Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಭಾರತದ ಪರಮಾಣು ಬತ್ತಳಿಕೆಯಲ್ಲಿ 190 ಅಣ್ವಸ್ತ್ರಗಳು: ಪಾಕಿಸ್ತಾನವನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ ಭಾರತ : SIPRI ವರದಿ

​ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಭಾರತ ಸರ್ಕಾರದಿಂದ ಎಚ್ಚರಿಕೆ: ಅನಗತ್ಯ ಪ್ರಯಾಣಗಳನ್ನು ತಪ್ಪಿಸಲು ಸೂಚನೆ

BREAKING: ​ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ: 8 ಕಾರ್ಮಿಕರ ದುರ್ಮರಣ, ಹಲವರಿಗೆ ಗಂಭೀರ ಗಾಯ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BIG NEWS : ರಾಜ್ಯದ 6 , 7ನೇ ತರಗತಿ ವಿದ್ಯಾರ್ಥಿಗಳಿಗೆ ‘ಮರುಸಿಂಚನ’ ಕಾರ್ಯಕ್ರಮ : ‘ಶಿಕ್ಷಣ ಇಲಾಖೆ’ ಮಹತ್ವದ ಆದೇಶ.!
KARNATAKA

BIG NEWS : ರಾಜ್ಯದ 6 , 7ನೇ ತರಗತಿ ವಿದ್ಯಾರ್ಥಿಗಳಿಗೆ ‘ಮರುಸಿಂಚನ’ ಕಾರ್ಯಕ್ರಮ : ‘ಶಿಕ್ಷಣ ಇಲಾಖೆ’ ಮಹತ್ವದ ಆದೇಶ.!

By kannadanewsnow57

ಬೆಂಗಳೂರು : 2024-25ನೇ ಸಾಲಿನಲ್ಲಿ ಕರ್ನಾಟಕ ರಾಜ್ಯದ ಮಹತ್ವಾಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಶಾಲೆಗಳಲ್ಲಿ 6 ಮತ್ತು 7ನೇ ತರಗತಿಗಳ ವಿದ್ಯಾರ್ಥಿಗಳಿಗೆ ಮರುಸಿಂಚನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವ ಬಗ್ಗೆ ಶಿಕ್ಷಣ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಮೇಲ್ಕಂಡ ವಿಷಯ ಮತ್ತು ಉಲ್ಲೇಖದನ್ವಯ ಮುಖ್ಯಮಂತ್ರಿಗಳ 2024-25ನೇ ಸಾಲಿನ ಆಯವ್ಯಯದಲ್ಲಿ ಘೋಷಿತವಾದ “ಮರುಸಿಂಚನ” ಕಾರ್ಯಕ್ರಮವನ್ನು ಮಹತ್ವಾಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಶಾಲೆಗಳ 6 ಮತ್ತು 7ನೇ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದು, ಈಗಾಗಲೇ ರಾಜ್ಯಮಟ್ಟದ ಮತ್ತು ಜಿಲ್ಲಾ ಮಟ್ಟದ ತರಬೇತಿಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ. ಈ ಕಾರ್ಯಕ್ರಮದ ಪ್ರಮುಖ ಉದ್ದೇಶ ವಿದ್ಯಾರ್ಥಿಗಳಲ್ಲಿ ಕಲಿಕಾ ನ್ಯೂನತೆಗಳನ್ನು ಸರಿಪಡಿಸುವುದು, ತರಗತಿಗನುಗುಣವಾದ ಕಲಿಕಾ ಫಲಗಳನ್ನು ಸಾಧಿಸಲು ಹಿಂದಿನ ತರಗತಿಗಳ ಕಲಿಕಾ ಫಲಗಳನ್ನು ವೃದ್ಧಿಸುವುದು, ಪ್ರಮಾಣೀಕೃತ ಮೌಲ್ಯಮಾಪನವನ್ನು ಕೈಗೊಳ್ಳುವುದು ಹಾಗೂ 10ನೇ ತರಗತಿಯ ಪರೀಕ್ಷಾ ಫಲಿತಾಂಶವನ್ನು ಗುಣಾತ್ಮಕವಾಗಿ ಸಾಧಿಸುವುದು.

