ಬೆಂಗಳೂರು : ಡಾಕ್ಟರ್ ರಾಜಕುಮಾರ್ ಸಮಾಧಿ ಸ್ಥಳದ ಬಗ್ಗೆ ನಟ ಚೇತನ್ ಅಹಿಂಸ ಆಕ್ಷೇಪ ವಿಚಾರವಾಗಿ, ನಿನ್ನೆ ಕ್ಷಮೆ ಕೇಳಿ ಇಂದು ನಟ ಚೇತನ ಅಹಿಂಸಾ ಉಲ್ಟಾ ಹೊಡೆದಿದ್ದಾರೆ. ಇಂದು ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಚೇತನ್, ನನ್ನ ಮಾತಿನ ಮೇಲೆ ನಾನು ಇಂದು ಕೂಡ ನಿಲ್ಲುತ್ತೇನೆ ಎಂದು ಹೇಳಿಕೆ ನೀಡುವ ಮೂಲಕ ನಿನ್ನೆ ಕ್ಷಮೆ ಕೇಳಿ ಇಂದು ಮತ್ತೆ ತಮ್ಮ ಹೇಳಿಕೆಗೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ಚೇತನ್ ಅಹಿಂಸಾ ನಿನ್ನೆ ನನ್ನ ಬಗ್ಗೆ ಸಾರಾ ಗೋವಿಂದು ಬಳಸಿದ ಪದಗಳು ಸರಿಯಲ್ಲ. ಇಲ್ಲಿ ಸೇರಿರುವ ನಾವೆಲ್ಲರೂ ಡಾಕ್ಟರ್ ರಾಜಕುಮಾರ್ ಅಭಿಮಾನಿಗಳೆ. ನಿನ್ನೆ ಸಾರಾ ಗೋವಿಂದು ಮಹಿಳಾ ನಿಂದನೆ ಮಾಡಿದ್ದಾರೆ. ನಿನ್ನೆ ಗುಂಡಾಗಿರಿ ಮಾಡುವುದಕ್ಕೆ ಆ ವ್ಯಕ್ತಿಗಳು ಬಂದಿದ್ದರು ಎಂದು ಸಾರಾ ಗೋವಿಂದ ವಿರುದ್ಧ ನಟ ಚೇತನ್ ವಾಗ್ದಾಳಿ ನಡೆಸಿದರು
ನಾನು ಡಾಕ್ಟರ್ ರಾಜಕುಮಾರ್ ಅವರನ್ನು ಟಾರ್ಗೆಟ್ ಮಾಡಿ ಮಾತನಾಡಿಲ್ಲ. ವರನಟ ರಾಜಕುಮಾರ್ ಅವರಿಂದಲೇ ಹೋರಾಟ ಮಾಡುವುದನ್ನು ಕಲಿತಿದ್ದೇನೆ. ಪ್ರತಿಯೊಬ್ಬರು ಅವರವರ ಅಭಿಪ್ರಾಯವನ್ನು ವ್ಯಕ್ತಪಡಿಸಲಿ. ನಿನ್ನೆ ನನ್ನ ಮನೆಯ ಬಳಿ ಬಂದು ಹೆದರಿಸಿದ್ದಾರೆ, ಧಮ್ಕಿ ಹಾಕಿದ್ದಾರೆ.
ಸೌಜನ್ಯದಿಂದ ಮಾತನಾಡಿದರೆ ಒಪ್ಪುತ್ತೇನೆ ಆದರೆ ಧಮ್ಕಿ ಹಾಕಿದ್ರೆ ನಾನು ಒಪ್ಪಲ್ಲ. ಕಾನೂನನ್ನು ಕೈಗೆ ತೆಗೆದುಕೊಳ್ಳಬೇಕು ಅನ್ನುವುದನ್ನು ಒಪ್ಪುವುದಿಲ್ಲ ಮುಂದಿನ ದಿನಗಳಲ್ಲಿ ನಾವು ಕಾನೂನು ಹೋರಾಟ ಮಾಡುತ್ತೇವೆ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಅಂದಿದ್ದು, ನನ್ನ ಪೋಸ್ಟ್ ಅನ್ನು ಸಮರ್ಥಿಸಿಕೊಳ್ಳುತ್ತೇನೆ ಅದರಲ್ಲಿ ವಿಚಾರ ಇದೆ ಎಂದು ಮತ್ತೆ ತಮ್ಮ ಹೇಳಿಕೆಯನು ಸಮರ್ಥಿಸಿಕೊಂಡಿದ್ದಾರೆ.








