ಬೆಂಗಳೂರು : ಬೆಂಗಳೂರಲ್ಲಿ ಆಸ್ತಿ ವಿವಾದ ಹಿನ್ನಲೆಯಲ್ಲಿ ಕುಟುಂಬ ಸಮೇತ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನಿಸಿರುವ ಘಟನೆ ವರದಿಯಾಗಿದೆ.ಸ್ವಲ್ಪ ಎಚ್ಚರ ತಪ್ಪಿದ್ರೂ ಕುಟುಂಬ ಸಮೇತ ಮನೆ ಸುಡಲು ಯತ್ನಿಸಲಾಗಿದೆ.
ಬೆಂಗಳೂರಿನ ಜಯನಗರದ ಭೈರಸಂದ್ರದಲ್ಲಿ ಸೋದರಿಯಿಂದ ಕೃತ್ಯ ನಡೆದಿದೆ. ಮನೆಯ ಕಿಟಕಿ ಬಾಗಿಲು ಮುರಿದು ಒಳಗೆ ನುಗ್ಗುಲು ಪ್ರಯತ್ನಿಸಲಾಗಿದೆ. ಅಲ್ಲದೇ ಮಚ್ಚು ದೊಣ್ಣೆಗಳಿಂದ ಹಲ್ಲೆ ನಡೆಸಿ ಜೀವಂತ ಸುಡುವುದಾಗಿ ಧಮ್ಕಿ ಹಾಕಲಾಗಿದೆ. ಮನೆಗೆ ಅಳವಡಿಸಿದ್ದ ಸಿಸಿ ಕ್ಯಾಮರಾ ಒಡೆದು ಹಾಕಿ ದಬ್ಬಾಳಿಕೆ ಮಾಡಲಾಗಿದೆ.
ಉಮೇಶ್ ಎನ್ನುವವರ ಸೋದರಿ ಮೀನಾಕ್ಷಿ, ಪತಿ ಹಾಗು ಮಕ್ಕಳಿಂದ ಬೆಂಕಿ ಹಚ್ಚಲು ಯತ್ನಿಸಲಾಗಿದೆ. ಜೀವ ಭಯದಿಂದ 112ಕ್ಕೆ ಕರೆ ಮಾಡಿದ್ದ ಉಮೇಶ್ ಪತ್ನಿ ಅಶ್ವಿನಿ ಕೂಡಲೇ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.ಗಲಾಟೆ ಮಾಡುತ್ತಿದ್ದವರನ್ನ ಕಳುಹಿಸಿದ್ದಾರೆ. ಈ ಬಗ್ಗೆ ಉಮೇಶ್ ಪತ್ನಿ ಸಿದ್ದಾಪುರ ಠಾಣೆಗೆ ದೂರು ನೀಡಿದ್ದಾರೆ.