ಇದರ ಮುಂದುವರಿದ ಭಾಗವಾಗಿ, ಮರುಸಿಂಚನ ಕಾರ್ಯಕ್ರಮವನ್ನು ಮಹಾತ್ವಕಾಂಕ್ಷಿ ತಾಲ್ಲೂಕುಗಳ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ತರಗತಿ ಮಟ್ಟದ ಚಟುವಟಿಕೆಗಳನ್ನು ನಡೆಸಬೇಕಾಗಿದೆ. ಮರುಸಿಂಚನ ಕಾರ್ಯಕ್ರಮವನ್ನು ಶಾಲಾ ಮಟ್ಟದ ಚಟುವಟಿಕೆಗಳನ್ನು ದಿನಾಂಕ 23-12-2024 ರಿಂದ ನಡೆಸಲಾಗುವುದು. ಈ ಶೈಕ್ಷಣಿಕ ವರ್ಷದಲ್ಲಿ ಕನ್ನಡ ಭಾಷೆ, ಇಂಗ್ಲೀಷ್ ಭಾಷೆ, ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳ ಬೇಸ್ಟೈನ್(ನೈದಾನಿಕ ಪರೀಕ್ಷೆ) ಹಾಳೆಗಳು, ವಿದ್ಯಾರ್ಥಿಗಳಿಗೆ “ವಿದ್ಯಾರ್ಥಿಗಳ ಚಟುವಟಿಕೆ ಪುಸ್ತಕ” ಮತ್ತು ಶಿಕ್ಷಕರಿಗೆ “ಶಿಕ್ಷಕರ ಕೈಪಿಡಿ” ಗಳನ್ನು ಪ್ರತಿ ವಿಷಯಕ್ಕೆ ನೀಡಲಾಗಿದೆ. ಮರುಸಿಂಚನ ಕಾರ್ಯಕ್ರಮದ ಚಟುವಟಿಕೆಗಳನ್ನು ತರಗತಿಯಲ್ಲಿ ನಿಗದಿಪಡಿಸಿರುವ ಶಿಕ್ಷಕರ ಕೈಪಿಡಿಯನ್ನು ಅನುಸರಿಸಿ ವಿದ್ಯಾರ್ಥಿಗಳು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಶಿಕ್ಷಕರು, ಕಾರ್ಯಪ್ರವೃತರಾಗಬೇಕಾಗಿದೆ. ಈ ಎಲ್ಲಾ ಚಟುವಟಿಕೆಗಳ ಕಾರ್ಯಸೂಚಿಯನ್ನು ಈ ಪತ್ರದ ಜೊತೆಯಲ್ಲಿ ಲಗತ್ತಿಸಲಾಗಿದೆ. ಶಿಕ್ಷಕರು, ಮುಖ್ಯಶಿಕ್ಷಕರು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಕಾರ್ಯಸೂಚಿಯನ್ನು ಗಣನೆಗೆ ತೆಗೆದುಕೊಂಡು, ಪ್ರತಿಚಟುವಟಿಕೆಯನ್ನು ನಿಗಧಿತ ದಿನಾಂಕದ ಒಳಗೆ ಕಾರ್ಯರೂಪಕ್ಕೆ ತರುವಂತೆ ಈ ಮೂಲಕ ಸೂಚಿಸಲಾಗಿದೆ.

2024-25ನೇ ಸಾಲಿನ ರೂಪಣಾತ್ಮಕ ಮೌಲ್ಯಮಾಪನ 3ರನ್ನು ಸಾಂಪ್ರದಾಯಕವಾಗಿ ನಡೆಸದೆ, ಮರುಸಿಂಚನ ಕಾರ್ಯಕ್ರಮದ ನೈದಾನಿಕ ಪರೀಕ್ಷೆಯ ಕೈಗೊಂಡು ನಂತರ ಅದರ ಅಂಕಗಳನ್ನು ರೂಪಣಾತ್ಮಕ ಮೌಲ್ಯಮಾಪನ 3ರ ಗಣನೆಗೆ ತೆಗೆದುಕೊಳ್ಳುವುದು. ರೂಪಣಾತ್ಮಕ ಮೌಲ್ಯಮಾಪನ 3- ಶ್ರೇಣಿಗಳನ್ನು ಈ ಕೆಳಕಂಡಂತೆ ಪರಿವರ್ತಿಸಿಕೊಳ್ಳುವುದು ಹಾಗೂ SATS Portal ನಲ್ಲಿ ಇಂದೀಕರಿಸುವುದು.

ಮರುಸಿಂಚನ ಕಾರ್ಯಕ್ರಮವನ್ನು 3 ಹಂತಗಳಲ್ಲಿ ಹಮ್ಮಿಕೊಳ್ಳಲಾಗಿದೆ.

