ಬೆಂಗಳೂರು : ಬೈಕ್ ಅಪಘಾತದಲ್ಲಿ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸಾವನಪ್ಪಿರುವ ಘಟನೆ ಬೆಂಗಳೂರಿನ ಕೆಂಗೇರಿಯ ಆರ್ ಆರ್ ಡೆಂಟಲ್ ಕಾಲೇಜಿನ ಬಳಿ ಈ ಒಂದು ಅಪಘಾತ ಸಂಭವಿಸಿದೆ. ಕಾಲೇಜು ಬಳಿ ಡಿವೈಡರ್ಗೆ ಡಿಕ್ಕಿಯಾದ ಬೈಕ್ ನಲ್ಲಿ ಇದ್ದಂತಹ ಅತುಲ್ ಹಾಗೂ ಗೌರಿಶಂಕರ್ ಸಾವನಪ್ಪಿದ್ದಾರೆ.
ಮೈಸೂರು ನಿಂದ ಇಬ್ಬರು ಬೆಂಗಳೂರು ಕಡೆಗೆ ಬರುತ್ತಿದ್ದರು. ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಇಬ್ಬರು ಬರುವಾಗ ಕಾಲೇಜು ಬಳಿ ಇರುವ ಡಿವೈಡರ್ ಗೆ ಬೈಕ್ ಡಿಕ್ಕಿಯಾಗಿ ಕೇರಳ ಮೂಲದ ಇಬ್ಬರು ನರ್ಸಿಂಗ್ ವಿದ್ಯಾರ್ಥಿಗಳು ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ ಸ್ಥಳಕ್ಕೆ ಕೆಂಗೇರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.








