ಮುಂಬೈ: ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸುವುದನ್ನು ವಿರೋಧಿಸಿದ ಯುವಕನನ್ನು ಮೂವರು ಅಪ್ರಾಪ್ತ ಬಾಲಕರು ಚಾಕುವಿನಿಂದ ಇರಿದು ಕೊಂದಿರುವ ಘಟನೆ ಇಂದು ಮುಂಬೈನಲ್ಲಿ ನಡೆದಿದೆ..
ಆರೋಪಿಗಳಲ್ಲಿ 14 ಮತ್ತು 15 ವರ್ಷದ ಇಬ್ಬರನ್ನು ಬಂಧಿಸಲಾಗಿದ್ದು, 12 ವರ್ಷದ ಮೂರನೇ ಆರೋಪಿಗಾಗಿ ಶೋಧ ನಡೆಸಲಾಗುತ್ತಿದೆ. ಮೃತನನ್ನು 21 ವರ್ಷದ ಸುನಿಲ್ ನಾಯ್ಡು ಎಂದು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಶಿವಾಜಿ ನಗರದ ಪಾರೇಖ್ ಕಾಂಪೌಂಡ್ ಬಳಿಯ ತೆರೆದ ಮೈದಾನದಲ್ಲಿ 12 ವರ್ಷದ ಬಾಲಕ ಗಾಜಿನ ಬಾಟಲಿಯಲ್ಲಿ ಪಟಾಕಿ ಸಿಡಿಸುತ್ತಿದ್ದಾಗ, ನಾಯ್ಡು ಅದನ್ನು ವಿರೋಧಿಸಿದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ. ಇದಾದ ಕೆಲವೇ ಹೊತ್ತಿಗೆ ಈ ಬಾಲಕ ತನ್ನ 5 ವರ್ಷದ ಸಹೋದರ ಮತ್ತು 14 ವರ್ಷದ ಸ್ನೇಹಿತನೊಂದಿಗೆ ಸೇರಿಕೊಂಡರು ಸಂತ್ರಸ್ತನನ್ನು ಥಳಿಸಿದ್ದಾರೆ. ಈ ವೇಳೆ 15 ವರ್ಷದ ಬಾಲಕ ಸುನಿಲ್ ನಾಯ್ಡುಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ನಾಯ್ಡುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಆತ ಮೃತಪಟ್ಟಿದ್ದಾನೆ.
BIG BREAKING NEWS: ಶಿವಮೊಗ್ಗದಲ್ಲಿ ಚಾಕುವಿನಿಂದ ಚುಚ್ಚಿ ವ್ಯಕ್ತಿಯ ಕೊಲೆ; ಆರೋಪಿ ಪತ್ತೆಗೆ ಬಲೆ ಬೀಸಿದ ಪೊಲೀಸರು
BIGG NEWS : ಮಹಿಳೆಯ ನಗ್ನ ಫೋಟೊ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ : ಬೆಂಗಳೂರು ಪೊಲೀಸರಿಂದ ಆರೋಪಿಯ ಅರೆಸ್ಟ್