Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಿದೇಶಿ ಪ್ರವಾಸಕ್ಕೆ ರಾಹುಲ್ ಗಾಂಧಿ 60 ಕೋಟಿ ರೂ. ಖರ್ಚು ಮಾಡಿದ್ದು ಹೇಗೆ?: ಬಿಜೆಪಿ ಸಂಸದ ಸಂಬಿತ್ ಪಾತ್ರ ಪ್ರಶ್ನೆ

UPSC ಮುಖ್ಯ ಪರೀಕ್ಷೆ ಮಾರ್ಗದರ್ಶಿ: ಪರಿಸರ ಮತ್ತು ಇತಿಹಾಸದ ಪ್ರಮುಖ ವಿಷಯಗಳ ವಿಶ್ಲೇಷಣೆ ಇಲ್ಲಿದೆ

BREAKING : ತೈಲ ಉಳಿತಾಯಕ್ಕೆ ದೆಹಲಿ ಸರ್ಕಾರದ ದಿಟ್ಟ ಹೆಜ್ಜೆ: ನೌಕರರಿಗೆ ವಾರದಲ್ಲಿ 2 ದಿನ ‘ವರ್ಕ್ ಫ್ರಮ್ ಹೋಮ್’

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » ಭಾರತಾದ್ಯಂತ ವಾಣಿಜ್ಯ ಅಟ್ಟೆಸ್ಟೇಶನ್ ಸೇವೆಗಳಿಗೆ ಐಎಸಿಸಿಐಎ ಜೊತೆ ಬಿಎಲ್ಎಸ್ ಇಂಟರ್ನ್ಯಾಷನಲ್ ಒಪ್ಪಂದ
KARNATAKA

ಭಾರತಾದ್ಯಂತ ವಾಣಿಜ್ಯ ಅಟ್ಟೆಸ್ಟೇಶನ್ ಸೇವೆಗಳಿಗೆ ಐಎಸಿಸಿಐಎ ಜೊತೆ ಬಿಎಲ್ಎಸ್ ಇಂಟರ್ನ್ಯಾಷನಲ್ ಒಪ್ಪಂದ

By ವಸಂತ ಬಿ ಈಶ್ವರಗೆರೆ

ಬೆಂಗಳೂರು: ಸರ್ಕಾರಗಳು ಮತ್ತು ನಾಗರಿಕರಿಗೆ ಎಐ ಹಾಗೂ ತಂತ್ರಜ್ಞಾನ ಆಧಾರಿತ ಸೇವೆಗಳನ್ನು ಒದಗಿಸುವ ಪ್ರಮುಖ ಜಾಗತಿಕ ಸಂಸ್ಥೆಯಾದ ಬಿಎಲ್ಎಸ್ ಇಂಟರ್ನ್ಯಾಷನಲ್, ಭಾರತ ಮತ್ತು ಅರಬ್ ದೇಶಗಳ ವಾಣಿಜ್ಯ, ಕೈಗಾರಿಕಾ ಮತ್ತು ಕೃಷಿ ಮಂಡಳಿ (ಐಎಸಿಸಿಐಎ) ಜೊತೆ ತಂತ್ರಜ್ಞಾನದ ಒಪ್ಪಂದ (ಎಂಒಯು) ಮಾಡಿಕೊಂಡಿದೆ.

ಈ ಒಪ್ಪಂದದ ಮೂಲಕ ಭಾರತದಲ್ಲಿರುವ 17 ಕೇಂದ್ರಗಳ ಜಾಲದ ಮೂಲಕ ವಾಣಿಜ್ಯ ಅಟ್ಟೆಸ್ಟೇಶನ್ ಹಾಗೂ ಸಂಬಂಧಿತ ಸೇವೆಗಳನ್ನು ವಿಸ್ತರಿಸಲಾಗುತ್ತದೆ. ಇದರ 22 ಅರಬ್ ಲೀಗ್ ದೇಶಗಳೊಂದಿಗೆ ವ್ಯಾಪಾರ ನಡೆಸುತ್ತಿರುವ ಭಾರತೀಯ ಉದ್ಯಮಿಗಳಿಗೆ ದಾಖಲೆ ಪ್ರಕ್ರಿಯೆಗಳು ಇನ್ನಷ್ಟು ವೇಗವಾಗಿ, ಸುಲಭವಾಗಿ ಮತ್ತು ಪರಿಣಾಮಕಾರಿಯಾಗಿ ಲಭ್ಯವಾಗಲಿವೆ.

