ನವದೆಹಲಿ : ಇರಾನ್ ಅಮೇರಿಕಾ ಯುದ್ಧದ ನಡುವೆಯೂ ಇಂದು ಮತ್ತೆ ಅಮೆರಿಕ ಮತ್ತು ಇರಾನ್ ನಡುವೆ ಪಾಕಿಸ್ತಾನದಲ್ಲಿ ಎರಡನೇ ಹಂತದ ಸಂಧಾನ ಮಾತುಕತೆ ನಡೆಯಲಿದೆ. ಇದೇ ಸಂದರ್ಭದಲ್ಲಿ ಅಮೆರಿಕಾ ಮೂಲದ ಎರಡು ಹಡುಗುಗಳನ್ನು ಇರಾನ್ ವಶಕ್ಕೆ ಪಡೆದುಕೊಂಡಿದೆ ಎಂದು ಬಲಮೂಲಗಳಿಂದ ತಿಳಿದು ಬಂದಿದೆ. ಹೌದು ಕಚ್ಚಾ ತೈಲ ಹೊತ್ತು ಸಾಗುತ್ತಿದ್ದ ಅಮೇರಿಕಾದ ಎರಡು ಹಡಗುಗಳನ್ನು IRGC ವಶಕ್ಕೆ ಪಡೆದುಕೊಂಡಿದೆ. ಅಮೆರಿಕಕ್ಕೆ ಸೇರಿದೆ ಎನ್ನಲಾದ ಎರಡು ಹಡಗುಗಳನ್ನು ಇದೀಗ ಸೀಜ್ ಮಾಡಿದೆ.
ಇನ್ನು ಇದರ ನಡುವೆ ಇಂದು ಅಮೆರಿಕ ಇರಾನ್ ನಡುವೆ ಎರಡನೇ ಹಂತದ ಸಂಧಾನ ನಡೆಯಲಿದೆ ನಾವು ಪಾಕಿಸ್ತಾನ ಮೆಜೆಸ್ಟಿಕ್ ಸಂಧಾನ ಸಭೆಯಲ್ಲಿ ಭಾಗಿಯಾಗುತ್ತೇವೆ ಆದರೆ ಅಮೇರಿಕಾ ಜೊತೆಗೆ ನೇರ ಮಾತುಕತೆ ಇಲ್ಲ ಎಂದು ಇರಾನ್ ನೇರವಾಗಿ ಹೇಳಿದೆ ಅಮೆರಿಕದ ನಾಯಕನ ಜೊತೆ ಮುಖಾಮುಖಿಯಾಗಿ ನಾವು ಚರ್ಚೆ ಮಾಡಲ್ಲ ಪಾಕಿಸ್ತಾನ ನಾಯಕರ ಜೊತೆ ಮುಖಾಮುಖಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದೆ.
ನಮ್ಮ ಅಭಿಪ್ರಾಯವನ್ನು ಪಾಕಿಸ್ತಾನ ನಾಯಕರಿಗೆ ತಿಳಿಸುತ್ತೇವೆ ಎಂದು ಇರಾನ್ ಹೇಳಿದೆ. ಪಾಕಿಸ್ತಾನಾಯಕರ ಮೂಲಕ ಅಮೆರಿಕಕ್ಕೆ ನಮ್ಮ ಅಭಿಪ್ರಾಯ ತಿಳಿಸುತ್ತೇವೆ ಎಂದಿದೆ. ಪಾಕಿಸ್ತಾನ ಮತ್ತು ಸ್ಥಿತಿಯಲ್ಲಿ ನಡೆಯುವ ಎರಡು ದೇಶಗಳ ಸಂಧಾನ ಸಭೆ ತೀವ್ರ ಮಹತ್ವ ಪಡೆದುಕೊಂಡಿದೆ ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ಈ ಒಂದು ಸಂಧಾನ ಸಭೆ ನಡೆಯಲಿದೆ.








