್ಯವಾಗಲಿಲ್ಲ.

Share. Facebook Twitter LinkedIn WhatsApp Email

Related Posts

ಹೀಟ್ ಸ್ಟ್ರೋಕ್ ನಿಂದ ಬರುವವರಿಗೆ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಮೀಸಲಿಡಲಾಗಿದೆ : ದಿನೇಶ್ ಗುಂಡೂರಾವ್

27/04/2026 11:07 AM1 Min Read

ಹರಿಹರ ಪಂಚಮಸಾಲಿ ಟ್ರಸ್ಟ್ ನಲ್ಲಿ ಭಾರಿ ಗೋಲ್ಮಾಲ್ : ನಕಲಿ ಸಹಿ ಮಾಡಿ ಸರ್ಕಾರದಿಂದ 10 ಕೋಟಿ ಅನುದಾನ ಪಡೆದ ಆರೋಪ!

27/04/2026 10:33 AM1 Min Read

BREAKING : ಬೆಂಗಳೂರಲ್ಲಿ ಕೃಷಿಹೊಂಡದಲ್ಲಿ ಬಿದ್ದು ತಾಯಿ-ಮಗಳು ಸಾವು : ಪತಿ ವಿರುದ್ಧ ದೂರು ದಾಖಲು!

27/04/2026 10:29 AM1 Min Read
Recent News

ಹೀಟ್ ಸ್ಟ್ರೋಕ್ ನಿಂದ ಬರುವವರಿಗೆ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಮೀಸಲಿಡಲಾಗಿದೆ : ದಿನೇಶ್ ಗುಂಡೂರಾವ್

27/04/2026 11:07 AM

BREAKING : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರಿ ಭದ್ರತಾ ಲೋಪ : RCB-GT ಪಂದ್ಯ ವೇಳೆ, 240 ಸಿಸಿಟಿವಿ ಕೇಬಲ್‌ ಕಟ್‌!

27/04/2026 10:40 AM

ಹರಿಹರ ಪಂಚಮಸಾಲಿ ಟ್ರಸ್ಟ್ ನಲ್ಲಿ ಭಾರಿ ಗೋಲ್ಮಾಲ್ : ನಕಲಿ ಸಹಿ ಮಾಡಿ ಸರ್ಕಾರದಿಂದ 10 ಕೋಟಿ ಅನುದಾನ ಪಡೆದ ಆರೋಪ!

27/04/2026 10:33 AM

BREAKING : ಬೆಂಗಳೂರಲ್ಲಿ ಕೃಷಿಹೊಂಡದಲ್ಲಿ ಬಿದ್ದು ತಾಯಿ-ಮಗಳು ಸಾವು : ಪತಿ ವಿರುದ್ಧ ದೂರು ದಾಖಲು!

27/04/2026 10:29 AM
State News
KARNATAKA

ಹೀಟ್ ಸ್ಟ್ರೋಕ್ ನಿಂದ ಬರುವವರಿಗೆ ರಾಜ್ಯದ ಎಲ್ಲಾ ಆಸ್ಪತ್ರೆಗಳಲ್ಲಿ ಬೆಡ್‌ಗಳನ್ನು ಮೀಸಲಿಡಲಾಗಿದೆ : ದಿನೇಶ್ ಗುಂಡೂರಾವ್

By kannadanewsnow0527/04/2026 11:07 AM KARNATAKA 1 Min Read

ಮಂಗಳೂರು : ರಾಜ್ಯದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು, ಬೇಸಿಗೆ ಹಿನ್ನಲೆಯಲ್ಲಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಹೀಗಾಗಿ ಎಲ್ಲಾ ಕಡೆಗೂ…

BREAKING : ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಭಾರಿ ಭದ್ರತಾ ಲೋಪ : RCB-GT ಪಂದ್ಯ ವೇಳೆ, 240 ಸಿಸಿಟಿವಿ ಕೇಬಲ್‌ ಕಟ್‌!

27/04/2026 10:40 AM

ಹರಿಹರ ಪಂಚಮಸಾಲಿ ಟ್ರಸ್ಟ್ ನಲ್ಲಿ ಭಾರಿ ಗೋಲ್ಮಾಲ್ : ನಕಲಿ ಸಹಿ ಮಾಡಿ ಸರ್ಕಾರದಿಂದ 10 ಕೋಟಿ ಅನುದಾನ ಪಡೆದ ಆರೋಪ!

27/04/2026 10:33 AM

BREAKING : ಬೆಂಗಳೂರಲ್ಲಿ ಕೃಷಿಹೊಂಡದಲ್ಲಿ ಬಿದ್ದು ತಾಯಿ-ಮಗಳು ಸಾವು : ಪತಿ ವಿರುದ್ಧ ದೂರು ದಾಖಲು!

27/04/2026 10:29 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.