ಈ ಒಪ್ಪಂದಕ್ಕೆ ಐಎಸಿಸಿಐಎ ಕಾರ್ಯದರ್ಶಿ (ಹುದ್ದೆ ನಿರ್ವಹಣೆಯಲ್ಲಿ) ಡಾ. ವಾಇಲ್ ಎಸ್. ಎಚ್. ಅವ್ವಾದ್ ಹಾಗೂ ಬಿಎಲ್ಎಸ್ ಇಂಟರ್ನ್ಯಾಷನಲ್ ಸಂಸ್ಥೆಯ ಸ್ಟ್ರಾಟೆಜಿಕ್ ಮಾರ್ಕೆಟ್ಸ್, ಸರ್ಕಾರಗಳು ಮತ್ತು ಸಂಸ್ಥೆಗಳ ಮುಖ್ಯ ಕಾರ್ಯಾಚರಣಾಧಿಕಾರಿ ಚಾರು ಖೋಸ್ಲಾ ಅವರ ಸಮ್ಮುಖದಲ್ಲಿ ಅಧಿಕೃತ ಮುದ್ರೆ ಬಿದ್ದಿತು.

ಇತ್ತೀಚೆಗೆ ಭಾರತ ಸರ್ಕಾರದ ವಿದೇಶಿ ವ್ಯಾಪಾರ ಮಹಾನಿರ್ದೇಶನಾಲಯ (ಡಿಜಿಎಫ್ಟಿ)ದಿಂದ ಅಧಿಕೃತ ಮಾನ್ಯತೆ ಪಡೆದಿರುವ ಐಎಸಿಸಿಐಎ, ಇದು ಪ್ರಮುಖ ಸಾಧನೆಯಾಗಿದೆ. ಈ ಮಾನ್ಯತೆ ಮೂಲಕ ಐಎಸಿಸಿಐಎಗೆ ನಾನ್-ಪ್ರಿಫರೆನ್ಷಿಯಲ್ ಸರಕು ಮೂಲ ಪ್ರಮಾಣಪತ್ರಗಳನ್ನು (Certificate of Origin) ನೀಡುವ ಹಾಗೂ ವಾಣಿಜ್ಯ ದಾಖಲೆಗಳ ಅಟ್ಟೆಸ್ಟೇಶನ್ ನೆರವೇರಿಸುವ ಅಧಿಕಾರ ದೊರೆತಿದೆ. ಇದರಿಂದ ಭಾರತ ಮತ್ತು ಅರಬ್ ರಾಷ್ಟ್ರಗಳ ನಡುವಿನ ವ್ಯಾಪಾರ ಪ್ರಕ್ರಿಯೆಗಳು ಇನ್ನಷ್ಟು ಸುಗಮವಾಗಲಿವೆ ಮತ್ತು ದ್ವಿಪಕ್ಷೀಯ ವ್ಯಾಪಾರ ವೃದ್ಧಿಗೆ ಉತ್ತೇಜನ ನೀಡಲಿದೆ.

ಬಿಎಲ್ಎಸ್ ಇಂಟರ್ನ್ಯಾಷನಲ್ ಸಂಯುಕ್ತ ವ್ಯವಸ್ಥಾಪಕ ನಿರ್ದೇಶಕ ಶಿಖರ್ ಅಗ್ಗರ್ವಾಲ್ ಮಾತನಾಡಿ, “ಈ ಸಹಭಾಗಿತ್ವವು ವಿಶ್ವಮಟ್ಟದ ಸಂಪರ್ಕವನ್ನು ಸುಗಮಗೊಳಿಸುವ ನಮ್ಮ ಪ್ರಯಾಣದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿದೆ. ಐಎಸಿಸಿಐಎ ಜೊತೆ ಕೈಜೋಡಿಸುವ ಮೂಲಕ ಭಾರತ ಮತ್ತು ಅರಬ್ ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧಗಳನ್ನು ಮತ್ತಷ್ಟು ಬಲಪಡಿಸುತ್ತಿದ್ದೇವೆ. ವ್ಯಕ್ತಿಗಳು ಮತ್ತು ಸಂಸ್ಥೆಗಳಿಗಾಗಿ ಸುರಕ್ಷಿತ, ಸುಗಮ ಮತ್ತು ವಿಸ್ತರಿಸಬಹುದಾದ ಅಟ್ಟೆಸ್ಟೇಶನ್ ಸೇವೆಗಳನ್ನು ಒದಗಿಸುವುದು ನಮ್ಮ ಮುಖ್ಯ ಗುರಿಯಾಗಿದೆ,” ಎಂದರು.