1. ಬುನಾದಿ ಹಂತ : ಈ ಹಂತದಲ್ಲಿ ಶಿಕ್ಷಕರು ಶಿಕ್ಷಕರ ಕೈಪಿಡಿಯನ್ನು ಬಳಸಿಕೊಂಡು ವೇಳಾಪಟ್ಟಿಯಲ್ಲಿ ನೀಡಿರುವ ಚಟುವಟಿಕೆಗಳನ್ನು ಕೈಗೊಂಡು ಪ್ರಸ್ತುತ ತರಗತಿಯ ಹಿಂದಿನ ತರಗತಿಗಳ ಕಲಿಕಾ ಫಲಗಳನ್ನು ವಿದ್ಯಾರ್ಥಿಗಳಲ್ಲಿ ವೃದ್ಧಿಸುವುದು. ಈ ಹಂತದಲ್ಲಿ 12 ಅಧ್ಯಾಯಗಳಿರುತ್ತವೆ. ದಿನಾಂಕ : 27.12.2024 ರಿಂದ 10.01.2025 ರವರೆಗೆ ಈ ಹಂತವನ್ನು ಹಮ್ಮಿಕೊಳ್ಳುವುದು.

2. ಬೆಂಬಲಿತ ಕಲಿಕಾ ಹಂತ : ಈ ಹಂತದಲ್ಲಿ ಶಿಕ್ಷಕರು ತರಗತಿಗನುಗುಣವಾದ ಸಾಮರ್ಥ್ಯಗಳನ್ನು ಗಳಿಸಲು ಚಟುವಟಿಕೆಗಳ ಕೈಗೊಂಡು ಪ್ರಸ್ತುತ ತರಗತಿಯ ಕಲಿಕಾ ಫಲಗಳನ್ನು ವಿದ್ಯಾರ್ಥಿಗಳಲ್ಲಿ ವೃದ್ಧಿಸುವುದು. ಈ ಹಂತದಲ್ಲಿ 24 ಅಧ್ಯಾಯಗಳಿರುತ್ತವೆ. ದಿನಾಂಕ : 13.01.2025 ರಿಂದ 04.03.2025 ರವರೆಗೆ ಈ ಹಂತವನ್ನು ಹಮ್ಮಿಕೊಳ್ಳುವುದು.

3. ಕ್ರೂಢೀಕರಣ ಹಂತ : ಈ ಹಂತದಲ್ಲಿ ಶಿಕ್ಷಕರು ಎಲ್ಲಾ ಅಧ್ಯಾಯಗಳ ಪುನ‌ರ್ ಮನನ ಮಾಡಿ, ವಿದ್ಯಾರ್ಥಿಗಳನ್ನು ಪರೀಕ್ಷೆಗೆ ತಯಾರಿಮಾಡುವುದು.

ಇದರೊಂದಿಗೆ ಲಗತ್ತಿಸಿರುವ ಮರುಸಿಂಚನ ಕಾರ್ಯಕ್ರಮದ ವೇಳಾ ಪಟ್ಟಿಯನ್ನು ಸಂಬಂಧಿಸಿದ ಶಾಲಾ ಮುಖ್ಯ ಶಿಕ್ಷಕರಿಗೆ ನೀಡುವುದು. ಸಂಬಂಧಿಸಿದ ಜಿಲ್ಲೆಗಳ ಎಲ್ಲಾ ಉಪನಿರ್ದೇಶಕರು (ಆಡಳಿತ ಮತ್ತು ಅಭಿವೃದ್ಧಿ) ಶಾಲಾ ಹಂತದಲ್ಲಿ ಸದರಿ ಕಾರ್ಯಕ್ರಮವನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಲು ಕ್ರಮವಹಿಸುವಂತೆ ಈ ಮೂಲಕ ಸೂಚಿಸಲಾಗಿದೆ. ಶಾಲಾ ಮುಖ್ಯ ಶಿಕ್ಷಕರು ಮತ್ತು ಶಿಕ್ಷಕರು ಮರುಸಿಂಚನ ಕಾರ್ಯಕ್ರಮದ ವೇಳಾ ಪಟ್ಟಿಯನ್ನು ಶಾಲಾ ಹಂತದಲ್ಲಿ ನಿಗಧಿಪಡಿಸಿರುವಂತೆ ಅನುಸರಿಸಲು ಸೂಚಿಸುವುದು.

