ಬೆಂಗಳೂರು : ಮದುವೆ ಮಂಟಪದಲ್ಲಿ ಒಂದು ಕೋಟಿ ಮೌಲ್ಯದ ಚಿನ್ನಾಭರಣ ಕಳವು ಆಗಿರುವ ಘಟನೆ ಬೆಂಗಳೂರಿನ ಎಸ್ ಡಿ ಪಿ ಪ್ಯಾಲೇಸ್ ಕಲ್ಯಾಣ ಮಂಟಪದಲ್ಲಿ ಈ ಒಂದು ಘಟನೆ ನಡೆದಿದೆ. ಅವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ 22ರಂದು ನಡೆದಿರುವ ಕಳ್ಳತನ ಪ್ರಕರಣ ಇದೀಗ ತಡವಾಗಿ ಬೆಳಕಿಗೆ ಬಂದಿದೆ.
ಅಮೆರಿಕಾದಲ್ಲಿ ವೈದ್ಯೆ ಆಗಿರುವ ಶ್ರೀದೇವಿ ಎಂಬುವವರ ಚಿನ್ನಾಭರಣ ಕಳ್ಳತನ ಆಗಿದೆ. ಸುಮಾರು ಒಂದು ಕೋಟಿ ಮೌಲ್ಯದ 750 ಗ್ರಾಂ ಚಿನ್ನಾಭರಣ ಕಳ್ಳತನ ಆಗಿದೆ. ಪರಿಚಯಸ್ತರೆ ಚಿನ್ನಾಭರಣವನ್ನು ಕಳ್ಳತನ ಮಾಡಿರುವ ಶಂಕೆ ವ್ಯಕ್ತವಾಗಿದೆ. ಅಮೆರಿಕಾದಿಂದ ವೈದ್ಯೆ ಶ್ರೀದೇವಿ ಅಕ್ಕನ ಮಗನ ಮದುವೆಗೆ ಬೆಂಗಳೂರಿಗೆ ಬಂದಿದ್ದರು. ಏಪ್ರಿಲ್ 22ರಂದು ಶ್ರೀದೇವಿ ಆರತಕ್ಷತೆ ಕಾರ್ಯಕ್ರಮಕ್ಕೆ ಬಂದಿದ್ದರು.
ತಮ್ಮ ರೂಮ್ ಲಾಕ್ ಮಾಡಿ ಶ್ರೀದೇವಿ ಆರತಕ್ಷತೆಗೆ ಹೋಗಿದ್ದಾರೆ. ಬಳಿಕ ರಿಸೆಪ್ಶನ್ ಮುಗಿಸಿ ಬರುವಷ್ಟರಲ್ಲಿ ರೂಮ್ನಲ್ಲಿ ಇದ್ದಂತಹ ಚಿನ್ನಾಭರಣ ಕಳ್ಳತನ ಆಗಿದೆ. ಘಟನೆ ಸಂಭಂದ ಅವಲಹಳ್ಳಿ ಠಾಣೆಗೆ ವೈದ್ಯೆ ಶ್ರೀದೇವಿ ದೂರು ನೀಡಿದ್ದಾರೆ. ಕೆಲಸದಾಕೆಯ ಮೇಲೆ ಅನುಮಾನ ವ್ಯಕ್ತಪಡಿಸಿ ಶ್ರೀದೇವಿ ದೂರು ನೀಡಿದ್ದಾರೆ. ಸದ್ಯ ಮದುವೆಗೆ ಬಂದಿದ್ದವರ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.