ಐಎಸಿಸಿಐಎ ಕಾರ್ಯದರ್ಶಿ ಡಾ. ವಾಇಲ್ ಎಸ್. ಎಚ್. ಅವ್ವಾದ್ ಅವರು, “ಡಿಜಿಎಫ್ಟಿ ಮಾನ್ಯತೆ ನಮಗೆ ಪ್ರಮುಖ ಸಂಸ್ಥಾತ್ಮಕ ಮೈಲುಗಲ್ಲಾಗಿದೆ. ಇದು ಭಾರತ ಮತ್ತು ಅರಬ್ ರಾಷ್ಟ್ರಗಳ ನಡುವಿನ ವಾಣಿಜ್ಯ ವಿನಿಮಯದಲ್ಲಿ ನಮ್ಮ ವಿಶ್ವಾಸಾರ್ಹ ಪಾತ್ರವನ್ನು ಮತ್ತಷ್ಟು ಬಲಪಡಿಸುತ್ತದೆ. ಬಿಎಲ್ಎಸ್ ಇಂಟರ್ನ್ಯಾಷನಲ್ ಜೊತೆಗಿನ ಈ ಸಹಭಾಗಿತ್ವದಿಂದ ನಾವು ಸೇವಾ ವ್ಯಾಪ್ತಿಯನ್ನು ವಿಸ್ತರಿಸಿ, ಎರಡೂ ಭಾಗದ ಉದ್ಯಮಿಗಳಿಗೆ ಸುಗಮ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ. ಇದು ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳನ್ನು ಹೆಚ್ಚಿಸುವಲ್ಲಿ ಸಹಕಾರಿ ಆಗಲಿದೆ,” ಎಂದು ಹೇಳಿದರು.

ನವದೆಹಲಿ ಕೇಂದ್ರವಾಗಿರುವ ಐಎಸಿಸಿಐಎ, ಭಾರತ ಮತ್ತು 22 ಅರಬ್ ಲೀಗ್ ರಾಷ್ಟ್ರಗಳ ನಡುವಿನ ದೀರ್ಘಕಾಲೀನ ವ್ಯಾಪಾರ, ಹೂಡಿಕೆ ಮತ್ತು ವ್ಯವಹಾರ ಸಹಭಾಗಿತ್ವವನ್ನು ಉತ್ತೇಜಿಸುವ ಪ್ರಮುಖ ವೇದಿಕೆಯಾಗಿದೆ. ಭಾರತ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಹಾಗೂ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಬೆಂಬಲ ಹೊಂದಿರುವ ಈ ಸಂಸ್ಥೆ, ಅರಬ್ ಲೀಗ್‌ನ ಮಾನ್ಯತೆಯೊಂದಿಗೆ ಕಾರ್ಯನಿರ್ವಹಿಸುತ್ತದೆ. ಕೃಷಿ, ಜಾಗತಿಕ ಆಹಾರ ಭದ್ರತೆ ಹಾಗೂ ಸ್ಥಿರ ಸಹಭಾಗಿತ್ವದ ಮೇಲೆ ವಿಶೇಷ ಒತ್ತಡದೊಂದಿಗೆ ಬಿ2ಬಿ, ಬಿ2ಜಿ ಸಂವಾದಗಳು, ನೀತಿ ಚರ್ಚೆಗಳು ಮತ್ತು ವಿವಿಧ ಕ್ಷೇತ್ರಾಧಾರಿತ ಕಾರ್ಯಕ್ರಮಗಳನ್ನು ಉತ್ತೇಜಿಸುತ್ತದೆ.

