ಗದಗ : ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಮುಕ್ತಿ ಮಠಕ್ಕೆ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಭೇಟಿ ನೀಡಿ ಧ್ಯಾನ, ಜಪ ಮಾಡಿದ್ದಾರೆ. ಮಠದ ಶ್ರೀಗಳದ ಲಿಂಗೈಕ್ಯ ವೀರ ಗಂಗಾಧರ ಶ್ರೀಗಳ ಮಠಕ್ಕೆ ಇಂದು ಭೇಟಿ ನೀಡಿ ಧ್ಯಾನ ಜಪ ಮಾಡಿದರು. ಮುಕ್ತಿ ಮಂದಿರದ ಭೇಟಿ ಬಳಿಕ ಡಿಸಿಎಂ ಡಿಕೆ ಶಿವಕುಮಾರ್ ದೆಹಲಿ ಪ್ರಯಾಣ ಬೆಳೆಸಲಿದ್ದಾರೆ.
ನೊಣವಿನ ಕೆರೆ ಶ್ರೀಗಳ ಅಣತಿಯಂತೆ ಅಜ್ಜಯ್ಯನ ದರ್ಶನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಆಶೀರ್ವಾದ ಪಡೆದು ಧ್ಯಾನ, ಜಪ ಮಾಡಿದರು. ಅಜ್ಜಯ್ಯನ ಹೆಸರಿನಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸಿದ್ದರು. ಹಾಗಾಗಿ ನೊಣವಿನ ಕೆರೆ ಶ್ರೀಗಳ ಅಣತಿಯಂತೆ ಇದೀಗ ಅಧ್ಯಯನ ದರ್ಶನಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಭೇಟಿ ನೀಡಿದ್ದಾರೆ.
ಇನ್ನು ನೊಣವಿನಕೆರೆ ಶ್ರೀಗಳು ಡಿಸಿಎಂ ಡಿಕೆ ಶಿವಕುಮಾರ್ ಮುಖ್ಯಮಂತ್ರಿ ಆಗಲಿ ಅನುವ ವಿಚಾರವಾಗಿ ಮಾತನಾಡಿದ ಅವರು, ನಾನು ಸದ್ಯ ಏನು ಮಾತನಾಡುವುದಿಲ್ಲ. ಇದಕ್ಕೆಲ್ಲ ಕಾಲ ಉತ್ತರ ಕೊಡುತ್ತದೆ. ನಾನು ಇಲ್ಲಿ ಕುಳಿತಿದ್ದೆ ಅಲ್ವಾ ಆ ಶಕ್ತಿಯ ಬಗ್ಗೆ ನನಗೆ ಮಾತ್ರ ಗೊತ್ತು. ಅದಕ್ಕಾಗಿಯೇ ನಾನು ಅಧಿಕೃತವಾಗಿ ಇಶ್ಯೂ ಮಾಡಿಲ್ಲ ಇದು ವಿಶೇಷವಾಗಿ ಪವಿತ್ರವಾದ ಸ್ಥಳವಾಗಿದೆ.
ಮಠದ ಆಶೀರ್ವಾದ ಪಡೆದಿದ್ದೇನೆ. ದೊಡ್ಡ ಶಕ್ತಿ ಬಂದಿದೆ. ಬಿಡುವು ಸಿಕ್ಕಾಗ ಪುಸ್ತಕ ಬರೆದ ಸಮಾಜಕ್ಕೆ ತಿಳಿಸುತ್ತೇನೆ. ಭಕ್ತನಿಗೂ ಭಗವಂತನಿಗೂ ವ್ಯವಹಾರ ಮಾಡುವಂತಹ ಸ್ಥಳ ಇದು. ವ್ಯವಹಾರ ಮಾಡುವ ಸ್ಥಳವೇ ದೇವಾಲಯ ಆಗಿದೆ ಯಾರು ಸಹ ಧರ್ಮ ಬೇಡ ಅನ್ನುವುದಿಲ್ಲ. ಅವರವರ ಧರ್ಮ ಕಾಪಾಡುತ್ತಾರೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದರು.
ಇದೆ ವೇಳೆ ಮುಖ್ಯಮಂತ್ರಿ ಮಠದ ವಿಮಲರೇಣುಕಾ ವೀರಮುಕ್ತಿ ಮುನಿ ಶ್ರೀಗಳು ಮಾತನಾಡಿ, ಮುಖ್ಯಮಂತ್ರಿ ಸ್ಥಾನದ ವಿಚಾರವಾಗಿ ಡಿಕೆ ಶಿವಕುಮಾರ್ ತಮ್ಮ ತನು ಮನವನ್ನು ಗುರುಗಳಿಗೆ ಅರ್ಪಣೆ ಮಾಡಿದ ಗುರುಗಳು ಸಹ ಅವರಿಗೆ ಹರಸಿ ಆಶೀರ್ವಾದ ಮಾಡಿದ್ದಾರೆ. ಮುಂದಿನ ದಿನಮಾನಗಳಲ್ಲಿ ಶೀಘ್ರದಲ್ಲಿ ಅವರು ದೊಡ್ಡಹುದ್ದೆ ಅಲಂಕರಿಸಲಿ ಎಂದು ಪರೋಕ್ಷವಾಗಿ ಮುಖ್ಯಮಂತ್ರಿ ಆಗಲಿ ಎಂದು ಶ್ರೀಗಳು ಹೇಳಿಕೆ ನೀಡಿದರು.