BIG NEWS : ರಾಜ್ಯದ ಎಲ್ಲಾ ಸರ್ಕಾರಿ ಶಾಲೆಗಳಿಗೆ ʻಉಚಿತ ವಿದ್ಯುತ್‌ʼ : ರಾಜ್ಯ ಸರ್ಕಾರ ಅಧಿಕೃತ ಆದೇಶ BIG NEWS: 'Maru-Sinchana' programme for students of classes 6-7 in all government schools in the state: Education Department
Share. Facebook Twitter LinkedIn WhatsApp Email

Related Posts

ಮಾಜಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ವಿರುದ್ಧ ಮುಡಾ ಕೇಸ್ : ವಿಚಾರಣೆ ಜುಲೈ 3ಕ್ಕೆ ಮುಂದೂಡಿದ ಹೈಕೋರ್ಟ್

1 Min Read

GOOD NEWS : ಆಯುಷ್ಮಾನ್ ಯೋಜನೆಯಡಿ APL ಕುಟುಂಬಗಳಿಗೆ ಹೆಚ್ಚಿನ ನೆರವು ನೀಡಲು ಚಿಂತನೆ : ಸಚಿವ ಯು.ಟಿ‌ ಖಾದರ್

2 Mins Read

ಬೆಂಗಳೂರಲ್ಲಿ 5 ಸಾವಿರ ಲಂಚಕ್ಕೆ ಬೇಡಿಕೆ : ಕಾನೂನು ಮಾಪನಶಾಸ್ತ್ರದ ಸಹಾಯಕ ನಿಯಂತ್ರಕಿ ಲೋಕಾಯುಕ್ತ ಬಲೆಗೆ!

1 Min Read
Recent News

​ಭಾರತದ ಪರಮಾಣು ಬತ್ತಳಿಕೆಯಲ್ಲಿ 190 ಅಣ್ವಸ್ತ್ರಗಳು: ಪಾಕಿಸ್ತಾನವನ್ನು ಹಿಂದಿಕ್ಕಿ ಮುನ್ನಡೆ ಸಾಧಿಸಿದ ಭಾರತ : SIPRI ವರದಿ

​ಇಸ್ರೇಲ್‌ನಲ್ಲಿರುವ ಭಾರತೀಯರಿಗೆ ಭಾರತ ಸರ್ಕಾರದಿಂದ ಎಚ್ಚರಿಕೆ: ಅನಗತ್ಯ ಪ್ರಯಾಣಗಳನ್ನು ತಪ್ಪಿಸಲು ಸೂಚನೆ

BREAKING: ​ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆಯಲ್ಲಿ ಭೀಕರ ಅಗ್ನಿ ಅವಘಡ: 8 ಕಾರ್ಮಿಕರ ದುರ್ಮರಣ, ಹಲವರಿಗೆ ಗಂಭೀರ ಗಾಯ

​ಸಾಮಾಜಿಕ ಜಾಲತಾಣದಲ್ಲಿ ಚಿನ್ನದ ಒಡವೆ ಪ್ರದರ್ಶಿಸಿದ ಬೆನ್ನಲ್ಲೇ ಯೂಟ್ಯೂಬರ್ ರಚನಾ ಗುರ್ಜರ್ ಮನೆಗೆ ಕಳ್ಳರ ಕನ್ನ: 8 ಲಕ್ಷ ರೂ. ಮೌಲ್ಯದ ಸೊತ್ತು ದರೋಡೆ

State News
KARNATAKA

ಮಾಜಿ ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ವಿರುದ್ಧ ಮುಡಾ ಕೇಸ್ : ವಿಚಾರಣೆ ಜುಲೈ 3ಕ್ಕೆ ಮುಂದೂಡಿದ ಹೈಕೋರ್ಟ್

By ಸುರೇಶ್‌ KARNATAKA 1 Min Read

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ मुख्यमंत्री ಸಿದ್ದರಾಮಯ್ಯ ಹಾಗೂ ಅವರ ಪತ್ನಿ ಪಾರ್ವತಿ ಅವರ…

GOOD NEWS : ಆಯುಷ್ಮಾನ್ ಯೋಜನೆಯಡಿ APL ಕುಟುಂಬಗಳಿಗೆ ಹೆಚ್ಚಿನ ನೆರವು ನೀಡಲು ಚಿಂತನೆ : ಸಚಿವ ಯು.ಟಿ‌ ಖಾದರ್

ಬೆಂಗಳೂರಲ್ಲಿ 5 ಸಾವಿರ ಲಂಚಕ್ಕೆ ಬೇಡಿಕೆ : ಕಾನೂನು ಮಾಪನಶಾಸ್ತ್ರದ ಸಹಾಯಕ ನಿಯಂತ್ರಕಿ ಲೋಕಾಯುಕ್ತ ಬಲೆಗೆ!

BREAKING : ಶಿವಮೊಗ್ಗದಲ್ಲಿ ಶಾಸಕ ಬಿಕೆ ಸಂಗಮೇಶ ಪುತ್ರನ ಆಪ್ತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ : ಬೆಚ್ಚಿ ಬಿದ್ದ ಜನತೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.