BREAKING: ಗೋಲ್ಡ್ ಸ್ಮಗ್ಲಿಂಗ್ ಕೇಸಲ್ಲಿ ‘ನಟಿ ರನ್ಯಾ ರಾವ್​​’ಗೆ ಜಾಮೀನು ಮಂಜೂರು, ಇಂದೇ ಜೈಲಿನಿಂದ ಬಿಡುಗಡೆ ಸಾಧ್ಯತೆ

ಮಾಜಿ ಸ್ಪೀಕರ್ ರಮೇಶ್ ಕುಮಾರ್‌ಗೆ ತಾತ್ಕಾಲಿಕ ರಿಲೀಫ್: ಅರಣ್ಯ ಭೂಮಿ ಒತ್ತುವರಿ ತೆರವು ಆದೇಶಕ್ಕೆ ಹೈಕೋರ್ಟ್ ತಡೆ

Share. Facebook Twitter LinkedIn WhatsApp Email

Related Posts

BREAKING : ಗೃಹಿಣಿಯರಿಗೆ ಒಂದೇ ವಾರದಲ್ಲಿ ಡಬಲ್ ಶಾಕ್ : ಅಡುಗೆ ಎಣ್ಣೆ ಬೆನ್ನಲ್ಲೆ, ಗಗನಕ್ಕೇರಿದ ಅಕ್ಕಿ ದರ!

1 Min Read

BREAKING : ದಾವಣಗೆರೆಯಲ್ಲಿ ಘೋರ ದುರಂತ : ಭದ್ರಾ ನಾಲೆಯಲ್ಲಿ ಈಜಲು ಹೋದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು!

1 Min Read

BREAKING: ಮೇ.24ರಂದು ನಿಗದಿಯಾಗಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ: KEA ಮಾಹಿತಿ

1 Min Read
Recent News

ವಿದೇಶಿ ಪ್ರವಾಸಕ್ಕೆ ರಾಹುಲ್ ಗಾಂಧಿ 60 ಕೋಟಿ ರೂ. ಖರ್ಚು ಮಾಡಿದ್ದು ಹೇಗೆ?: ಬಿಜೆಪಿ ಸಂಸದ ಸಂಬಿತ್ ಪಾತ್ರ ಪ್ರಶ್ನೆ

UPSC ಮುಖ್ಯ ಪರೀಕ್ಷೆ ಮಾರ್ಗದರ್ಶಿ: ಪರಿಸರ ಮತ್ತು ಇತಿಹಾಸದ ಪ್ರಮುಖ ವಿಷಯಗಳ ವಿಶ್ಲೇಷಣೆ ಇಲ್ಲಿದೆ

BREAKING : ತೈಲ ಉಳಿತಾಯಕ್ಕೆ ದೆಹಲಿ ಸರ್ಕಾರದ ದಿಟ್ಟ ಹೆಜ್ಜೆ: ನೌಕರರಿಗೆ ವಾರದಲ್ಲಿ 2 ದಿನ ‘ವರ್ಕ್ ಫ್ರಮ್ ಹೋಮ್’

BREAKING : ಗೃಹಿಣಿಯರಿಗೆ ಒಂದೇ ವಾರದಲ್ಲಿ ಡಬಲ್ ಶಾಕ್ : ಅಡುಗೆ ಎಣ್ಣೆ ಬೆನ್ನಲ್ಲೆ, ಗಗನಕ್ಕೇರಿದ ಅಕ್ಕಿ ದರ!

State News
KARNATAKA

BREAKING : ಗೃಹಿಣಿಯರಿಗೆ ಒಂದೇ ವಾರದಲ್ಲಿ ಡಬಲ್ ಶಾಕ್ : ಅಡುಗೆ ಎಣ್ಣೆ ಬೆನ್ನಲ್ಲೆ, ಗಗನಕ್ಕೇರಿದ ಅಕ್ಕಿ ದರ!

By ಸುರೇಶ್‌ KARNATAKA 1 Min Read

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ಗ್ರಾಹಕರ ನಿದ್ದೆಗೆಡಿಸಿದೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು ಚಿನ್ನ…

BREAKING : ದಾವಣಗೆರೆಯಲ್ಲಿ ಘೋರ ದುರಂತ : ಭದ್ರಾ ನಾಲೆಯಲ್ಲಿ ಈಜಲು ಹೋದ ಇಬ್ಬರು ಇಂಜಿನಿಯರಿಂಗ್ ವಿದ್ಯಾರ್ಥಿಗಳು ಸಾವು!

BREAKING: ಮೇ.24ರಂದು ನಿಗದಿಯಾಗಿದ್ದ MBA, MCA ಪ್ರವೇಶ ಪರೀಕ್ಷೆ ಮುಂದೂಡಿಕೆ: KEA ಮಾಹಿತಿ

‘ಇವನ್ಯಾವನೋ ಬಿಸಿಲಲ್ಲಿ ಎಳೆನೀರು ತರಬೇಕಲ್ವಾ?’ : ನೀರು ಕೊಟ್ಟ ಅಧಿಕಾರಿ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.