ಚಾಮರಾಜನಗರ: ಸಚಿವ ವಿ ಸೋಮಣ್ಣ ( Minister V Somanna ) ಮಹಿಳೆಗೆ ಕಪಾಳಮೋಕ್ಷ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ. ಇದೀಗ ಕಪಾಳಮೋಕ್ಷಕ್ಕೆ ಒಳಗಾದಂತ ಮಹಿಳೆಯೇ, ಸಚಿವರು ನನ್ನ ಕೆನ್ನೆಗೆ ಹೊಡೆದಿಲ್ಲ. ನನ್ನ ಕಾಲಿಗೆ ಬೀಳಬೇಡ. ಸಮಸ್ಯೆ ಸರಿ ಮಾಡಿಸಿಕೊಡುತ್ತೇನೆ ಹೋಗು ಎಂಬುದಾಗಿ ಕೆನ್ನ ಸವರಿ ಕಳುಹಿಸಿದ್ದು ಎಂಬುದಾಗಿ ಯೂಟರ್ನ್ ಹೊಡೆದಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದಂತ ಕೆಂಪಮ್ಮ, ಸಚಿವ ವಿ.ಸೋಮಣ್ಣ ಅವರನ್ನು ನಿವೇಶನ ಸಂಬಂಧ ಸಮಸ್ಯೆ ಆಗಿದ್ದರಿಂದ ಕೇಳೋದಕ್ಕೆ ಮಗು ಎತ್ತಿಕೊಂಡು ಹೋಗಿದ್ದೆ. ಮಗು ಕೆಳಗೆ ಇಳಿಸಿ, ಸಚಿವರ ಕಾಲಿಗೆ ಬೀಳೋದಕ್ಕೆ ಹೋಗಾದ ಹೀಗೆ ಮಾಡಬೇಡ ಅಂತ ಕೈ ಹಿಡಿದು ಎತ್ತಿ, ಕೆನ್ನೆ ಸವರಿ ಕಳುಹಿಸಿದರು ಎಂದಿದ್ದಾರೆ.
ನಾನು ನಿವೇಶನ ಕೋರಿ ಅರ್ಜಿ ಸಲ್ಲಿಸಿದ್ದೆ. ನನ್ನ ಜಾತಿ ಮತ್ತು ಆದಾಯ ಪ್ರಮಾಣ ಪತ್ರದಲ್ಲಿ ಸಮಸ್ಯೆ ಆಗಿದ್ದರಿಂದ ನಿವೇಶನ ಹಂಚಿಕೆ ಆಗಿರಲಿಲ್ಲ. ಈ ಸಮಸ್ಯೆಯಿಂದಾಗಿಯೇ ಅವರು ಇಲ್ಲಿಗೆ ಬಂದಿದ್ದರಿಂದ ಕೇಳುವುದಕ್ಕೆ ಹೋಗಿದ್ದೆ. ನಾನು ಕೇಳಿದ ನಂತ್ರ ಸ್ಥಳದಲ್ಲಿಯೇ ನನಗೆ ನಿವೇಷನ ಕೊಡಿಸಿದ್ದಾರೆ. ಅವರಿಂದ ಒಳ್ಳೆಯದು ಆಗಿದೆಯೇ ಹೊರತು ನನಗೆ ಕೆಟ್ಟದ್ದಾಗಿಲ್ಲ. ಸಚಿವರು ನನಗೆ ಕಪಾಳಮೋಕ್ಷ ಕೂಡ ಮಾಡಿಲ್ಲ ಎಂಬುದಾಗಿ ಸ್ಪಷ್ಟ ಪಡಿಸಿದ್ದಾರೆ.